Subscribe to Gizbot

ಸ್ಯಾಮ್ ಸಂಗ್ ನಿಂದ ಮಡಚಬಹುದಾದ ಸ್ಮಾರ್ಟ್ ಫೋನ್

Written By: Lekhaka

ಸ್ಯಾಮ್ ಸಂಗ್ ಮತ್ತೇ ಫೋಲ್ಡಬಲ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ತಯಾರಿಯನ್ನು ನಡೆಸಿದೆ. ಈ ಹಿಂದೆ ಬಾಕ್ಲ್ ಬೆರಿ ಕಿನೋಟ್ ಎಂಬ ಕೀಪ್ಯಾಡ್ ಇರುವ ಸ್ಮಾರ್ಟ್ ಫೋನ್ ಲಾಂಚ್ ಮಾಡಿದ ಮಾದರಿಯಲ್ಲೇ ಸ್ಯಾಮ್ ಸಂಗ್ ಮಡಚಬಹುದಾದ ಫೋನ್ ಅನ್ನು ಮತ್ತೆ ಚಾಲ್ತಿಗೆ ತರಲು ಮುಂದಾಗಿದೆ.

ಸ್ಯಾಮ್ ಸಂಗ್ ನಿಂದ ಮಡಚಬಹುದಾದ ಸ್ಮಾರ್ಟ್ ಫೋನ್

ಈಗಾಗಲೇ ಸ್ಯಾಮ್ ಸಂಗ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದ್ದು, ಗ್ಯಾಲೆಕ್ಸಿ ನೋಟ್ ಸರಣಿಯಲ್ಲೇ ಈ ಮಡಚಬಹುದಾದ ಸ್ಮಾರ್ಟ್ ಫೋನ್ ಅನ್ನು ನೀಡಲಿದೆ ಎನ್ನಲಾಗಿದೆ.

ಈ ಮಡಚಬಹುದಾದ ಸ್ಮಾರ್ಟ್ ಫೋನ್ ಅನ್ನು ಹೊಸ ಮಾದರಿಯಲ್ಲಿ ಲಾಂಚ್ ಮಾಡಲು ಸ್ಯಾಮ್ ಸಂಗ್ ನಿರ್ಧಿರಿಸದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿ ಹಾಕಲಿದೆ ಎನ್ನಲಾಗಿದೆ.

ಭಾರತೀಯರಿಗಾಗಿ ಗೂಗಲ್ ನಿಂದ ಮೊಬೈಲ್ ಪೇಮೆಂಟ್ ಆಪ್: ಸರಳ ಮತ್ತು ಸುರಕ್ಷ

ಈ ಹಿಂದೆಯೇ ಸ್ಯಾಮ್ ಸಂಗ್ ಮಡಚಬಹುದಾದ ಫೋನ್ ಗಳನ್ನು ಲಾಂಚ್ ಮಾಡಿತ್ತು. ಆದರೆ ಸ್ಮಾರ್ಟ್ ಫೋನ್ ನಂತರದಲ್ಲಿ ಪೋಲ್ಡ್ ಫೋನ್ ಗಳನ್ನು ಕೇಳುವವರಿರಲಿಲ್ಲ. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಈ ಫೋನ್ ಗಳಲ್ಲಿಯೂ OLED ಡಿಸ್ ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದ್ದು, ತುಂಬ ದೊಡ್ಡದಾಗಿ ಇರುವ ಬದಲು ಸಣ್ಣದಾಗಿಯೇ ಇರಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮೊಬೈಲ್ ಬಳಕೆದಾರರಿಗೆ ಹೊಸದೊಂದು ಅನುಭವನ್ನು ನೀಡಲಿದೆ.

English summary
As per Samsung's executive, the company is now aiming to launch a foldable phone in the Galaxy Note series next year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot