ಬರ್ತಿದೆ ಬ್ರೈನ್‌ನೆಟ್‌, ಮೆದುಳಿನಿಂದ ಮೆದುಳಿಗೆ ನೇರ ಸಂಪರ್ಕ..!

By Gizbot Bureau
|

ಟೆಲಿಪತಿಕ್‌ ಸಂವಹನ ವಾಸ್ತವಕ್ಕೆ ಹತ್ತಿರವಾಗುತ್ತಿದ್ದು, ವಾಷಿಂಗ್‌ಟನ್‌ ವಿಶ್ವವಿದ್ಯಾಲಯದ ಹೊಸ ಸಂಶೋಧನೆ ಬ್ರೈನ್‌ ನೆಟ್‌ಗೆ ಭಾಷ್ಯ ಬರೆದಿದೆ. ಕೇವಲ ಮೆದುಳಿನ ಸಹಾಯದಿಂದ ಮೂವರು ವ್ಯಕ್ತಿಗಳು ಸಮಸ್ಯೆಯನ್ನು ಬಗೆಹರಿಸುವ ಕ್ರಮವನ್ನು ಈ ಸಂಶೋಧನೆ ಕಂಡುಹಿಡಿದಿದೆ. ಹೌದು, ತಂತ್ರಜ್ಞಾನ ಹಾಗೂ ವಿಜ್ಞಾನ ಲೋಕಕ್ಕೆ ಬ್ರೈನ್‌ನೆಟ್‌ ಎಂಬ ಹೊಸ ಪದವೊಂದು ಪರಿಚಯವಾಗುತ್ತಿದೆ.

ಬ್ರೈನ್‌ನೆಟ್‌

ಈ ಬ್ರೈನ್‌ನೆಟ್‌ನಲ್ಲಿ ಟೆಟ್ರಿಸ್‌ನಂತಹ ಆಟವನ್ನು ಮೆದುಳಿನಿಂದ ಮೆದುಳಿನ ಇಂಟರ್‌ಪೇಸ್‌ ಮೂಲಕ ಮೂವರು ವ್ಯಕ್ತಿಗಳು ಆಡುತ್ತಾರೆ. ಎರಡಕ್ಕಿಂತ ಹೆಚ್ಚು ವ್ಯಕ್ತಿಗಳು ಬ್ರೈನ್‌ ಟು ಬ್ರೈನ್‌ ನೆಟ್‌ವರ್ಕ್‌ನಲ್ಲಿರುವುದು ಮತ್ತು ವ್ಯಕ್ತಿಯೊಬ್ಬ ತನ್ನ ಮೆದುಳಿನ ಮೂಲಕ ಮಾತ್ರ ಮಾಹಿತಿಯನ್ನು ಸ್ವೀಕರಿಸುವುದು ಮತ್ತು ಕಳುಹಿಸುವ ಈ ಪ್ರಕ್ರಿಯೆ ವಿಶ್ವದಲ್ಲಿಯೇ ಮೊದಲನೆಯದಾಗಿದೆ. ಹಾಗಿದ್ರೆ, ಭವಿಷ್ಯದಲ್ಲಿ ಜಗತ್ತನ್ನೇ ಆಳಬಹುದಾದ ಬ್ರೈನ್‌ನೆಟ್‌ ಬಗ್ಗೆ ಒಂದಿಷ್ಟು ಅಂಶಗಳು ಇಲ್ಲಿವೆ ನೋಡಿ..

ಸಂಶೋಧನೆ ಬಹಿರಂಗ

ಸಂಶೋಧನೆ ಬಹಿರಂಗ

ಸಂಶೋಧನಾ ತಂಡ ಏಪ್ರಿಲ್‌ 16 ರಂದು ಸೈಂಟಿಫಿಕ್‌ ರಿಪೋರ್ಟ್ಸ್‌ ಎಂಬ ನೇಚರ್‌ ಜರ್ನಲ್‌ನಲ್ಲಿ ಸಂಶೋಧನೆಯನ್ನು ಪ್ರಕಟಿಸಿತ್ತು. ಆದರೆ, ಸೆಪ್ಟಂಬರ್‌ನಲ್ಲಿ arXiv ಪೂರ್ವಮುದ್ರಿತ ಸೈಟ್‌ನಲ್ಲಿ ಸಂಶೋಧನೆಯನ್ನು ಪ್ರಕಟಿಸಿದ ನಂತರ ಈ ವಿಷಯ ಮಾಧ್ಯಮದಲ್ಲಿ ಸ್ಥಾನಪಡೆದಿದೆ. ಮಾನವರು ಸಾಮಾಜಿಕ ಜೀವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸಹಕರಿಸಲು ಪರಸ್ಪರ ಸಂವಹನ ನಡೆಸುತ್ತಾನೆ ಎಂದು ಲೇಖಕ ರಾಜೇಶ್ ರಾವ್‌ ಹೇಳಿದ್ದಾರೆ. ಜನರ ಸಮೂಹ ತಮ್ಮ ಮಿದುಳನ್ನು ಮಾತ್ರ ಬಳಸಿ ಸಮೀಕರಣವಾಗುತ್ತಾರಾ ಎಂಬುದದನ್ನು ನಾವು ತಿಳಿದುಕೊಳ್ಳಲು ಬಯಸಿದ್ದೇವೆ. ಒಬ್ಬ ವ್ಯಕ್ತಿಯು ಸಮಸ್ಯೆಯನ್ನು ಪರಿಹರಿಸಲು ಇಬ್ಬರು ವ್ಯಕ್ತಿಗಳು ಸಹಾಯ ಮಾಡುತ್ತಾರೆ ಎಂಬುದು ಬ್ರೈನ್‌ನೆಟ್‌ ಕಲ್ಪನೆ ಹೊರಹೊಮ್ಮಿದೆ ಎಂದು ರಾಜೇಶ್ ರಾವ್‌ ಹೇಳುತ್ತಾರೆ.

ಹೇಗೆ ಸಂಶೋಧನೆ..?

ಹೇಗೆ ಸಂಶೋಧನೆ..?

ಟೆಟ್ರಿಸ್‌ ಆಟದಂತೆ ಪರದೆಯ ಮೇಲ್ಭಾಗದಲ್ಲಿ ಒಂದು ಬ್ಲಾಕ್ ಮತ್ತು ಕೆಳಭಾಗದಲ್ಲಿ ಪೂರ್ಣಗೊಳ್ಳಬೇಕಾದ ರೇಖೆ ಇರುತ್ತದೆ. ಕಳಹುಹಿಸುವ ಇಬ್ಬರು ವ್ಯಕ್ತಿಗಳು ಬ್ಲಾಕ್ ಮತ್ತು ಗೆರೆ ಎರಡನ್ನೂ ನೋಡಬಹುದು ಆದರೆ, ಆಟವನ್ನು ನಿಯಂತ್ರಿಸಲು ಅವರಿಂದ ಸಾಧ್ಯವಿಲ್ಲ. ಸ್ವೀಕರಿಸುವ ಮೂರನೇ ವ್ಯಕ್ತಿ, ಬ್ಲಾಕ್ ಅನ್ನು ಮಾತ್ರ ನೋಡಬಹುದು. ಆದರೆ, ಸಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬ್ಲಾಕ್ ಅನ್ನು ತಿರುಗಿಸಬೇಕೆ ಎಂಬುದನ್ನು ಹೇಳಬಹುದಾಗಿದೆ. ಇಬ್ಬರು ರವಾನೆದಾರರು ಬ್ಲಾಕ್ ಅನ್ನು ತಿರುಗಿಸಬೇಕೆ, ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ. ಮತ್ತು ಆ ಮಾಹಿತಿಯನ್ನು ಇಂಟರ್ನೆಟ್ ಮೂಲಕ ಅವರ ಮೆದುಳಿನಿಂದ ಸ್ವೀಕರಿಸುವವರ ಮೆದುಳಿಗೆ ರವಾನಿಸುತ್ತಾರೆ. ನಂತರ ರಿಸೀವರ್ ಆ ಮಾಹಿತಿಯನ್ನು ಕಾರ್ಯಗತಗೊಳಿಸಿ ಆಟವನ್ನು ಪೂರ್ಣಗೊಳಿಸುತ್ತಾನೆ.

16 ಸುತ್ತುಗಳಲ್ಲಿ ಆಟ

16 ಸುತ್ತುಗಳಲ್ಲಿ ಆಟ

ಸಂಶೋಧನೆಯಲ್ಲಿ ಭಾಗವಹಿಸುವ ಐದು ಗುಂಪುಗಳು 16 ಸುತ್ತು ಆಟವನ್ನು ಆಡಲಾಗಿದ್ದು, ಪ್ರತಿ ಗುಂಪಿಗೆ ಮೂವರಂತೆ ವಿಭಿನ್ನ ಕೋಣೆಗಳಲ್ಲಿ ಒಬ್ಬರನ್ನೊಬ್ಬರು ನೋಡಲು, ಕೇಳಲು ಅಥವಾ ಮಾತನಾಡಲು ಸಾಧ್ಯವಾಗಧ ರೀತಿಯಲ್ಲಿ ಆಟವಾಡಿದ್ದಾರೆ. ಇಬ್ಬರು ರವಾನೆದಾರರು ಕಂಪ್ಯೂಟರ್ ಪರದೆಯಲ್ಲಿ ಪ್ರದರ್ಶಿಸಲಾದ ಆಟವನ್ನು ನೋಡಬಹುದು. ಪರದೆಯು ಒಂದು ಬದಿಯಲ್ಲಿ ಹೌದು ಮತ್ತು ಇನ್ನೊಂದು ಬದಿಯಲ್ಲಿ ಇಲ್ಲ ಎಂಬ ಪದವನ್ನೂ ತೋರಿಸಿದೆ. ಹೌದು ಆಯ್ಕೆಯ ಕೆಳಗೆ ಸೆಕೆಂಡಿಗೆ 17 ಬಾರಿ ಎಲ್ಇಡಿ ದೀಪ ಹೊತ್ತಿದರೆ, ಇಲ್ಲ ಆಯ್ಕೆಯ ಕೆಳಗೆ ಸೆಕೆಂಡಿಗೆ 15 ಬಾರಿ ಎಲ್‌ಇಡಿ ದೀಪ್ ಹೊತ್ತಿಕೊಂಡಿದೆ.

ಎಲೆಕ್ಟ್ರೋಎನ್ಸೆಫಾಲೋಗ್ರಾಫಿ ಕ್ಯಾಪ್‌

ಎಲೆಕ್ಟ್ರೋಎನ್ಸೆಫಾಲೋಗ್ರಾಫಿ ಕ್ಯಾಪ್‌

ರವಾನೆದಾರರು ತಮ್ಮ ಮಿದುಳಿನಲ್ಲಿ ವಿದ್ಯುತ್ ಚಟುವಟಿಕೆಯನ್ನು ಎತ್ತಿಕೊಳ್ಳುವ ಎಲೆಕ್ಟ್ರೋಎನ್ಸೆಫಾಲೋಗ್ರಾಫಿ ಕ್ಯಾಪ್‌ಗಳನ್ನು ಧರಿಸಿರುತ್ತಾರೆ. ದೀಪಗಳ ವಿಭಿನ್ನ ಮಿನುಗುವ ಮಾದರಿಗಳು ಮೆದುಳಿನಲ್ಲಿ ವಿಶಿಷ್ಟ ರೀತಿಯ ಚಟುವಟಿಕೆಯನ್ನು ಪ್ರಚೋದಿಸುತ್ತದೆ. ಆದ್ದರಿಂದ, ರವಾನೆದಾರರು ತಮ್ಮ ಅನುಗುಣವಾದ ಆಯ್ಕೆಗಾಗಿ ಬೆಳಕನ್ನು ನೋಡುತ್ತಿದ್ದಂತೆ, ಕ್ಯಾಪ್ ಆ ಸಂಕೇತಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಕಂಪ್ಯೂಟರ್ ಕರ್ಸರ್ ಅನ್ನು ಪರದೆಯ ಮೇಲೆ ಪ್ರದರ್ಶಿಸುವ ಮೂಲಕ ನೈಜ-ಸಮಯದ ಪ್ರತಿಕ್ರಿಯೆಯನ್ನು ಒದಗಿಸುತ್ತದೆ. ಆಯ್ಕೆಗಳನ್ನು ನಂತರ ಹೌದು ಅಥವಾ ಇಲ್ಲ ಉತ್ತರಕ್ಕೆ ಅನುವಾದಿಸಲಾಗುತ್ತದೆ, ಅದನ್ನು ಅಂತರ್ಜಾಲದ ಮೂಲಕ ಸ್ವೀಕರಿಸುವವರಿಗೆ ಕಳುಹಿಸಲಾಗುತ್ತದೆ.

ಸಂಕೇತಗಳ ಭಾಷಾಂತರ

ಸಂಕೇತಗಳ ಭಾಷಾಂತರ

ಸ್ವೀಕೃತದಾರನಿಗೆ ಸಂದೇಶ ತಲುಪಿಸಲು, ಆತನ ತಲೆಯ ಹಿಂದೆ ಒಂದು ಸಣ್ಣ ರಾಕೆಟ್‌ನಂತೆ ಕಾಣುವ ಕೇಬಲ್ ಬಳಸಿದ್ದೇವೆ. ಈ ಸುರುಳಿ ಕಣ್ಣುಗಳಿಂದ ಸಂಕೇತಗಳನ್ನು ಭಾಷಾಂತರಿಸಿ ಮೆದುಳಿನ ಭಾಗವನ್ನು ಉತ್ತೇಜಿಸುತ್ತದೆ ಎಂದು ಸಹ ಲೇಖಕ ಆಂಡ್ರಿಯಾ ಹೇಳಿದ್ದಾರೆ. ಮೂಲಭೂತವಾಗಿ ಮೆದುಳಿನ ಹಿಂಭಾಗದಲ್ಲಿರುವ ನ್ಯೂರಾನ್‌ಗಳು ಕಣ್ಣುಗಳಿಂದ ಸಂಕೇತಗಳನ್ನು ಸ್ವೀಕರಿಸಿದ್ದೇವೆ ಎಂಬ ಸಂದೇಶ ಹರಡಲು ಟ್ರಿಕ್ ಮಾಡುತ್ತೇವೆ ಎಂದು ಲೇಖಕರು ಹೇಳುತ್ತಾರೆ.

ಇಬ್ಬರದ್ದು ಒಂದೇ ವಿಧಾನ

ಇಬ್ಬರದ್ದು ಒಂದೇ ವಿಧಾನ

ಹೌದು, ಬ್ಲಾಕ್ ಅನ್ನು ತಿರುಗಿಸಿ ಎಂಬ ಉತ್ತರ ಇದ್ದರೆ, ಸ್ವೀಕರಿಸುವವರು ಪ್ರಕಾಶಮಾನವಾದ ಫ್ಲ್ಯಾಷ್ ಅನ್ನು ನೋಡುತ್ತಾರೆ. ಇಲ್ಲ ಎಂಬ ಉತ್ತರ ಇದ್ದರೆ, ಸ್ವೀಕರಿಸುವವರು ಏನನ್ನೂ ನೋಡುವುದಿಲ್ಲ. ಬ್ಲಾಕ್ ಅನ್ನು ತಿರುಗಿಸಬೇಕೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವೀಕೃತದಾರರು, ಇಬ್ಬರು ರವಾನೆದಾರರಿಂದ ಇನ್ಪುಟ್ ಪಡೆಯಬೇಕು. ರಿಸೀವರ್ ಸಹ ಎಲೆಕ್ಟ್ರೋಎನ್ಸೆಫಾಲೋಗ್ರಾಫಿ ಕ್ಯಾಪ್ ಧರಿಸಿದ್ದರಿಂದ, ರವಾನೆದಾರರಂತೆ ಹೌದು ಅಥವಾ ಇಲ್ಲ ಆಯ್ಕೆ ಮಾಡಲು ಅದೇ ವಿಧಾನ ಬಳಸಿದ್ದಾರೆ.

ಪರಿಶೀಲನೆಗೆ ಅವಕಾಶ

ಪರಿಶೀಲನೆಗೆ ಅವಕಾಶ

ಸ್ವೀಕರಿಸುವವರ ನಿರ್ಧಾರವನ್ನು ಪರಿಶೀಲಿಸಲು ಮತ್ತು ಅವರು ಒಪ್ಪದಿದ್ದರೆ ತಿದ್ದುಪಡಿಗಳನ್ನು ಕಳುಹಿಸಲು ರವಾನೆದಾರರಿಗೆ ಅವಕಾಶ ಇತ್ತು. ನಂತರ, ಸ್ವೀಕೃತದಾರ ಎರಡನೇ ನಿರ್ಧಾರ ಕಳುಹಿಸಿದ ನಂತರ, ಗುಂಪಿನಲ್ಲಿರುವ ಪ್ರತಿಯೊಬ್ಬರೂ ರೇಖೆಯನ್ನು ತೆರವುಗೊಳಿಸಿದ್ದಾರೆಯೇ ಎಂದು ಕಂಡುಕೊಂಡರು. ಪ್ರತಿ ಗುಂಪು ಸರಾಸರಿ ಶೇ.81ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 16 ಪ್ರಯೋಗಗಳಲ್ಲಿ 13ರಲ್ಲಿ ಯಶಸ್ಸು ಸಿಕ್ಕಿದೆ.

ಭವಿಷ್ಯಕ್ಕೆ ದಾರಿ

ಭವಿಷ್ಯಕ್ಕೆ ದಾರಿ

ಸಂಶೋಧಕರ ಪ್ರಕಾರ ಬ್ರೈನ್‌ ಟು ಬ್ರೈನ್‌ ಇಂಟರ್‌ಫೇಸ್‌ ಬಹಳಷ್ಟು ಕ್ರಾಂತಿ ಮಾಡಲಿದ್ದು, ಮೆದುಳಗಳನ್ನು ಸಮೀಕರಿಸಿ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಅದಲ್ಲದೇ ದೊಡ್ಡ ದೊಡ್ಡ ಸಂಭಾಷಣೆಗಳನ್ನು ಸಹ ಬ್ರೈನ್‌ನೆಟ್‌ನಲ್ಲಿ ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.

Most Read Articles
Best Mobiles in India

Read more about:
English summary
How to Play Video Games With Friends Using Your Own Mind

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more