ಆರ್ಕೊಸ್ ಮಕ್ಕಳ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಬಂದಿದೆ

By Varun
|
ಆರ್ಕೊಸ್ ಮಕ್ಕಳ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಬಂದಿದೆ

ಈ ವರ್ಷ ಮಳೆ ಬೆಳೆ ಚೆನ್ನಾಗಿ ಬರುತ್ತೋ ಇಲ್ಲವೋ ಗೊತ್ತಿಲ್ಲ, ಆದ್ರೆ ಟ್ಯಾಬ್ಲೆಟ್ಟುಗಳ ಧಾರೆಯಂತೂಭರಪೂರವಾಗಿ ಆಗಿದೆ. ಎಲ್ಲ ರೀತಿಯ ರೇಂಜ್ ಗಳಲ್ಲಿ, ಸೈಜ್ ಗಳಲ್ಲಿ ಕಂಡು ಕೇಳರಿಯದಂಥ ಟ್ಯಾಬ್ಲೆಟ್ಟುಗಳು ಬಂದಿದ್ದು, ಈಗ ಮಕ್ಕಳಿಗೆಂತಲೇ ಹೊಸ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಅನ್ನು ಹೊರತಂದಿದೆ, ಆರ್ಕೊಸ್ ಎಂಬ ಫ್ರೆಂಚ್ ಕಂಪನಿ.

ಪೋರ್ಟಬಲ್ ಮೀಡಿಯಾ ಪ್ಲೇಯರ್ ಹಾಗು ಡೇಟಾ ಸ್ಟೋರೇಜ್ ಸಾಧನಗಳನ್ನು ಮಾಡುತ್ತಿದ್ದ ಈ ಕಂಪನಿ, ಈಗ ಮಕ್ಕಳಿಗೆ ಎಂತಲೇ ವಿಶೇಷವಾದ ಆರ್ಕೊಸ್ ಚೈಲ್ಡ್ ಪ್ಯಾಡ್ ಹೆಸರಿನ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಅನ್ನು ಹೊರತಂದಿದೆ.

ಮಕ್ಕಳಿಗೆ ವಿಶೇಷವಾಗಿ, ಗೇಮ್ಸ್ ಹಾಗು ಮಲ್ಟಿಮೀಡಿಯಾ ಫೀಚರುಗಳು ಇರುವ ಟ್ಯಾಬ್ಲೆಟ್ ನಲ್ಲಿ 20th ಸೆಂಚುರಿ ಫಾಕ್ಸ್ ನ ಚಿಪ್ ಮಂಕ್ 3 ಗೇಮ್, ಅದರ ವಾಲ್ ಪೇಪರ್, ಸೀನ್ ಗಳ ಕ್ಲಿಪ್ಪಿಂಗ್ ಗಳು ಹಾಗು ಈ ಫಿಲಂ ನ ಚಿತ್ರಗಳ ಸಂಗ್ರಹ ಇದೆ.

ಇದಷ್ಟೇ ಅಲ್ಲದೆ 6 ತಿಂಗಳ ಮಟ್ಟಿಗೆ parental control ಕೂಡ ಇದೆ. ಆಂಗ್ರಿ ಬರ್ಡ್ಸ್ ನಂಥಹ ಫೇಮಸ್ ಗೇಮ್ ಕೂಡಾ ಇದ್ದು, ಸಾಮಾನ್ಯ ಜ್ಞಾನ ಹಾಗು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಮಾಹಿತಿ ಕೂಡ ಇದರಲ್ಲಿ ಲೋಡ್ ಮಾಡಲಾಗಿದೆ.

ಇದರ ಆಂತರಿಕ ಮೆಮೊರಿಯಿಂದ 40,000 ಫೋಟೋಗಳು, 5 ಚಲನಚಿತ್ರಗಳು, ಹಾಗು 2,000 ಹಾಡುಗಳನ್ನು ಸಂಗ್ರಹ ಮಾಡಬಹುದಾದ ಸಾಮರ್ಥ್ಯವಿದೆ.

ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:

  • 7 ಇಂಚು ಟಚ್ ಸ್ಕ್ರೀನ್

  • 800 X 480 ರೆಸಲ್ಯೂಶನ್

  • 4 GB ಆಂತರಿಕ ಮೆಮೊರಿ

  • ಮೈಕ್ರೊ SD ಕಾರ್ಡ್ ಸಪೋರ್ಟ್ ಹಾಗು ಫ್ಲಾಶ್

  • 1 GHz ARM ಕಾರ್ಟೆಕ್ಸ್ A8 ಪ್ರೊಸೆಸರ್

  • 1 GB ರಾಮ್

  • ಆಡಿಯೋ ಮತ್ತು ವಿಡಿಯೋ ಪ್ಲೇಯರ್ ಹಾಗು ವೆಬ್ ಕ್ಯಾಮ್

  • ವೈಫೈ ಹಾಗು USB 2.0

  • ಲಿ-ಪಾಲಿಮರ್ ಬ್ಯಾಟರಿ.

ಈ ಟ್ಯಾಬ್ಲೆಟ್ ನ ಬೆಲೆ 7,000 ರೂಪಾಯಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X