ಚಾರ್ಜಿಂಗ್ ವೇಳೆ 'ಶಿಯೋಮಿ MI A1' ಸ್ಫೋಟ!...ಪಬ್‌ಜಿ ಕೂಡ ಕಾರಣ!!

|

ಶಿಯೋಮಿ ಸ್ಮಾರ್ಟ್‌ಪೋನ್‌ಗಳು ಬ್ಲಾಸ್ಟ್ ಆಗುವ ಸಾಲಿಗೆ ಮತ್ತೊಂದು ಶಿಯೋಮಿ ಸ್ಮಾರ್ಟ್‌ಪೋನ್ ಸೇರಿಕೊಂಡಿದೆ. ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಖರೀದಿಸಲಾದ ಶಿಯೋಮಿ ಕಂಪನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಹೊಂದಿರುವ 'ಶಿಯೋಮಿ MI A1' ಚಾರ್ಜಿಂಗ್ ಹಾಕಿದ್ದ ವೇಳೆ ಸ್ಫೋಟಗೊಂಡಿದೆ ಎಂಬ ಸುದ್ದಿ ಇದೀಗ ವೈರಲ್ ಆಗಿದೆ.

ಹೌದು, ನನ್ನ ಗಳೆಯ ಮಲಗಿದ್ದ ವೇಳೆಯಲ್ಲಿ ಆತನ 'MI A1' ಸ್ಮಾರ್ಟ್‌ಫೋನ್ ಸ್ಪೋಟಗೊಂಡಿದೆ. ಆತನಿಗೆ ಇದರಿಂದ ಹೆಚ್ಚಿನ ಅಪಾಯವಾಗಿದೆ. ಆತ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿ ತಿಂಗಳು ಕಳೆದಿವೆ.ಇಲ್ಲಿಯವರೆಗೂ ಸ್ಮಾರ್ಟ್‌ಫೋನ್ ಬಿಸಿಯಾಗುವುದು ಸೇರಿದಂತೆ ಯಾವುದೇ ತೊಂದರೆಗಳು ಕಾಣಿಸಿಕೊಳ್ಳದ ಸ್ಮಾರ್ಟ್‌ಫೋನ್ ಏಕಾಏಕಿ ಬ್ಲಾಸ್ಟ್ ಆಗಿದೆ ಎಂದು ದೂರಿದ್ದಾನೆ.

ಚಾರ್ಜಿಂಗ್ ವೇಳೆ 'ಶಿಯೋಮಿ MI A1' ಸ್ಫೋಟ!...ಪಬ್‌ಜಿ ಕೂಡ ಕಾರಣ!!

ಈ ಕುರಿತು ಫೋಟೋಗಳ ಸಹಿತ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್​ನ್ನು ಹಾಕಿ ದೂರುದಾರ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈಗಾಗಲೇ ಕಂಪನಿಗೆ ದೂರು ನೀಡಲಾಗಿದ್ದರೂ ಶಿಯೋಮಿ ಕಡೆಯಿಂದ ಯಾವುದೇ ರೀತಿಯ ಅಧಿಕೃತ ಸೂಚನೆಗಳನ್ನು ಬಂದಿಲ್ಲ. ಅಲ್ಲದೆ ಮೊಬೈಲ್​ ಸ್ಪೋಟಗೊಳ್ಳಲು ಕಾರಣವನ್ನು ಕಂಪನಿ ತಿಳಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಚಾರ್ಜಿಂಗ್ ವೇಳೆ 'ಶಿಯೋಮಿ MI A1' ಸ್ಫೋಟ!...ಪಬ್‌ಜಿ ಕೂಡ ಕಾರಣ!!

ಇನ್ನುಸ್ಪೋಟಕ್ಕೂ ಮುನ್ನ ರಾತ್ರಿ ಕಳಪೆ ಚಾರ್ಜರ್ ಮೂಲಕ ಮೊಬೈಲ್ ಚಾರ್ಜ್ ಮಾಡಿಕೊಂಡು ಪಬ್‌ಜಿ ಗೇಮ್ ಆಡುತ್ತಿದ್ದರು ಎಂದು ಹೇಳಲಾಗಿದೆ. ಮೊಬೈಲ್ ಬ್ಲಾಸ್ಟ್ ಆಗಲು ಇದು ಮುಖ್ಯ ಕಾರಣ ಕೂಡ ಆಗಿರಬಹುದಾಗಿದ್ದು, ಹಾಗಾದರೆ, ಸ್ಮಾರ್ಟ್‌ಫೋನ್ ಸ್ಪೋಟವಾಗಲು ನಾವು ಮಾಡುತ್ತಿರುವ ಇತರೆ ತಪ್ಪುಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಎಲ್ಲರೂ ಮಾಡುತ್ತಿರುವ ಈ ಒಂದು ತಪ್ಪಿಗೆ ಸ್ಮಾರ್ಟ್‌ಫೋನ್ ಸ್ಪೋಟವಾಗಬಹುದಂತೆ!!

ಎಲ್ಲರೂ ಮಾಡುತ್ತಿರುವ ಈ ಒಂದು ತಪ್ಪಿಗೆ ಸ್ಮಾರ್ಟ್‌ಫೋನ್ ಸ್ಪೋಟವಾಗಬಹುದಂತೆ!!

ಮೊಬೈಲ್ ಅನ್ನು ಯಾವ ರೀತಿ ಚಾರ್ಜ್ ಮಾಡಬೇಕು, ಬ್ಯಾಟರಿಯಲ್ಲಿನ ಶಕ್ತಿ ಖಾಲಿಯಾಗದಂತೆ ಯಾವ ರೀತಿ ಉಪಯೋಗಿಸಬೇಕು ಎಂಬುದಕ್ಕೆ ಹಲವು ಸಲಹೆಗಳನ್ನು ಪ್ರತಿದಿವಸ ಓದಿತ್ತೇವೆ. ಆದರೆ, ಹೊಸ ಹೊಸ ಸಂಶೋಧನೆಗಳು ಬ್ಯಾಟರಿ ಚಾರ್ಜಿಂಗ್ ಸಮಸ್ಯೆಗಳ ಬಗ್ಗೆ ಹೊಸ ಹೊಸ ತೊಂದರೆಗಳನ್ನು ನಮಗೆ ಹೇಳುತ್ತಿವೆ.

ಇದೀಗ ಬ್ಯಾಟರಿ ಸ್ಪೋಟಕ್ಕೂ ಮತ್ತು ಬ್ಯಾಟರಿ ಹಾಳಾಗುವುದಕ್ಕೂ ಹೊಸ ಕಾರಣವೊಂದು ಹುಟ್ಟಿಕೊಂಡಿದೆ. ಸಂಶೋಧಕರು ಹೇಳುವಂತೆ, ಇದೇ ಕಾರಣದಿಂದ ಇಂದಿನ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸ್ಪೋಟವಾಗುತ್ತಿದೆ ಮತ್ತು ಚಾರ್ಜ್ ಆಗುವಾಗ ಬ್ಯಾಟರಿ ಸ್ವಲ್ಪ ಬಿಸಿಯಾಗುತ್ತದೆ. ಹೆಚ್ಚು ಬಿಸಿಯಾದಷ್ಟು ಮೊಬೈಲ್ ಬಾಳಿಕೆ ಬರುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.

ಹಾಗಾಗಿ, ಇಂದಿನ ಲೇಖನದಲ್ಲಿ ಸಂಶೋಧಕರು ಹೇಳೀದಂತೆ ಬ್ಯಾಟರಿ ಸ್ಪೋಟಕ್ಕೂ ಮತ್ತು ಬ್ಯಾಟರಿ ಹಾಳಾಗುವುದಕ್ಕೂ ಇರುವ ಹೊಸ ಕಾರಣ ಯಾವುದು? ಇನ್ನಿತರ ಮುಂಜಾಗ್ರತೆಯಿಂದ ಬ್ಯಾಟರಿಯನ್ನು ಹೆಚ್ಚು ಬಾಳಿಕೆ ಬರುವಂತೆ ಹೇಗೆ ಮಾಡಬಹುದು ಎಂಬ ಅಂಶಗಳನ್ನು ತಿಳಿದುಕೊಳ್ಳೋಣ. ಬ್ಯಾಟರಿ ರಕ್ಷಣೆ ಹೇಗೆ ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್‌!!

ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್‌!!

ಸ್ಮಾರ್ಟ್‌ಫೋನ್ ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಹಾಗೂ ಬ್ಯಾಕ್ ಕೇಸ್‌ನಂತಹ ರಕ್ಷಕ ಕವಚಗಳನ್ನು ಅಳವಡಿಸಿಕೊಂಡಿರುತ್ತಾರೆ. ಇದೇ ಬ್ಯಾಟರಿ ಸ್ಪೋಟಕ್ಕೂ ಕಾರಣವಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.! ಫ್ಲಿಪ್ ಕವರ್ ಫೋನ್ ಬ್ಯಾಟರಿ ಹೆಚ್ಚು ಬಿಸಿಯಾಗುವುದರಿಂದಲೂ ಇಂತಹ ಘಟನೆಗಳು ಜರುಗುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.!!

ಅತ್ಯುತ್ತಮ ಚಾರ್ಜರ್!!

ಅತ್ಯುತ್ತಮ ಚಾರ್ಜರ್!!

ಯಾವುದೇ ಕಾರಣಕ್ಕೂ ಗುಣಮಟ್ಟವಲ್ಲದ ಚಾರ್ಜರ್ ಬಳಕೆ ಮಾಡಬೇಡಿ. ಇಂತಹ ಚಾರ್ಜರ್‌ಗಳೆ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಳಾಗಲೂ ಮೊದಲ ಕಾರಣ ಹಾಗಾಗಿ, ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್‌ಫೋನ್‌ಗೆ ನೀಡಿರುವ ಚಾರ್ಜರ್ ಬಳಸಿ. ಏಕೆಂದರೆ ಬೇರೆ ಮೊಬೈಲ್‌ನ ಅತ್ಯುತ್ತಮ ಚಾರ್ಜರ್ ಸಹ ಅಪಾಯಕಾರಿ ಎಂಬುದನ್ನು ಮರೆಯದಿರಿ.!

How to recharge your Bangalore Metro card online - KANNADA
ಹೆಚ್ಚು ಬಳಸಿ ಕೂಡಲೇ ಚಾರ್ಜ್‌ಗೆ ಹಾಕಬೇಡಿ!!

ಹೆಚ್ಚು ಬಳಸಿ ಕೂಡಲೇ ಚಾರ್ಜ್‌ಗೆ ಹಾಕಬೇಡಿ!!

ಈ ಮಾತನ್ನು ನಾವು ಹೇಳುತ್ತಿಲ್ಲ. ಬದಲಾಗಿ ಗೂಗಲ್ ಹೆಳುತ್ತಿದೆ. ಹೌದು, ಎಲ್ಲರೂ ಹೆಚ್ಚು ಸ್ಮಾರ್ಟ್‌ಫೊನ್ ಬಳಕೆ ಮಾಡಿ ಸ್ಮಾರ್ಟ್‌ಫೊನ್ ಬಿಸಿಯಾಗಿದ್ದಾಗ ಚಾರ್ಜ್‌ಗೆ ಹಾಕುತ್ತಾರೆ. ಇದರಿಂದ ಬ್ಯಾರಿ ಸೆಲ್ಸ್‌ಗಳು ಹಾಳಾಗಿ ಸ್ಮಾರ್ಟ್‌ಫೊನ್ ಬ್ಯಾಟರಿ ಹಾಳಾಗುತ್ತದೆ. ನೆನಪಿರಲಿ ಇದು ಸ್ಪೋಟಕ್ಕೂ ಕಾರಣ!!!

ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರಲಿ.!!

ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರಲಿ.!!

ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತೆನೆ ಎಂದು ಬ್ಯಾಟರಿ ಚಾರ್ಜ್ ಮೂಣ್ ಖಾಲಿಯಾಗುವವರೆಗೂ ಬಳಕೆ ಬೇಡ.ಹೌದು, ಸ್ಮಾರ್ಟ್‌ಫೊನ್ ಎಷ್ಟೇ ಬಳಸಿದರೂ ಕಡಿಮೆ ಎಂದರೂ ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರುವ ಹಾಗೆ ನೋಡಿಕೊಳ್ಳಿ.ಏಕೆಂದರೆ ಖಾಲಿಯಾದ ಬ್ಯಾಟರಿಯನ್ನು ಸೆಲ್ಸ್‌ಗಳನ್ನು ತಳಮಟ್ಟದಿಂದ ಚಾರ್ಜ್ ಮಾಡಿದರೆ ಅವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

ಹಾಗಂತ 100%ಚಾರ್ಜ್ ಮಾಡಿದರೆ?

ಹಾಗಂತ 100%ಚಾರ್ಜ್ ಮಾಡಿದರೆ?

ವೈದ್ಯರು ಹೇಳುವಂತೆ ಅತಿಯಾಗಿ ಆಹಾರ ಸೇವನೆ ದೇಹಕ್ಕೆ ಹಾನಿಕರವಾಗಿರುವಂತೆಯೇ ನಿಮ್ಮ ಬ್ಯಾಟರಿಯನ್ನೂ ಅತಿಯಾಗಿ ಚಾರ್ಜ್ ಮಾಡಬೇಡಿ. ಸಂಪೂರ್ಣವಾಗಿ ನೀವು ಫೋನ್ ಚಾರ್ಜ್ ಮಾಡುತ್ತೀರಿ ಎಂದಾದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಡ್ರೈನ್ ಆಗುತ್ತದೆ. ಮೇಲಿನ ಸಲಹೆಗೆ ಇದು ತದ್ವಿರುದ್ದ.!!

ಚಾರ್ಜರ್ ಬಳಕೆ ಬಗ್ಗೆ ಜಾಗೃತ!!

ಚಾರ್ಜರ್ ಬಳಕೆ ಬಗ್ಗೆ ಜಾಗೃತ!!

ನಿಜವಾಗಿಯೂ ಬಹುತೇಕರ ಸಮಸ್ಯೆ ಇದೇ. ಆದರೆ, ಇದು ಬ್ಯಾಟರಿ ಸಮಸ್ಯೆಯಲ್ಲ. ಚಾರ್ಜರ್ ಪಿನ್‌ ಸಮಸ್ಯೆ. ಸೂಕ್ಮವಾಗಿರುವ ವಸ್ತುಗಳ ಮೇಲೆ ಹೆಚ್ಚು ಬಲಪ್ರಯೂಗ ಮಾಡಿದಂತೆ. ಯಾವಾಗಲೂ ಚಾರ್ಜ್ರ್ ತೆಗೆದು ಹಾಕಿ ಮಾಡುವುದರಿಂದ ಸ್ಮಾರ್ಟ್‌ಫೊನ್ ಚಾರ್ಜರ್ ಪಿನ್ ಹಾಳಾಗುತ್ತದೆ.! ಹಾಗಾಗಿ, ಚಾರ್ಜ್‌ರ್ ಪಿನ್ ಬಗ್ಗೆ ಜಾಗರೂಕವಾಗಿರಿ.! ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಮಾಹಿತಿಯುಕ್ತ ಲೇಖನಗಳಿಗಾಗಿ ನಮ್ಮ ಫೆಸ್‌ಬುಕ್ ಪೇಜ್ ಲೈಕ್‌ ಮಾಡಿ.!

Best Mobiles in India

English summary
Xiaomi Mi A1 Blast (catches fire) while playing PUBG and using a third party charger .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X