DSLR ಕ್ಯಾಮೆರಾಗಳನ್ನು ನುಂಗಿ ಹಾಕಲಿದೆ MICL ಕ್ಯಾಮೆರಾಗಳು....!!!

ಇಸ್ಪಾನ್ ಮೊದಲ ಬಾರಿಗೆ 2004ರಲ್ಲಿ ಮಿರರ್ ಲೇಸ್ ಕ್ಯಾಮೆರಾವನ್ನು ಬಿಡುಗಡೆ ಮಾಡಿತು. ಆದರೆ ಇದು ಮಿರರ್ ಲೇಸ್ ಕ್ಯಾಮೆರಾ ಎಂದು ಮಾರ್ಕೆಟ್ ಮಾಡಲು ಹೋಗಲಿಲ್ಲ. ಆದರೆ ಸೆನ್ಸಾರ್ ಅನ್ನು ಲೆನ್ಸ್ ಹಿಂಭಾಗದಲ್ಲಿಯೇ ಇಟ್ಟಿತ್ತು.

By Lekhaka
|

ಸದ್ಯ DSLR ಕ್ಯಾಮೆರಾ ಮತ್ತು ಮಿರರ್ ಲೇಸ್ ಕ್ಯಾಮೆರಾಗಳ ನಡುವೆ ಸ್ಪರ್ಧೆ ಏರ್ಪಟಿದ್ದು, ಎರಡು ಕ್ಯಾಮೆರಾಗಳ ಬಳಕೆದಾರರು ತಮ್ಮದೇ ಶ್ರೇಷ್ಠ ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಈ ಎರಡು ಮಾದರಿಯ ಕ್ಯಾಮೆರಾ ಬಗ್ಗೆ ತಿಳಿದುಕೊಳ್ಳುವ.

DSLR ಕ್ಯಾಮೆರಾಗಳನ್ನು ನುಂಗಿ ಹಾಕಲಿದೆ MICL ಕ್ಯಾಮೆರಾಗಳು....!!!

ಇಸ್ಪಾನ್ ಮೊದಲ ಬಾರಿಗೆ 2004ರಲ್ಲಿ ಮಿರರ್ ಲೇಸ್ ಕ್ಯಾಮೆರಾವನ್ನು ಬಿಡುಗಡೆ ಮಾಡಿತು. ಆದರೆ ಇದು ಮಿರರ್ ಲೇಸ್ ಕ್ಯಾಮೆರಾ ಎಂದು ಮಾರ್ಕೆಟ್ ಮಾಡಲು ಹೋಗಲಿಲ್ಲ. ಆದರೆ ಸೆನ್ಸಾರ್ ಅನ್ನು ಲೆನ್ಸ್ ಹಿಂಭಾಗದಲ್ಲಿಯೇ ಇಟ್ಟಿತ್ತು.

ಇದಾದ ಮೇಲೆ ಒಂದರ ಹಿಂದೆ ಒಂದರಂತೆ ಮಿರರ್ ಲೇಸ್ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದವು. ಲೀಕಾ, ಓಲಾಂಪಸ್, ಫ್ಯೂಜಿ ಫಿಲ್ಮ್, ಪಾನ್ ಟೆಕ್ಸ್, ಪ್ಯಾನಾಸೋನಿಕ್ ಈ ಸಾಲಿನಲ್ಲಿದ್ದವು. 2008 ರ ವೇಳಗೆ ಮಿರರ್ ಲೈಸ್ ಕ್ಯಾಮೆರಾಗಳು ಹೆಚ್ಚು ಚಾಲ್ತಿಗೆ ಬಂದವು.

ಈ ಕ್ಯಾಮೆರಾಗಳ ಗುಣಮಟ್ಟವು ಎಂಡ್ ಅಂಡ್ ಶೂಟ್ ಕ್ಯಾಮೆರಾಗಳಿಗಿಂತ ಹೆಚ್ಚು ಉತ್ತಮವಾಗಿತ್ತು. ಇದೇ ಸಂದರ್ಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಂಮ್ ಅಂಡ್ ಶೂಟ್ ಕ್ಯಾಮೆರಾಗಳ ಬೇಡಿಕೆಯೂ ಅತೀ ಹೆಚ್ಚಾಗಿತ್ತು.

DSLR ಕ್ಯಾಮೆರಾಗಳನ್ನು ನುಂಗಿ ಹಾಕಲಿದೆ MICL ಕ್ಯಾಮೆರಾಗಳು....!!!

ಇದೇ 2010ರಲ್ಲಿ ಸೋನಿ ಕಂಪನಿಯೂ ಮಿರರ್ ಲೇಸ್ ಕ್ಯಾಮೆರಾಗಳನ್ನು ತಯಾರು ಮಾಡಲು ಮುಂದಾಯಿತು. ಮುಂದೆ ಇದೇ ಸೋನಿ ಕಂಪನಿಯ MICL ಗಳು DSLR ಜಾಗವನ್ನು ಆಕ್ರಮಿಸಲಿದೆ ಎನ್ನುವ ವಾದವು ಕೇಳಿ ಬಂದಿದೆ.

DSLR ಕ್ಯಾಮೆರಾಗಳು ತನ್ನದೇ ಆದ ಬಳಕೆದಾರರ ವೃಂದವನ್ನು ಹೊಂದಿದೆ. 2010ರಲ್ಲಿ ಕ್ಯಾನನ್ EOS 5D ಮಾಕ್ಸ್ 2 ಮಾರುಕಟ್ಟೆಯಲ್ಲಿ ಮೆರೆಯುತ್ತಿತ್ತು. ಇದಾದ ನಂತರದಲ್ಲಿ ಕ್ಯಾನನ್ 7D ಸದ್ದು ಮಾಡಲು ಶುರು ಮಾಡಿತ್ತು. ಇದೇ ಸಂದರ್ಭದಲ್ಲಿ ಕ್ಯಾನನ್ ಮತ್ತು ನಿಕಾನ್ ಕಂಪನಿಗಳು ಹೆಚ್ಚಿನ ಬಳಕೆದಾರರಿಗೆ ಗಾಳ ಹಾಕಲು ಶೂರು ಮಾಡಿದವು.

ಆದರೆ ಸೋನಿಯೂ ತನ್ನ MICL ಕ್ಯಾಮೆರಾಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲು ಮುಂದಾಯಿತು. ಅಲ್ಲದೇ DSLR ಕ್ಯಾಮೆರಾಗಳಿಗಿಂತಲೂ ಹೆಚ್ಚು ಸುಲಭವಾಗಿ ಮತ್ತು ಸರಳವಾಗಿ ಬಳಕೆ ಮಾಡಿಕೊಳ್ಳುವಂತೆ ಮಾಡಿತ್ತು.

ಇದಲ್ಲದೇ ಸೋನಿ MICL ಕ್ಯಾಮೆರಾಗಳಲ್ಲಿಯೂ ಫುಲ್ ಫ್ರೆಮ್ ಸೆನ್ಸರಾಗಳನ್ನು ನೀಡಲು ಮುಂದಾಯಿತು. 2012ರಲ್ಲಿ ಸೋನಿಯ ಮಿರರ್ ಲೇಸ್ ಕ್ಯಾಮೆರಾಗಳು DSLR ಜಾಗವನ್ನು ಆಕ್ರಮಿಸಲು ಮುಂದಾದವು.

ಇದಲ್ಲದೇ ಕೇಲವು ಪ್ರೋಫೆಷನಲ್ ಫೋಟೋಗ್ರಾಫರ್ ಗಳು MICL ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾದರು. ಅದರಲ್ಲೂ ಸೋನಿಯ ಹೈ ಎಂಡ್ MICL ಕ್ಯಾಮೆರಾಗಳು ಉತ್ತಮ ಗುಣಮಟ್ಟವನ್ನು ಮತ್ತು ಕಲರ್ಸ್ ಗಳನ್ನು ಹೊಂದಿದೆ.

ಈಗಾಗಲೇ ಕ್ಯಾನನ್ ಮತ್ತು ನಿಕಾನ್ ಗಳು ಮಿರರ್ ಲೇಸ್ ಕ್ಯಾಮೆರಾಗಳನ್ನು ತಯಾರು ಮಾಡಲು ಆಸಕ್ತಿಯನ್ನು ತೋರಿಸುತ್ತಿವೆ ಎನ್ನಲಾಗಿದೆ. ಈಗಾಗಲೇ ಈ ಕಾರ್ಯದಲ್ಲಿ ಮಗ್ನವಾಗಿವೇ.

ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬಳಕೆದಾರರು ಯಾವುದಕ್ಕೇ ಹೆಚ್ಚಿನ ಆಧ್ಯತೆಯನ್ನು ನೀಡುತ್ತಾರೆ ಎನ್ನುವದರ ಮೇಲೆ DSLR ಮತ್ತು MICL ಕ್ಯಾಮೆರಾಗಳ ಭವಿಷ್ಯವು ಅಡಗಿದೆ.

Best Mobiles in India

Read more about:
English summary
Mirrorless cameras have barely seen a decade and a half and are already replacing DSLRs since they offer great picture and video quality.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X