ಒಪ್ಪೊ ಹೊಸ ಅವತಾರ ; ಇಂದು 'ಎಫ್‌11 ಪ್ರೊ ಅವೆಂಜರ್ಸ್‌ ಎಡಿಷನ್‌' ಸೇಲ್‌ ಶುರು!

|

ಇತ್ತೀಚಿಗೆ ಬಿಡುಗಡೆ ಆಗಿರುವ 'ಒಪ್ಪೊ ಎಫ್‌11 ಪ್ರೊ' ಸ್ಮಾರ್ಟ್‌ಫೋನ್‌ ಈಗ ಮತ್ತೆ ಹೊಸ ಅವತಾರದಲ್ಲಿ ಸೇಲ್‌ ಆರಂಭಿಸಲಿದೆ. ಅಮೆರಿಕಾದ 'ಮಾರ್ವೆಲ್‌ ಸಿನಿಮ್ಯಾಟಿಕ್ ಯುನಿವರ್ಸ್‌' ಸಿನಿಮಾಗಳ ಜನಪ್ರಿಯತೆಯ ಆಧಾರದಲ್ಲಿ ಕಂಪನಿಯು 'ಅವೆಂಜರ್ಸ್‌ ಎಡಿಷನ್‌'ನಲ್ಲಿ ಎಫ್‌11 ಪ್ರೊ ಅನ್ನು ವಿಶೇಷ ಡಿಸೈನ್‌ ಪರಿಚಯಿಸಲಿದೆ. ಈ ಸ್ಮಾರ್ಟ್‌ಫೋನ್‌ ಎಡಿಷನ್ ಮಾರ್ವೆಲ್ ಅಭಿಮಾನಿ ಗ್ರಾಹಕರನ್ನು ಆಕರ್ಷಿಸಲಿರುವುದು ಪಕ್ಕಾ ಎನ್ನಲಾಗುತ್ತಿದೆ.

ಒಪ್ಪೊ ಹೊಸ ಅವತಾರ ; ಇಂದು 'ಎಫ್‌11 ಪ್ರೊ ಅವೆಂಜರ್ಸ್‌ ಎಡಿಷನ್‌' ಸೇಲ್‌ ಶುರು!

ಹೌದು, ಪ್ರಸ್ತುತ ಮಾರ್ವೆಲ್‌ ಸಂಸ್ಥೆಯ 'ಅವೆಂಜರ್ಸ್ ಎಂಡ್‌ಗೇಮ್‌' ಸಿನಿಮಾ ಬಿಡುಗಡೆ ಆಗಿದ್ದು, ಮಾರ್ವೆಲ್‌ ಅಭಿಮಾನಿಗಳಲ್ಲಿ ಕ್ರೇಜ್‌ ಮೂಡಿಸಿದೆ. ಆ ಆಧಾರದಲ್ಲಿ 'ಒಪ್ಪೊ ಎಫ್‌11 ಪ್ರೊ' ಸ್ಮಾರ್ಟ್‌ಫೋನಿನ ಸ್ಪೆಷಲ್‌ ಎಡಿಷನ್‌ ಪರಿಚಯಿಸಿದೆ. ಇಂದು(ಮೇ.1) ಆನ್‌ಲೈನ್‌ ಸೇಲ್‌ ಆರಂಭಿಸಲಿದ್ದು, ಬೆಳ್ಳಿಗ್ಗೆ 11 ಗಂಟೆಯ ನಂತರ ಖರೀದಿಗೆ ಲಭ್ಯ. ಇದೇ ಮೇ 4ರಂದು ಆಫ್‌ಲೈನ್‌ ಮಾರುಕಟ್ಟೆಯಲ್ಲಿಯೂ ಸಹ ದೊರೆಯಲಿದೆ.

ಒಪ್ಪೊ ಹೊಸ ಅವತಾರ ; ಇಂದು 'ಎಫ್‌11 ಪ್ರೊ ಅವೆಂಜರ್ಸ್‌ ಎಡಿಷನ್‌' ಸೇಲ್‌ ಶುರು!

ಮಾರ್ವೆಲ್‌ ಅಭಿಮಾನಿಗಳಿಗೆಂದೆ ತಯಾರಿಸಲಾಗಿರುವ ಈ ಸ್ಮಾರ್ಟ್‌ಫೋನ್ ಮಲ್ಟಿಟಾಸ್ಕ್ ಕೆಲಸಗಳನ್ನು ವೇಗವಾಗಿ ನಿರ್ವಹಿಸಲು 6GB RAM ಸಾಮರ್ಥ್ಯದೊಂದಿಗೆ 128GB ಆಂತರಿಕ ಸಂಗ್ರಹವನ್ನು ಒದಗಿಸಲಾಗಿದೆ. ಇದರೊಟ್ಟಿಗೆ 4,000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದೆ. ಹಾಗಾದರೇ 'ಒಪ್ಪೊ ಎಫ್11 ಪ್ರೋ' ಅವೆಂಜರ್‌ ಎಡಿಷನ್‌ ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್

ಡಿಸೈನ್

ಸ್ಮಾರ್ಟ್‌ಫೋನ್‌ ಡಿಸೈನ್‌ ಸಂಪೂರ್ಣ ಅವೆಂಜರ್ಸ್‌ ಲುಕ್‌ನಲ್ಲಿದ್ದು, ಬ್ಲೂ, ರೆಡ್‌ ಮಿಶ್ರಣದ ಬಣ್ಣಗಳಲ್ಲಿ ಆಕರ್ಷಕವಾಗಿ ಕಾಣಲಿದೆ. ಫೋನಿನ ಹಿಂಬದಿಯಲ್ಲಿ ಅವೆಂಜರ್ಸ್‌ ಲೊಗೊ ಸಹ ನೀಡಲಾಗಿದ್ದು, ಮಾರ್ವೆಲ್‌ ಅಭಿಮಾನಿಗಳಿಗೆ ಹೆಚ್ಚು ಸೆಳೆಯಲಿದೆ. ಡಿಸ್‌ಪ್ಲೇಯ ಸುತ್ತಲೂ ಅತ್ಯಂತ ಕಡಿಮೆ ಅಂಚಿನಿಂದ ರಚಿತವಾಗಿದ್ದು, ಹಿಂಬದಿರಲ್ಲಿ ವೃತ್ತಾಕಾರದ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ನೀಡಲಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇಯ ಪಿಕ್ಸಲ್ ಪರ್ ಇಂಚಿನ ಅನುಪಾತವು 396(PPI) ಆಗಿದೆ. ವಿಶಾಲವಾದ ಪನೋರಮಾ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಸ್ಕ್ರೀನ್ ವೀಕ್ಷಣೆಯ ಅನುಭವ ದೊರೆಯಲಿದೆ.

ಪ್ರೊಸೆಸರ್

ಪ್ರೊಸೆಸರ್

'ಆಕ್ಟಾಕೋರ್ ಮೀಡಿಯಾ ಟೆಕ್‌ SoC, ಸ್ನ್ಯಾಪ್‌ಡ್ರಾಗನ್ 855' ಸಾಮರ್ಥ್ಯದ ಪ್ರೊಸೆಸರ್ ಹೊಂದಿರಲಿದ್ದು, ಇದರೊಂದಿಗೆ 6 GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

48 ಮೆಗಾಪಿಕ್ಸಲ್ ಕ್ಯಾಮೆರಾ

48 ಮೆಗಾಪಿಕ್ಸಲ್ ಕ್ಯಾಮೆರಾ

ಒಪ್ಪೊ ಎಫ್11 ಪ್ರೋ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅದರಲ್ಲಿನ ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ ಮತ್ತು ಸೆಕೆಂಡರಿ ಕ್ಯಾಮೆರಾವು 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಎನ್ನಲಾಗುತ್ತಿದೆ. ಈ ಹೈ ಕ್ಯಾಮೆರಾದಲ್ಲಿ ಫೋಟೋಗಳು ಕ್ಲಿಯರ್ ಆಗಿ ಮೂಡಿಬರಲಿವೆ.

ಸೆಲ್ಫೀ ಎಕ್ಸ್‌ಪರ್ಟ್!

ಸೆಲ್ಫೀ ಎಕ್ಸ್‌ಪರ್ಟ್!

ಸೆಲ್ಫೀ ಎಕ್ಸ್‌ಪರ್ಟ್ ಎಂದೇ ಬಿಂಬಿತವಾಗಿರುವ ಒಪ್ಪೊ ಕಂಪನಿ ತನ್ನ ಹೊಸ 'ಒಪ್ಪೊ ಎಫ್11' ಸ್ಮಾರ್ಟ್‌ಫೋನ್‌ನಲ್ಲಿ '32 ಮೆಗಾಪಿಕ್ಸಲ್' ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ನೀಡಲಿದ್ದು, ಇದು ಒಪ್ಪೊದ ಮೊದಲ ಹೈ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಆಗಿರಲಿದೆ. ಇದರೊಂದಿಗೆ ಮೊದಲ ಬಾರಿಗೆ ರೈಸಿಂಗ್(ಪಾಪ್‌ಅಪ್‌) ಸೆಲ್ಫೀ ಕ್ಯಾಮೆರಾವನ್ನು ಪರಿಚಯಿಸುತ್ತದೆ.

ಬ್ಯಾಟರಿ

ಬ್ಯಾಟರಿ

ಒಪ್ಪೊ ಬಿಡುಗಡೆ ಮಾಡುತ್ತಿರುವ ಹೊಸ ಎಫ್11 ಸ್ಮಾರ್ಟ್‌ಫೋನ್‌ನಲ್ಲಿ 4,000mAh ಸಾಮರ್ಥ್ಯದ ದೀರ್ಘಕಾಲ ಬಾಳುವ ಬ್ಯಾಟರಿಯನ್ನು ನೀಡಲಾಗುತ್ತಿದ್ದು, ಇದರೊಂದಿಗೆ VOOC 3.0 ತಂತ್ರಜ್ಞಾನದ ಫಾಸ್ಟ್‌ ಚಾರ್ಜರ್ ಅನ್ನು ಸಹ ನೀಡಲಾಗುತ್ತಿದೆ. ಫಾಸ್ಟ್‌ ಚಾರ್ಜರ್‌ನಿಂದ ಸ್ಮಾರ್ಟ್‌ಫೋನ್ ಅತೀ ವೇಗವಾಗಿ ಚಾರ್ಜ್ ಆಗುತ್ತದೆ. C ಪೋರ್ಟ್‌ ಮಾದರಿಯ ಯುಎಸ್‌ಬಿ ಇರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೊ ಎಫ್‌11 ಪ್ರೊ ಅವೆಂಜರ್ಸ್‌ ಎಡಿಷನ್‌ ಇಂದು ಬೆಳ್ಳಿಗ್ಗೆ 11ಗಂಟೆಗೆ ಸೇಲ್‌ ಆರಂಭವಾಗಲಿದೆ. ಈ ಸ್ಮಾರ್ಟ್‌ಫೋನಿನ ಬೆಲೆಯು 27.990ರೂ.ಗಳು ಆಗಿರಲಿದೆ. ಗ್ರಾಹಕರು ಆನ್‌ಲೈನ್‌ ಮೂಲಕ ಖರೀದಿಸಬಹುದಾಗಿದೆ. ಇದೇ ಮೇ 4 ರಂದು ಆಫ್‌ಲೈನ್‌ ಮಾರುಕಟ್ಟೆಯಲ್ಲಿಯೂ ಸಹ ದೊರೆಯಲಿದೆ ಎನ್ನಲಾಗಿದೆ.

Best Mobiles in India

Read more about:
English summary
OPPO F11 Pro Marvel's Avengers edition goes on sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X