ಸ್ಮಾರ್ಟ್‌ಫೋನ್‌ ಆಂತರಿಕ ಮೆಮೊರಿ ಸಾಲುತ್ತಿಲ್ಲವೇ?.ಹೀಗೆ ಮಾಡಿ ಹೆಚ್ಚಿಸಿಕೊಳ್ಳಿ.!

|

ಮನುಷ್ಯನಿಗೆ ಸ್ಮಾರ್ಟ್‌ಫೋನ್‌ ಅಗತ್ಯದ ಸಾಧನವಾಗಿದ್ದು, ಬಹುತೇಕ ಕೆಲಸಗಳನ್ನು ಫೋನಿನ ಮೂಲಕವೇ ನಡೆಸುತ್ತಾನೆ. ಅದಕ್ಕಾಗಿ ಅನೇಕ ಆಪ್‌ಗಳನ್ನು ಬಳಸಬೇಕಾಗುತ್ತದೆ. ಆದರೆ ಎಷ್ಟೋ ಸಹ ಸ್ಮಾರ್ಟ್‌ಫೋನಿನ ಆಂತರಿಕ ಸಂಗ್ರಹ ಸಾಮರ್ಥ್ಯ ಸಾಕಾಗುವುದಿಲ್ಲ ಎಂದಿನಿಸುತ್ತದೆ. ಇರುವ ಸ್ಥಳಾವಕಾಶದಲ್ಲಿಯೇ ಅತ್ಯುತ್ತಮವಾಗಿ ಸ್ಮಾರ್ಟ್‌ಫೋನ್ ನಿರ್ವಹಿಸಲು ಸಾಧ್ಯವಿದೆ.

ಸ್ಮಾರ್ಟ್‌ಫೋನ್‌ ಆಂತರಿಕ ಮೆಮೊರಿ ಸಾಲುತ್ತಿಲ್ಲವೇ?.ಹೀಗೆ ಮಾಡಿ ಹೆಚ್ಚಿಸಿಕೊಳ್ಳಿ.!

ಹೌದು, ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಕಡಿಮೆ ಎಂದರೂ 32GB ಆಂತರಿಕ ಮೆಮೊರಿಯನ್ನು ಒದಗಿಸಿರುತ್ತಾರೆ ಜೊತೆಗೆ ಹೆಚ್ಚಿನ ಸಂಗ್ರಹ ಸಾಮರ್ಥ್ಯದ ವೇರಿಯಂಟಿಗಳ ಆಯ್ಕೆಯು ಸಹ ದೊರೆಯುತ್ತದೆ. ಇರುವ ಸ್ಥಳಾವಕಾಶದಲ್ಲಿಯೇ ಸುಲಲಿತವಾಗಿ ಸ್ಮಾರ್ಟ್‌ಫೋನ್ ಬಳಸಬಹುದಾಗಿದೆ. ಹಾಗಾದರೆ ಸ್ಮಾರ್ಟ್‌ಫೋನ್‌ಗಳ ಆಂತರಿಕ ಮೆಮೊರಿ ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ನೋಡೋಣ ಬನ್ನಿರಿ.

ಕ್ಲೌಡ್‌ ಸ್ಟೋರೇಜ್

ಕ್ಲೌಡ್‌ ಸ್ಟೋರೇಜ್

ಕ್ಲೌಡ್‌ ಸ್ಟೋರೆಜ್ ಬಳಕೆ ಮಾಡಬೇಕಾದಲ್ಲಿ ನಿಮ್ಮ ಡೇಟಾ ಸೇವೆಯು ಸ್ಪೀಡ್ ನಿಂದ ಕೂಡಿರಬೇಕು ಇಂತಹ ಸಮಯದಲ್ಲಿ ಇದನ್ನು ಬಳಕೆ ಮಾಡಬಹುದು. ಇದು ಉತ್ತಮವಾದ ವಿಧಾನವಾಗಿದೆ. ಇಲ್ಲಿ ನಿಮ್ಮ ಡೇಟಾ ಸೇವ್ ಮಾಡುವ ಮೂಲಕ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು.

ಅನಗತ್ಯ ಆಪ್ ಬೇಡ

ಅನಗತ್ಯ ಆಪ್ ಬೇಡ

ಉಪಯುಕ್ತವಿಲ್ಲದ ಆಪ್ ಗಳನ್ನು ಡಿಲಿಟ್ ಮಾಡಿ. ಇದರೊಂದಿಗೆ ನೀವು ಸ್ಮಾರ್ಟ್ಫೋನ್ನಲ್ಲಿ ಕೆಲವೊಂದು ಅನಗತ್ಯ ಆಪ್ ಅನ್ನು ನೀವು ಸೇರಿಸಿಕೊಂಡಿರುತ್ತಿರಿ ಅವುಗಳನ್ನು ಮೊದಲು ಡಿಲೀಟ್ ಮಾಡಿ. ಇದರಿಂದ ನಿಮಗೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಪ್ರಮಾಣದ ಸ್ಥಳಾವಕಾಶ ದೊರೆಯಲಿದೆ ಜೊತೆಗೆ ಅಲ್ಲಿ ತುಂಬಿಕೊಳ್ಳುವ ಕ್ಯಾಚ್ ಗಳು ಇರಲಾರವು.

ಗೇಮ್ಸ್‌ ನಿಯಂತ್ರಣ

ಗೇಮ್ಸ್‌ ನಿಯಂತ್ರಣ

ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಬಹುತೇಕರು ಗೇಮ್ ಪ್ರಿಯರೇ. ಹೀಗಾಗಿ ಇವರು ದೊಡ್ಡ ಮೆಮೊರಿಯ ಗೇಮ್ಸ್‌ಗಳನ್ನು ಸ್ಮಾರ್ಟ್‌ಫೋನಿಗೆ ತುಂಬಿಕೊಳ್ಳುತ್ತಾರೆ ಇದರಿಂದ ಮೆಮೊರಿ ಫೂಲ್ ಆಗಿ ಸ್ಮಾರ್ಟ್‌ಫೋನ್ ಸ್ಲೋ ಆಗುತ್ತದೆ. ಅದಕ್ಕಾಗಿ ದೊಡ್ಡ ಮೆಮೊರಿ ಗೇಮ್ಸ್‌ ಇನ್‌ಸ್ಟಾಲ್‌ ಬೇಡ.

ಅನಗತ್ಯ ಸ್ಟೋರೆಜ್ ಬೇಡ

ಅನಗತ್ಯ ಸ್ಟೋರೆಜ್ ಬೇಡ

ಸಾಮಾನ್ಯವಾಗಿ ಸ್ಮಾರ್ಟ್‌ಫೋನಿನಲ್ಲಿ ಸಿನಿಮಾ ನೋಡುತ್ತಾರೆ, ಆದರೆ ಸಿನಿಮಾ ನೋಡಿದ ಮೇಲೆ ಡಿಲಿಟ್ ಮಾಡಿದರೇ ಸ್ಥಳ ಸೀಗುತ್ತದೆ. ಸಿನಿಮಾವನ್ನು ಅನಗತ್ಯವಾಗಿ ಅಲ್ಲಿಯೇ ಇಟ್ಟರೆ ಅದು ಸ್ಪೇಸ್ ನುಂಗಿ ಹಾಕುತ್ತದೆ. ಬೇರೆದವರಿಗೆ ಕಳುಹಿಸಲು ಬರುತ್ತದೆ ಎಂದು ನಿಮ್ಮಲ್ಲಿಯೇ ಉಳಿಸಿಕೊಳ್ಳಬೇಡಿ. ಡಿಲೀಟ್ ಮಾಡುವುದು ಬೇಟರ್.

ಕ್ಯಾಚ್ ಕ್ಲಿಯರ್ ಇರಲಿ

ಕ್ಯಾಚ್ ಕ್ಲಿಯರ್ ಇರಲಿ

ಕ್ಯಾಚ್ ಕ್ಲಿಯರ್‌ ಮಾಡುತ್ತಲೇ ಇರಬೇಕು ಇದು ಮೆಮೊರಿ ನಿಮಗೆ ನಷ್ಟವಾಗುತ್ತದೆ ಸ್ಮಾರ್ಟ್‌ಫೋನ್‌ ಸೆಟಿಂಗ್ ಗೆ ಹೋಗಿ ಕ್ಯಾಚ್‌ ಕ್ಲಿಯರ್ ಮಾಡಿಕೊಳ್ಳಿರಿ. ಇದರಿಂದ ಅನಗತ್ಯ ಸ್ಥಳ ಖಾಲಿ ಆಗುತ್ತದೆ ಸ್ಮಾರ್ಟ್‌ಫೋನ್‌ ವೇಗವಾಗುತ್ತದೆ ಮತ್ತು ಜಾಗ ಸಹ ಸೀಗುತ್ತದೆ. ಹೀಗಾಗಿ ಕ್ಯಾಚ್ ಕ್ಲಿಯರ್ ಮಾಡುವುದು ಸೂಕ್ತ ಎಂದು ಹೇಳಬಹುದು.

ಗೂಗಲ್‌ ಫೋಟೋಸ್

ಗೂಗಲ್‌ ಫೋಟೋಸ್

ನೀವು ಸೆರೆಹಿಡಿಯುವ ಗ್ಯಾಲರಿಯಲ್ಲಿ ಸೇವ್ ಮಾಡದೇ ನೀವು ಅವುಗಳನ್ನು ಗೂಗಲ್ ಅಕೌಂಟ್ ನಲ್ಲಿ ಸೇವ್ ಮಾಡಬಹುದು ಇದರಿಂದ ನಿಮಗೆ ಅಧಿಕವಾದ ಮಾದರಿಯಲ್ಲಿ ಸ್ಮಾರ್ಟ್ ಫೋನ್ ನ ಮೆಮೊರಿ ಉಳಿಕೆ ಆಗುತ್ತದೆ. ಹೀಗಾಗಿ ನೀವು ಸಾಧ್ಯವಾದಷ್ಟು ಫೋಟೋಗಳನ್ನು ಗೂಗಲ್‌ನಲ್ಲಿ ಸೇವ್ ಮಾಡಿ. ಮೆಮೊರಿ ಉಳಿಕೆ ಆಗುತ್ತದೆ.

ಸ್ಮಾರ್ಟ್‌ಫೋನ್ ರಿಸ್ಟೋರ್‌

ಸ್ಮಾರ್ಟ್‌ಫೋನ್ ರಿಸ್ಟೋರ್‌

ಸ್ಮಾರ್ಟ್‌ಫೋನ್‌ ರಿಸ್ಟೋರ್‌ ಮಾಡುವುದು ಸಹ ಒಂದು ಉಪಯುಕ್ತ ವಿಧಾನ. ಇದರಿಂದ ಅನಗತ್ಯ ಆಪ್‌ ಸೇರಿದಂತೆ ಮೆಮೊರಿ ಫುಲ್ ಆಗಿರುವ ಕೇಲವು ಅಉಪಯುಕ್ತ ಡಾಟಾ ಸ್ಮಾರ್ಟ್‌ಫೋನಿನಿಂದ ಹೊರಹಾಕಿದಂತೆ ಆಗುತ್ತದೆ. ಮೆಮೊರಿ ಸಹ ಹೆಚ್ಚುತ್ತದೆ.

Best Mobiles in India

English summary
Here’s How You can Increase the Internal Storage in Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X