ಪ್ರಸ್ತುತ ಮೊಬೈಲ್ ಪ್ರಪಂಚದ 6 ವಿಶೇಷ ಸಂಗತಿಗಳು ಇಲ್ಲಿವೆ!! ಏನು ಗೊತ್ತಾ?

2022ರ ವೇಳೆಗೆ ವಿಶ್ವದ ಸುಮಾರು ಶೇ.70ಕ್ಕಿಂತಲೂ ಹೆಚ್ಚು ಜನರು ಮೊಬೈಲ್‌ ಬಳಕೆದಾರರಾಗಲಿದ್ದಾರೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ 'ಫೊರೆಸ್ಟರ್' ವರದಿ ಮಾಡಿದೆ.!!

|

2008ರಲ್ಲಿ ಇದ್ದ ಮೊಬೈಲ್‌ ಬಳಕೆದಾರರ ಸಂಖ್ಯೆ ಇದೀಗ ಎರಡುಪಟ್ಟಾಗಿದ್ದು, ವಿಶ್ವದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯೂ ದಿನೇದಿನೇ ಏರಿಕೆ ಕಾಣುತ್ತಿದೆ.! 2022ರ ವೇಳೆಗೆ ವಿಶ್ವದ ಸುಮಾರು ಶೇ.70ಕ್ಕಿಂತಲೂ ಹೆಚ್ಚು ಜನರು ಮೊಬೈಲ್‌ ಬಳಕೆದಾರರಾಗಲಿದ್ದಾರೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ 'ಫೊರೆಸ್ಟರ್' ವರದಿ ಮಾಡಿದೆ.!!

2022ರ ಹೊತ್ತಿಗೆ ಜಗತ್ತಿನಾದ್ಯಂತ ಸುಮಾರು 550 ಕೋಟಿಗೂ ಹೆಚ್ಚು ಜನರು ಮೊಬೈಲ್‌ ಗ್ರಾಹಕರಾಗಲಿದ್ದಾರೆ ಎಂದು ವರದಿ ಹೇಳಿದೆ.!! ಈ ಮಾಹಿತಿ ಜೊತೆಗೆ 'ಫೊರೆಸ್ಟರ್' ಹಲವು ಕುತೋಹಲಭರಿತ ಮಾಹಿತಿಗಳನ್ನು ತನ್ನ ವರದಿಯಲ್ಲಿ ಪ್ರಕಟಿಸಿದ್ದು, ಅವುಗಳು ಯಾವುವು? ಮೊಬೈಲ್ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಭಾರತದಲ್ಲಿ 100ಕೋಟಿ ಮೊಬೈಲ್‌ ಚಂದಾದಾರರು!!

ಭಾರತದಲ್ಲಿ 100ಕೋಟಿ ಮೊಬೈಲ್‌ ಚಂದಾದಾರರು!!

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇತ್ತೀಚೆಗೆ ನೀಡಿದ್ದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರಸ್ತುತ 100ಕೋಟಿ ಮೊಬೈಲ್‌ ಚಂದಾದಾರರಿದ್ದಾರೆ.!! ಅಂದರೆ, ಶೇಖಡ 70% ಭಾರತೀಯರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ.!!

30ಕೋಟಿ ಸ್ಮಾರ್ಟ್‌ಫೋನ್‌ ಬಳಕೆ!!

30ಕೋಟಿ ಸ್ಮಾರ್ಟ್‌ಫೋನ್‌ ಬಳಕೆ!!

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ವರದಿಯನ್ನು ಉಲ್ಲೇಖಿಸಿರುವ ಫೊರೆಸ್ಟರ್ ಸಂಶೋಧನಾ ಸಂಸ್ಥೆ, ಸದ್ಯ ದೇಶದಲ್ಲಿ ಸುಮಾರು 30ಕೋಟಿ ಸ್ಮಾರ್ಟ್‌ಫೋನ್‌ಗಳು ಬಳಕೆಯಲ್ಲಿವೆ ಎಂದು ತಿಳಿಸಿದೆ. ಹಾಗಾಗಿ, ನಾವು 30% ಭಾರತೀಯರು ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಯಬಹುದು.!!

ಏಷ್ಯಾ ಫೆಸಿಪಿಕ್‌ ರಾಷ್ಟ್ರಗಳಲ್ಲಿ ಬಳಕೆ ತೀವ್ರ!!

ಏಷ್ಯಾ ಫೆಸಿಪಿಕ್‌ ರಾಷ್ಟ್ರಗಳಲ್ಲಿ ಬಳಕೆ ತೀವ್ರ!!

ಭಾರತ, ಚೀನಾ ಸೇರಿದಂತೆ ಏಷ್ಯಾ ಫೆಸಿಪಿಕ್‌ ರಾಷ್ಟ್ರಗಳಲ್ಲಿ ಮೊಬೈಲ್‌ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಮತ್ತು ಹಾಗೆಯೇ ಮುಂದುವರೆದಿದೆ.! ಈ ಕಾರಣದಿಂದಾಗಿಯೇ ವಿಶ್ವದ ಮೊಬೈಲ್ ಬಳಕೆದಾರರ ಪ್ರಮಾಣ ಭಾರಿ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.!!

ಆಂಡ್ರಾಯ್ಡ್ ಪ್ರಿಯರು ಎಲ್ಲರೂ.!!

ಆಂಡ್ರಾಯ್ಡ್ ಪ್ರಿಯರು ಎಲ್ಲರೂ.!!

2017ರಲ್ಲಿ ವಿಶ್ವದಲ್ಲಿ ಸ್ಮಾರ್ಟ್‌ಫೋನ್‌ ಬಳಸುವವರ ಪೈಕಿ ಶೇ.73ರಷ್ಟು(180ಕೋಟಿ) ಜನರು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂನ ಮೊಬೈಲ್‌ಗಳನ್ನು ಬಳಸುತ್ತಿದ್ದಾರೆ. ಉಳಿದಂತೆ ಶೇ.21ರಷ್ಟು ಆ್ಯಪಲ್‌ ಮತ್ತು ಶೇ.4ರಷ್ಟು ವಿಂಡೋಸ್‌ ಫೋನ್‌ ಬಳಸಲಿದ್ದಾರೆ ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.!!

2022ರಲ್ಲಿ ಮೊಬೈಲ್ ಬಳಕೆ ಪ್ರಮಾಣ?

2022ರಲ್ಲಿ ಮೊಬೈಲ್ ಬಳಕೆ ಪ್ರಮಾಣ?

2022ರ ವೇಳೆಗೆ ವಿಶ್ವದಲ್ಲಿ ಒಟ್ಟು 380ಕೋಟಿ ಜನರು ಸ್ಮಾರ್ಟ್‌ಫೋನ್‌ ಬಳಸಲಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಸುಮಾರು ಶೇ.66ರಷ್ಟು ಆಗಲಿದೆ ಎಂದು 'ಫೊರೆಸ್ಟರ್' ವರದಿಯಲ್ಲಿ ಅಂದಾಜು ಮಾಡಲಾಗಿದೆ.!!

5 ರಿಂದ 6 ಇಂಚ್ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚು!!

5 ರಿಂದ 6 ಇಂಚ್ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚು!!

ಭಾರತದ ಬಹುತೇಕ ಜನರು 5 ರಿಂದ 6 ಇಂಚ್ ಸ್ಮಾರ್ಟ್‌ಫೋನ್ ಬಳಕೆ ಮಾಡಲು ಇಚ್ಚಿಸುತ್ತಿದ್ದು, ಭಾರತದಲ್ಲಿ ಶೇ.62ರಷ್ಟು ಜನರು 5 ರಿಂದ 6 ಇಂಚ್ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ.!!

<strong>5300mAh ಬ್ಯಾಟರಿ ಫೋನ್ 'ಶಿಯೋಮಿ ಮೈ ಮ್ಯಾಕ್ಸ್ 2' ಫೋನ್ ಬಿಡುಗಡೆ!! ಬೆಲೆ ಎಷ್ಟು?</strong>5300mAh ಬ್ಯಾಟರಿ ಫೋನ್ 'ಶಿಯೋಮಿ ಮೈ ಮ್ಯಾಕ್ಸ್ 2' ಫೋನ್ ಬಿಡುಗಡೆ!! ಬೆಲೆ ಎಷ್ಟು?

Best Mobiles in India

English summary
Amazing Facts About Mobile Phones Which Will Shock You.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X