ಡೆಲ್ ಪ್ರಿಸೆಸನ್ ಎಂ600 ಲ್ಯಾಪ್ ಟಾಪ್ ವಿಮರ್ಶೆ

Posted By: Staff

ಡೆಲ್ ಪ್ರಿಸೆಸನ್ ಎಂ600 ಲ್ಯಾಪ್ ಟಾಪ್ ವಿಮರ್ಶೆ
ಡೆಲ್ ಕಂಪ್ಯೂಟರ್ ಹೊರತಂದ ನೂತನ ಲ್ಯಾಪ್ ಟಾಪ್ "ಡೆಲ್ ಪ್ರಿಸಿಸಿನ್ ಎಂ6600" ಮೊದಲ ನೋಟದಲ್ಲಿಯೇ ಇಷ್ಟವಾಗುತ್ತದೆ. ಯಾಕೆಂದರೆ ಇದು ಹೆಚ್ಚು ದಕ್ಷತೆ ಮತ್ತು ಶಕ್ತಿಶಾಲಿಯಾಗಿರುವ ವರ್ಕ್ ಸ್ಟೇಷನ್ ಹೊಂದಿದೆ. ಇದು ಮಾರುಕಟ್ಟೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬಂದಿರುವುದರಿಂದ ಹ್ಯಾಟ್ಸಪ್ ಅನ್ನಲೇ ಬೇಕು.

ಈ ಲ್ಯಾಪ್ ಟಾಪ್ ಸ್ಯಾಂಡಿ ಬ್ರಿಡ್ಜ್ ಕೋರ್ ಐ5 ಪ್ರೊಸೆಸರ್ ಹೊಂದಿದೆ. ಇದರಲ್ಲಿ 8ಜಿಬಿಯ 1,333 ಮೆಗಾ ಹರ್ಟ್ಸ್ ಡಿಡಿಆರ್3 RAM ಇದೆ. ಇದರಿಂದಾಗಿ ಲ್ಯಾಪ್ ಟಾಪ್ ಆಕ್ಸೆಸ್ ಅತ್ಯಂತ ವೇಗವಾಗಿ ಮಾಡಬಹುದಾಗಿದೆ. ಡೆಲ್ ಪ್ರಿಸಿಸಿನ್ ಎಂ600 ಲ್ಯಾಪ್ ಟಾಪ್ ಅವಳಿ ಹಾರ್ಡ್ ಸಿಸ್ಕ್ ಹೊಂದಿದೆ.

ಇದು 8ಜಿಬಿಯ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದಕ್ಕೆ ಮೆಮೊರಿ ಕಾರ್ಡ್ ಹಾಕಿದರೆ 32 ಜಿಬಿವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಹಲವು ಫೀಚರುಗಳನ್ನು ಹೊಂದಿರುವ ಈ ಲ್ಯಾಪಿ ದರ ಕೊಂಚ ದುಬಾರಿ ಎನಿಸಬಹುದು. ಇದರ ದರ ಸುಮಾರು 95,266 ರುಪಾಯಿ.

ವಿಶೇಷತೆಗಳು

* ಹೆಸರು: ಡೆಲ್ ಪ್ರಿಸಿಸಿನ್ ಎಂ6600
* ಡಿಸ್ ಪ್ಲೇ ಗಾತ್ರ: 17.3 ಇಂಚು, ಮಲ್ಟಿ ಟಚ್
* 3ಜಿ ಮತ್ತು 4 ಜಿಗೂ ಸಪೋರ್ಟ್ ಮಾಡುತ್ತದೆ
* ಬ್ಯಾಕ್ ಲಿಟ್ ಕೀ ಬೋರ್ಡ್
* ಎರಡು ಯುಎಸ್ ಬಿ ಪೋರ್ಟ್
* ಎಚ್ ಡಿಎಂಐ, ಎನ್ ಜಿಎ
* ಗಿಗಾಬಿಟ್ ಈಥರ್ ನೆಟ್
* ಬ್ಲೂರೇ ಡಿವಿಡಿ ಬರ್ನರ್, ಎಸ್ ಡಿ ಕಾರ್ಡರ್ ಇತ್ಯಾದಿ ಫೀಚರುಗಳಿವೆ
* ದರ: 95,266 ರುಪಾಯಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot