ಇಂದಿನಿಂದ 'ಒನ್‌ಪ್ಲಸ್ 7' ಸೇಲ್ ಆರಂಭ!..ಖರೀದಿ ಹೇಗೆ? ಆಫರ್ ಏನೇನಿವೆ?

|

ಭಾರತ ಸೇರಿದಂತೆ ವಿಶ್ವ ಮೊಬೈಲ್ ಮಾರುಕಟ್ಟೆ ಭಾರೀ ನಿರೀಕ್ಷೆ ಹೊತ್ತು ಕಾಯುತ್ತಿರುವ 'ಒನ್‌ಪ್ಲಸ್ 7' ಸ್ಮಾರ್ಟ್‌ಫೋನ್ ದೇಶದಲ್ಲಿ ಇಂದಿನಿಂದ ಮಾರಾಟಕ್ಕೆ ಬರುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಡಾಟ್ ಇನ್\ ಹಾಗೂ ಒನ್‌ಪ್ಲಸ್ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ಗಳಲ್ಲಿ 'ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಫ್ಲಾಶ್‌ಸೇಲ್ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಅತ್ಯುತ್ತಮ ಆಫರ್‌ಗಳ ಮೂಲಕ ಸ್ಮಾರ್ಟ್‌ಫೋನನ್ನು ಖರೀದಿಸಬಹುದಾಗಿದೆ.

ಹೌದು, 'ಒನ್‌ಪ್ಲಸ್ 7' ಸ್ಮಾರ್ಟ್‌ಫೋನಿನ ಮೇಲೆ ಜಿಯೋ ಈಗಾಗಲೇ 9,300 ರೂ. ಮೌಲ್ಯದ ಲಾಭದಂತಹ ಕೊಡುಗೆಯನ್ನು ನೀಡಿದ್ದು, 'ಒನ್‌ಪ್ಲಸ್ 7' ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಜಿಯೋವಿನ 299 ಪ್ರಿಪೇಯ್ಡ್ ಯೋಜನೆಯನ್ನು ರೀಚಾರ್ಜ್ ಮಾಡಿದರೆ ಈ ಲಾಭ ಗ್ರಾಹಕರಿಗೆ ಸಿಗಲಿದೆ. ಇದರಲ್ಲಿ 5400ರೂ ಕ್ಯಾಶ್‌ಬ್ಯಾಕ್ ರೀತಿಯಲ್ಲಿ ಸಿಕ್ಕರೆ, ಇನ್ನುಳಿದ ಹಣ 150 ರೂ.ಗಳ 36 ರಿಯಾಯಿತಿ ಕೂಪನ್‌ಗಳ ರೂಪದಲ್ಲಿ ದೊರೆಯಲಿದೆ.

ಇಂದಿನಿಂದ 'ಒನ್‌ಪ್ಲಸ್ 7' ಸೇಲ್ ಆರಂಭ!..ಖರೀದಿ ಹೇಗೆ? ಆಫರ್ ಏನೇನಿವೆ?

ಇನ್ನು ಬಳಕೆದಾರರಿಗೆ ಒನ್‌ಪ್ಲಸ್ 7 ಖರೀದಿ ಕೈಗೆಟುಕುವಂತೆ ಮಾಡಲು 3 ತಿಂಗಳುಗಳವರೆಗೆ ಫ್ರೀ ಇಎಂಐ ಮತ್ತು ಫೋನ್ ಅಪ್‌ಗ್ರೇಡ್ ಮಾಡಲು ಬಯಸಿದರೆ ಶೇ 70 ರಷ್ಟು ವಿನಿಮಯ ದರ ಗ್ಯಾರಂಟಿ ನೀಡಿದೆ. ಹಾಗಾದರೆ, 32,999 ರೂ.ಗಳಿಗೆ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಭಾರೀ ಹವಾ ಎಬ್ಬಿಸಿರುವ ಒಸ್‌ಪ್ಲಸ್ 7 ಸ್ಮಾರ್ಟ್‌ಫೋನ್ ಹೇಗಿದೆ?, ಒನ್‌ಪ್ಲಸ್ 6ಟಿಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾದ ಒನ್‌ಪ್ಲಸ್ 7 ಹೊಂದಿರುವ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ ಒನ್‌ಪ್ಲಸ್ 7 ಡಿಸೈನ್?

ಹೇಗಿದೆ ಒನ್‌ಪ್ಲಸ್ 7 ಡಿಸೈನ್?

ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್‌ಗಳ ವ್ಯತ್ಯಾಸಗಳಲ್ಲಿ ಸ್ಮಾರ್ಟ್‌ಫೋನಿನ ಡಿಸೈನ್ ಮೊದಲ ಸ್ಥಾನದಲ್ಲಿದೆ. ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯಲ್ಲಿ ನೋಚ್ ವಿನ್ಯಾಸವನ್ನು ಹೊಂದಿದ್ದು, ಫೋನ್‌ ಬಾಡಿ ಸಂಪೂರ್ಣ ಗ್ಲಾಸ್ ಮೆಟಲ್ ಯುನಿಬಾಡಿಯಿಂದ ರಚಿತವಾಗಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಫೋನ್, ಕ್ಯಾಮೆರಾಗಳ ನಡುವೆ ಎಲ್‌ಇಡಿ ಫ್ಲ್ಯಾಶ್ ಆಯ್ಕೆಯೊಂದನ್ನು ಹೊರತುಪಡೆಸಿ, ಒನ್‌ಪ್ಲಸ್‌ 7 ನೋಡಲು ಬಹುತೇಕ ಒನ್‌ಪ್ಲಸ್‌ 6T ಮಾದರಿಯನ್ನೆ ಹೋಲುವಂತಿದೆ. ಅತ್ಯಂತ ಕಡಿಮೆ ಬೆಜೆಲ್ ಲೆಸ್ ವಿನ್ಯಾಸದಲ್ಲಿ ಫೋನ್ ಬಿಡುಗಡೆಯಾಗಿದೆ ಎಂದು ಹೇಳಬಹುದು.

ಒನ್‌ಪ್ಲಸ್ 7 ಡಿಸ್‌ಪ್ಲೇ ಹೇಗಿದೆ?

ಒನ್‌ಪ್ಲಸ್ 7 ಡಿಸ್‌ಪ್ಲೇ ಹೇಗಿದೆ?

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್‌ಗಳ ರೆಸೊಲ್ಯೂಷನ್ ಹೊಂದಿರುವ 6.41 ಇಂಚಿನ ಆಪ್ಟಿಕ್ AMOLED ಕೆಪ್ಯಾಸಿಟಿವ್ ಟಚ್ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. 402 ಪಿಕ್ಸೆಲ್‌ಗಳ ಪಿಪಿಐ ಮತ್ತು 19.5: 9ರ ಆಕಾರ ಅನುಪಾತದಲ್ಲಿ ಸ್ಕ್ರೀನ್ ಅನ್ನು ನೀಡಲಾಗಿದ್ದು, ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಕ್ರೀನ್ ಇದಾಗಿದೆ. DCI-P3 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಒನ್‌ಪ್ಲಸ್ 7 ಪ್ರೊಸೆಸರ್ ಹೇಗಿದೆ?

ಒನ್‌ಪ್ಲಸ್ 7 ಪ್ರೊಸೆಸರ್ ಹೇಗಿದೆ?

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಪ್ರಸ್ತುತ ಅತ್ಯಂತ ಉತ್ತಮ ಪ್ರೊಸೆಸರ್ ಅನ್ನು ಕೇವಲ 30 ಸಾವಿರ ರೂ. ಆಸುಪಾಸಿನ ಮೊಬೈಲ್‌ನಲ್ಲಿ ತಂದಿರುವುದು ಮಾರುಕಟ್ಟೆಗೆ ಆಶ್ಚರ್ಯ ಮೂಡಿಸಿದೆ. ಇದರೊಂದಿಗೆ 6GB ಸಾಮರ್ಥ್ಯದ RAM ಇರಲಿದ್ದು, ಹಾಗೂ 128GB ಸಂಗ್ರಹ ಸ್ಥಳಾವಕಾಶ ಒದಗಿಸಲಾಗಿದ್ದು, ಜೊತೆಗೆ UFS 3.0 ಸ್ಟೊರೇಜ್ ಮೋಡೆಲ್ ಬೆಂಬಲ ಪಡೆದಿದೆ. ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಮಲ್ಟಿಟಾಸ್ಕ್ ಕೆಲಸಗಳನ್ನು ಸರಾಗಗೊಳಿಸಿದೆ.

ಒನ್‌ಪ್ಲಸ್ 7 ರಿಯರ್ ಕ್ಯಾಮೆರಾ ಹೇಗಿದೆ?

ಒನ್‌ಪ್ಲಸ್ 7 ರಿಯರ್ ಕ್ಯಾಮೆರಾ ಹೇಗಿದೆ?

ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾವು f / 1.7 ದ್ಯುತಿರಂಧ್ರ ಮತ್ತು 1.6-ಮೈಕ್ರಾನ್ ಪಿಕ್ಸೆಲ್ ಗಾತ್ರ ಹಾಗೂ ಒಂದು f / 2.4 ದ್ಯುತಿರಂಧ್ರದೊಂದಿಗೆ ಬಂದಿದೆ. 1.12-ಮೈಕ್ರಾನ್ ಸಾಮರ್ಥ್ಯದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಆಟೋಫೋಕಸ್ ಪತ್ತೆಹಚ್ಚುವಿಕೆ ಸೆಟಪ್ ಹೊಂದಿರುವ ರಿಯರ್ ಕ್ಯಾಮೆರಾ ಸೆಟಪ್ ಡ್ಯುಯಲ್-ಎಲ್ಇಡಿ ಫ್ಲಾಶ್, ಹೆಚ್‌ಡಿಆರ್, ಪನೋರಮಾ ಆಯ್ಕೆಗಳನ್ನು ಹೊಂದಿರುವುದನ್ನು ನೋಡಬಹುದು.

 ಒನ್‌ಪ್ಲಸ್ 7 ಸೆಲ್ಫೀ ಕ್ಯಾಮೆರಾ ಹೇಗಿದೆ?

ಒನ್‌ಪ್ಲಸ್ 7 ಸೆಲ್ಫೀ ಕ್ಯಾಮೆರಾ ಹೇಗಿದೆ?

ಎಫ್ / 2.0 ಅಪರ್ಚರ್ ಮತ್ತು 1.0-ಮೈಕ್ರಾನ್ ಪಿಕ್ಸೆಲ್ ಗಾತ್ರದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ. ಆಟೋ ಹೆಚ್‌ಡಿಆರ್, 1080p @ 30fps ವಿಡಿಯೋ ಸಾಮರ್ಥ್ಯ ಮತ್ತು ಗೈರೊ-ಇಐಎಸ್ ಫೀಚರ್ಸ್ ಅನ್ನು ಒನ್‌ಪ್ಲಸ್ 7 ಫೋನಿನ ಸೆಲ್ಫೀ ಕ್ಯಾಮೆರಾದಲ್ಲಿ ತರಲಾಗಿದೆ. ಫೇಸ್ ಅನ್ಲಾಕ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರವ ಈ ಸ್ಮಾರ್ಟ್‌ಫೋನ್ ಸೆಲ್ಪೀ ಪ್ರಿಯರ ಅತ್ಯುತ್ತಮ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಲಿದೆ ಎಂದು ಹೇಳಬಹುದು

 ಒನ್‌ಪ್ಲಸ್ 7 ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಒನ್‌ಪ್ಲಸ್ 7 ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸು 3,700mAh ಸಾಮರ್ಥ್ಯದ ತೆಗೆಯಲಾಗದಂತಂಹ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ Wi-Fi 802.11 a / b / g / n / ac, ಜಿಪಿಎಸ್, ಬ್ಲೂಟೂತ್ ವಿ 5.00, ಎನ್ಎಫ್ಸಿ, ಯುಎಸ್ಬಿ ಒಟಿಜಿ, ಯುಎಸ್ಬಿ ಟೈಪ್- ಸಿ, 3 ಜಿ, ಮತ್ತು 4ಜಿ ಹಾಗೂ ಅಕ್ಸೆಲೆರೊಮೀಟರ್, ಬೆಳಕಿನ ಸಂವೇದಕ, ದಿಕ್ಸೂಚಿ / ಮ್ಯಾಗ್ನೆಟೊಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸಂವೇದಕ ಮತ್ತು ಫಿಂಗರ್ಪ್ರಿಂಟ್ ಸಂವೇದಕವನ್ನು ಒಳಗೊಂಡಿರುತ್ತದೆ.

Best Mobiles in India

English summary
OnePlus 7 sale starts today: At Rs 32,999, The phone also comes with some offers including Jio benefits worth Rs 9,300. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X