ಜಾಗತಿಕವಾಗಿ ಹೆಚ್ಚು ಸದ್ದು ಮಾಡುತ್ತಿರುವ ಸೋಶಿಯಲ್ ಮೇಸೆಂಜಿಗ್ ಆಪ್ ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟೆಲಿಗ್ರಾಂ ಆಪ್‌ಗೆ ಸಂಕಷ್ಟ ಎದುರಾಗಿದೆ. ರಷ್ಯಾದಲ್ಲಿ ನಿಷೇಧಕ್ಕೆ ಗುರಿಯಾಗಿದೆ. ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳದ ಕಾರಣಕ್ಕೆ ರಷ್ಯಾ ಕೋರ್ಟ್ ಟೆಲಿಗ್ರಾಂ ಆಪ್ ಅನ್ನು ದೇಶದಲ್ಲಿ ನಿಷೇಧಿಸುವಂತೆ ಆದೇಶವನ್ನು ಹೊರಡಿಸಿದೆ.

ಟೆಲಿಗ್ರಾಂ ಆಪ್ ಬಳಕೆದಾರರ ಸುರಕ್ಷತೆಗಾಗಿ ಗೂಢಲಿಪೀಕರಣ ಸೇವೆಯನ್ನು ನೀಡುತ್ತಿದ್ದು, ಆದರೆ ರಷ್ಯಾದ ಫೇಡರ್ ಸೆಕ್ಯೂರಿಟಿ ಸರ್ವೀಸ್ ಟೆಲಿಗ್ರಾಂ ಆಪ್ ಬಳಕೆದಾರರ ಮಾಹಿತಿಯನ್ನು ಪಡೆಯುವ ಸಲುವಾಗಿ ಗೂಢಲಿಪೀಕರಣದ ಕೀಯನ್ನು ನೀಡುವಂತೆ ಕೇಳಿತ್ತು. ಆದರೆ ಟೆಲಿಗ್ರಾಂ ಈ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ನಿಷೇಧಕ್ಕೆ ಗುರಿಯಾಗಿದೆ.

ಟೆಲಿಗ್ರಾಂ ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ ತಕ್ಷಣವೇ ದೇಶದಲ್ಲಿ ನಿಷೇಧಿಸಬೇಕು ಇದು ದೇಶದ ಭದ್ರತೆಗೆ ಸವಾಲು ಹಾಕಲಿದೆ. ಇದರಿಂದಾಗಿ ಟೆಲಿಗ್ರಾಂ ಬಳಕೆಗೆ ತಡೆಒಡ್ಡ ಬೇಕು ಎಂದು ರಷ್ಯಾ ಕೋರ್ಟ್ ತಿಳಿಸಿದೆ ಎನ್ನಲಾಗಿದೆ.

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ಹತ್ತಿಕ್ಕುವ ಸಲುವಾಗಿ 2016 ರಿಂದ ಆಂಟಿ ಟೆರರಿಸಮ್ ಕಾನೂನನ್ನು ಕಠಿಣವಾಗಿ ಜಾರಿಗೆ ತರುತ್ತಿದ್ದು, ಈ ಹಿನ್ನಲೆಯಲ್ಲಿ ಗೂಢಲಿಪೀಕರಣ (ಎನ್‌ಸ್ಕ್ರಿಪ್ಟ್) ಸೇವೆಯನ್ನು ನೀಡುತ್ತಿರು ಮೇಸೆಂಜಿಗ್ ಆಪ್ ಗಳ ಮಾಹಿತಿಯನ್ನು ಪಡೆಯಲು ಮುಂದಾಗಿದೆ. ಇದಕ್ಕೆ ವಿರೋಧಿಸುವ ಆಪ್ ಗಳನ್ನು ನಿಷೇಧಿಸುತ್ತಿದೆ.
ಈ ಕುರಿತು ಪ್ರತಿ ಕ್ರಿಯೆಯನ್ನು ನೀಡುರುವ ಟೆಲಿಗ್ರಾಂ, ನಾವು ಯಾವುದೇ ರೀತಿಯಲ್ಲಿಯೂ ಆದಾಯಕ್ಕಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಜಾಹಿರಾರುಗಳನ್ನು ಮಾರುತ್ತಿಲ್ಲ. ಇದೇ ರೀತಿಯಲ್ಲಿ ಪ್ರೈವಸಿ ಎಂಬುದು ಮಾರಾಟ ವಿಷಯವಲ್ಲ, ಅದು ಮಾನವನ ಮೂಲಭೂತ ಹಕ್ಕು. ಅದನ್ನು ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.