Subscribe to Gizbot

ಉತ್ತಮ ಫೋಟೋ ಕ್ಲಿಕ್ ಮಾಡಲು ಆಂಡ್ರಾಯ್ಡ್ ಆಪ್

Posted By: Varun
ಉತ್ತಮ ಫೋಟೋ ಕ್ಲಿಕ್ ಮಾಡಲು ಆಂಡ್ರಾಯ್ಡ್ ಆಪ್

ಬಹುತೇಕ ಮಂದಿ ಸ್ಮಾರ್ಟ್ ಫೋನ್ ಕೊಂಡುಕೊಳ್ಳುವಾಗ ಅದರಲ್ಲಿನ ಕ್ಯಾಮರಾ ಬಗ್ಗೆಯೂ ಹೆಚ್ಚಿನ ಗಮನ ಹರಿಸುತ್ತಾರೆ. ಅದರಲ್ಲೂ ಫೋಟೋಗ್ರಫಿ ಹುಚ್ಚು ಇರುವರರು ಕ್ಯಾಮರಾದ ಎಫೆಕ್ಟ್ ಬಗ್ಗೆಯೂ ಯೋಚಿಸುತ್ತಾರೆ.

ಹಾಗಾಗಿ ನಿಮ್ಮ ಮೊಬೈಲ್ ನಲ್ಲಿ ಒಳ್ಳೆಯ ಆಂಡ್ರಾಯ್ಡ್ ಆಪ್ ಒಂದನ್ನು ನೀವು ಡೌನ್ಲೋಡ್ ಮಾಡಿಕೊಂಡರೆ ನೀವು ತೆಗೆಯುವ ಫೋಟೋಗೆ ಒಳ್ಳೆಯ ಎಫೆಕ್ಟ್ ಕೊಡುವುದರ ಜೊತೆಗೆ ಹೈ ಕ್ವಾಲಿಟಿ ಚಿತ್ರವನ್ನು ಈ ಆಪ್ ಮೂಲಕ ತೆಗೆಯಬಹುದು.

Pixlr-o-matic ಹೆಸರಿನ ಈ ಆಪ್ ಕೇವಲ 6.6 MB ಸೈಜ್ ಇದ್ದು ವಿಂಟೇಜ್ ಫೀಚರ್, ಓವರ್ ಲೇ, ಹಾಗು ಫ್ರೇಮ್ ಗಳನ್ನ ಹೊಂದಿರುವ ಈ ಆಪ್ 100 ಕ್ಕೂ ಹೆಚ್ಚು ಎಫೆಕ್ಟ್ ಹೊಂದಿದ್ದು, 350 ಓವರ್ ಲೇ ಗಳನ್ನೂ ಒದಗಿಸುತ್ತದೆ ಹಾಗು ಕ್ರಾಪ್ ಕೂಡ ಮಾಡಬಹುದು. ಇದಷ್ಟೇ ಅಲ್ಲದೆ ನಿಮ್ಮ ಮೊಬೈಲ್ ನ ಫೋಟೋಗಳನ್ನು ಕೂಡ ಎಡಿಟ್ ಮಾಡಿ ಎಫೆಕ್ಟ್ ಬಳಸಬಹುದಾಗಿದೆ.

ಗೂಗಲ್ ಪ್ಲೇ ನಲ್ಲಿ ಉಚಿತವಾಗಿ ದೊರೆಯಲಿರುವ ಈ ಆಪ್ ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot