Subscribe to Gizbot

ಜಿಯೋ ಫೋನ್ ಆಗಸ್ಟ್ 24 ರಿಂದ ಬುಕಿಂಗ್ ಶುರು: ಆನ್‌ಲೈನ್‌-ಆಫ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

Written By:

ಜಿಯೋ ಫೋನ್ ಮಾರುಕಟ್ಟೆಯಲ್ಲಿ ಹೊಸ ಆಲೆಯನ್ನು ಸೃಷ್ಟಿಸಿದ್ದು, ಸ್ಮಾರ್ಟ್‌ಫೋನ್ ಅಲೆಗೆ ವಿರುದ್ಧವಾಗಿ ಫೀಚರ್ ಫೋನ್ ಗಳ ಶಕೆಯನ್ನು ಆರಂಭಿಸಲು ಮುಂದಾಗಿದೆ. ಈಗಾಗಲೇ ಅನೇಕ ಕಂಪನಿಗಳು 4G ಸಪೋರ್ಟ್ ಮಾಡುವ ಫೀಚರ್ ಫೋನ್ ಗಳನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿವೆ. ಈ ಹಿನ್ನಲೆಯಲ್ಲಿ ಜಿಯೋ ಫೋನ್ ಆಗಸ್ಟ್ 24 ರಿಂದ ಬುಕಿಂಗ್ ಅನ್ನು ಆರಂಭಿಸಲಿದೆ.

ಜಿಯೋ ಫೋನ್ ಆಗಸ್ಟ್ 24 ರಿಂದ ಬುಕಿಂಗ್ ಶುರು

ಓದಿರಿ: ಏರ್‌ಟೆಲ್‌ನಿಂದ ಕೌಂಟರ್ : ಜಿಯೋ ಬೇಡ ಎಂದ ಗ್ರಾಹಕ! ಯಾವುದು ಆಫರ್?

ಈ ಹಿನ್ನಲೆಯಲ್ಲಿ ಜಿಯೋ ಫೋನ್ ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಹೇಗೆ ಬುಕ್ ಮಾಡುವುದು ಎನ್ನುವುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ. ಜಿಯೋ ಫೋನ್ ಆದ್ಯತೆಯ ಮೇಲೆಗೆ ಲಭ್ಯವಿರಲಿದ್ದು, ಯಾರು ಮೊದಲಿಗೆ ಬುಕ್ ಮಾಡುವರೋ ಅವರಿಗೆ ಮೊದಲು ಫೋನ್ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಆಗಸ್ಟ್ 15ಕ್ಕೆ ಲಾಂಚ್:

ಆಗಸ್ಟ್ 15ಕ್ಕೆ ಲಾಂಚ್:

ಕಳೆದ ತಿಂಗಳು ಜಿಯೋ ಫೋನ್ ಬಗ್ಗೆ ಮಾಹಿತಿ ನೀಡಿದ್ದ ರಿಲಯನ್ಸ್, ಆಗಸ್ಟ್ 15ಕ್ಕೆ ಲಾಂಚ್ ಮಾಡಲಿದೆ, ಆಗಸ್ಟ್ 24 ರಿಂದ ಬುಕಿಂಗ್ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಇದನ್ನು ಬುಕ್ ಮಾಡಬಹುದಾಗಿದೆ.

ಆನ್‌ಲೈನ್ ನಲ್ಲಿ ಬುಕ್ ಮಾಡುವುದು ಹೇಗೆ.?

ಆನ್‌ಲೈನ್ ನಲ್ಲಿ ಬುಕ್ ಮಾಡುವುದು ಹೇಗೆ.?

ಜಿಯೋ ಫೋನ್ ಕೊಳ್ಳಬೇಕು ಎಂದುಕೊಂಡವರು ಜಿಯೋ ವೈಬ್ ಸೈಟಿನಲ್ಲಿ ನೀವು ಈ ಫೋನ್ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಒಂದು ಆಯ್ಕೆಯನ್ನು ನೀಡಿದ್ದು, ಅದನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಮುಂದೆ ನೋಡುವ.

ಜಿಯೋ ವೆಬ್‌ಸೈಟ್ ನಲ್ಲಿ ಬುಕ್ ಮಾಡಿ:

ಜಿಯೋ ವೆಬ್‌ಸೈಟ್ ನಲ್ಲಿ ಬುಕ್ ಮಾಡಿ:

ಮೊದಲಿಗೆ ಜಿಯೋ ವೆಬ್‌ಸೈಟಿಗೆ ಭೇಟಿ ನೀಡಿ, ವೆಬ್‌ಸೈಟಿನಲ್ಲಿ ಹಾಕಿರುವ ' ಇಂಡಿಯಾ ಕಾ ಸ್ಮಾರ್ಟ್‌ಫೋನ್ ಜಿಯೋ ಫೋನ್' ಚಿತ್ರದೊಂದಿಗೆ ಇರುವ '"Keep me posted" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಅರ್ಜಿ ತುಂಬಿರಿ:

ಅರ್ಜಿ ತುಂಬಿರಿ:

ಅಲ್ಲಿ ನೀಡಿರುವ ಅರ್ಜಿಯಲ್ಲಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ, ಹೆಸರು, ವಿಳಾಸ, ಮೊಬೈಲ್ ನಂಬರ್, ಇಮೇಲ್ ಐಡಿ, ಪಿನ್‌ಕೋಡ್ ಮುಂತಾದವುಗಳನ್ನು ಭರ್ತಿ ಮಾಡಿ. ನಂತರ ಟರ್ಮ್ಸ್ ಅಂಡ್ ಕಂಡಿಷನ್ ಆಯ್ಕೆಯ ಮೇಲೆ ಒಪ್ಪಿಗೆ ಸೂಚಿಸಿ ಇಷ್ಟು ಮಾಡಿದ ನಂತರದಲ್ಲಿ ನಿಮ್ಮ ರಿಕ್ವೇಸ್ಟ್ ಅನ್ನು ಸಬ್‌ಮಿಟ್ ಮಾಡಿರಿ.

ಜಿಯೋ ಆಪ್‌ನಲ್ಲಿ ಬುಕ್ ಮಾಡಿ:

ಜಿಯೋ ಆಪ್‌ನಲ್ಲಿ ಬುಕ್ ಮಾಡಿ:

ಇದಲ್ಲದೇ ಜಿಯೋಫೋನ್ ಅನ್ನು ನಿಮ್ಮ ಮೊಬೈಲ್ ನಲ್ಲಿರುವ ಜಿಯೋ ಆಪ್ ನಲ್ಲಿ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಆಪ್ ನಲ್ಲಿ ಹೊಸ ಆಯ್ಕೆಯನ್ನು ನೀಡಲಿದ್ದು, ಅಲ್ಲಿಯೂ ನೀವು ಜಿಯೋ ಫೋನ್ ಬುಕ್ ಮಾಡಬಹುದಾಗಿದೆ.

ಆಫ್‌ಲೈನ್‌ ನಲ್ಲಿ ಬುಕ್ ಮಾಡಬಹುದು:

ಆಫ್‌ಲೈನ್‌ ನಲ್ಲಿ ಬುಕ್ ಮಾಡಬಹುದು:

ಅಲ್ಲದೇ ಈ ಫೋನ್ ಅನ್ನು ಆಫ್‌ಲೈನ್ ನಲ್ಲಿಯೂ ಬುಕ್ ಮಾಡಬಹುದು. ಜಿಯೋ ಔಟ್ ಲೈಟ್ ನಲ್ಲಿ ಹಾಗೂ ಜಿಯೋ ಸ್ಟೋರ್ ಗಳಲ್ಲಿಯೂ ಬುಕ್ ಮಾಡಬಹುದು. ಜೊತೆಗ ರಿಲಯನ್ಸ್ ಡಿಜಿಟಲ್ ನಲ್ಲಿಯೂ ಹೋಗಿ ಸಹ ನೀವು ಬುಕ್ ಮಾಡಬಹುದು.

ಪ್ರತಿ ವಾರ 5 ಲಕ್ಷ ಫೋನ್ ಮಾರಾಟ:

ಪ್ರತಿ ವಾರ 5 ಲಕ್ಷ ಫೋನ್ ಮಾರಾಟ:

ಆಗಸ್ಟ್ ನಲ್ಲಿ ಬುಕ್ ಮಾಡಿದ ನಂತರ ಈ ಫೋನ್ ಸೆಪ್ಟಂಬರ್ ನಲ್ಲಿ ಗ್ರಾಹಕರ ಕೈಗೆ ಸೇರಿಸಲಿದೆ. ಅಲ್ಲದೇ ಪ್ರತಿ ವಾರ 5 ಲಕ್ಷ ಫೋನ್ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ. ಒಟ್ಟು 50 ಕೋಟಿ ಫೋನ್ ಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Jio Phone bookings online, you can check the MyJio app on August 24. Till then, you can sign up for updates on the Jio.com website. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot