ನೋಕಿಯಾ ಲುಮಿಯಾಗೆ ಮತ್ತೊಂದು ಸೇರ್ಪಡೆ

Posted By: Staff
ನೋಕಿಯಾ ಲುಮಿಯಾಗೆ ಮತ್ತೊಂದು ಸೇರ್ಪಡೆ

ಪ್ರತಿಷ್ಟಿತ ನೋಕಿಯಾ ಕಂಪನಿ ದಿನೇ ದಿನೇ ಹೊಸ ರೀತಿಯ ಮೊಬೈಲ್, ಸ್ಮಾರ್ಟ್ ಫೋನ್ ಗಳನ್ನು ನೀಡುತ್ತಲೇ ಬಂದಿದೆ. ಲುಮಿಯಾ ಸಿರೀಸ್ ಸ್ಮಾರ್ಟ್ ಫೋನ್ ಗಳ ಮೂಲಕ ನೋಕಿಯಾ ಮತ್ತಷ್ಟು ಖ್ಯಾತಿ ಗಳಿಸಿದೆ.

ಇದೀಗ ಲುಮಿಯಾ ಸಾಲಿನಲ್ಲಿ ನೋಕಿಯಾ ಲುಮಿಯಾ 601 ಎಂಬ ನೂತನ ಮೊಬೈಲ್ ಹಲವು ಆಧುನಿಕ ಆಯ್ಕೆ ಮತ್ತು ವಿಶೇಷತೆಗಳನ್ನು ಹೊತ್ತು ತರಲಿದೆ ಎಂಬ ಸುದ್ದಿ ಹರಡಿದೆ. ಲಂಡನ್ ನಲ್ಲಿ ನಡೆದ ನೋಕಿಯಾ ವರ್ಲ್ಡ್ ಶೋ ದಲ್ಲಿ ನೋಕಿಯಾ ಲುಮಿಯಾ 900, ನೋಕಿಯಾ 800 ಮತ್ತು 701 ಮೊಬೈಲ್ ಗಳ ಪರಿಚಯದ ನಂತರ ನೋಕಿಯಾ ಮತ್ತೊಂದು ಫೋನ್ ನೋಕಿಯಾ ಲುಮಿಯಾ 601 ತರುತಿದೆ ಎಂಬ ಸುದ್ದಿ ತಿಳಿದುಬಂದಿದೆ.

ಆದರೆ ಈ ಮೊಬೈಲ್ ಕುರಿತು ಅಧೀಕೃತ ಮಾಹಿತಿ ತಿಳಿದುಬಂದಿಲ್ಲ. ಬೇರೆ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಇದು ಅತ್ಯುನ್ನತ ವಿನ್ಯಾಸವನ್ನೂ ಹೊಂದಿರುವುದಾಗಿ ತಿಳಿದುಬಂದಿದೆ.

ಈ ಸ್ಮಾರ್ಟ್ ಫೋನ್ ಅತ್ಯಾಧುನಿಕ ವಿಂಡೋಸ್ ಫೋನ್ ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು,  1GHz ವೇಗದ ಕ್ವಾಲ್ಕಂ ಸ್ನಾಪ್ ಡ್ರಾಗನ್ ಚಿಪ್ ಸೆಟ್ ಪ್ರೊಸೆಸರನ್ನು ಪಡೆದುಕೊಂಡಿದೆ.

ನೋಕಿಯಾ ಲುಮಿಯಾ 601 ಮೊಬೈಲ್:

* 3.7 ಇಂಚಿನ ಡಿಸ್ಪ್ಲೇ

* WVGA ಟಚ್ ಸ್ಕ್ರೀನ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* 512 ಎಂಬಿ RAM ಸಾಮರ್ಥ್ಯ

* 8 ಜಿಬಿವರೆಗೂ ಆಂತರಿಕ ಮೆಮೊರಿ ಸಾಮರ್ಥ್ಯ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* 802.11 b/ g/ n ವೈ-ಫೈ, ಬ್ಲೂಟೂಥ್, USB ಪೋರ್ಟ್

* 3.5 ಎಂಎಂ ಆಡಿಯೋ ಜ್ಯಾಕ್

ಮನರಂಜನೆಗೆಂದು ಆಡಿಯೋ, ವಿಡಿಯೋ ಪ್ಲೇಯರ್ ಗಳನ್ನು ಒಳಗೊಂಡಿರುವ ಈ ನೋಕಿಯಾ ಲುಮಿಯಾ ಮೊಬೈಲ್ ಬಿಡುಗಡೆಗೊಳ್ಳಲಿರುವ ದಿನಾಂಕ ಮತ್ತು ಬೆಲೆಯ ಕುರಿತು ಕಂಪನಿ ಯಾವುದೇ ಮಾಹಿತಿಯನ್ನು ಘೋಷಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot