ಕನ್ನಡೇತರರಿಗೆ ಕನ್ನಡ ಕಲಿಸಲು ಜೆಎನ್‌ಯುನಿಂದ ಹೊಸ ವೆಬ್‌ಸೈಟ್‌..!

|

ಸುಮಾರು 4000 ವರ್ಷಗಳ ಇತಿಹಾಸವಿರುವ ಕನ್ನಡವನ್ನು ಕನ್ನಡೇತರರಿಗೆ ಕಲಿಸಲು ಹೊಸ ಜಾಲತಾಣವನ್ನು ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಸಿದ್ಧಪಡಿಸಿದೆ. ವಾರದ ಹಿಂದೆ ದೆಹಲಿಯಲ್ಲಿ ಬಿಡುಗಡೆಯಾಗಿದ್ದ ಜಾಲತಾಣಕ್ಕೆ ಬೆಂಗಳೂರಿನಲ್ಲಿ ಬುಧವಾರ ಸಚಿವೆ ಜಯಮಾಲಾ ಅನಾವರಣಗೊಳಿಸಿದರು.

ಕನ್ನಡೇತರರಿಗೆ ಕನ್ನಡ ಕಲಿಸಲು ಜೆಎನ್‌ಯುನಿಂದ ಹೊಸ ವೆಬ್‌ಸೈಟ್‌..!

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ 'ಕನ್ನಡ ಕಲಿಕೆ' ಜಾಲತಾಣವನ್ನು ರೂಪಿಸಲಾಗಿದೆ. ಈ ವೆಬ್‌ಸೈಟ್‌ ರಚನೆಗೆ ಇಲಾಖೆ 30 ಲಕ್ಷ ರೂ. ಅನುದಾನವನ್ನು ನೀಡಿತ್ತು. ಈ ಪ್ರಯತ್ನ ಮೊದಲಾಗಿದ್ದು, ವೆಬ್‌ಸೈಟ್‌ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕನ್ನಡ ಕಲಿಕೆಯಲ್ಲಿ ಏನೇನಿದೆ ಮುಂದೆ ನೋಡಿ.

ಜಾಲತಾಣದಲ್ಲಿ ಏನೇನಿದೆ..?

ಜಾಲತಾಣದಲ್ಲಿ ಏನೇನಿದೆ..?

ಕನ್ನಡ ಕಲಿಕೆ ಜಾಲತಾಣದಲ್ಲಿ ಭಾಷಾ ಕಲಿಕೆಯ ಪ್ರಮುಖ ನಾಲ್ಕು ಕೌಶಲಗಳಾದ ಕೇಳುವುದು, ಮಾತನಾಡುವುದು, ಓದುವುದು ಹಾಗೂ ಬರೆಯುವುದನ್ನು ಉತ್ತೇಜನಗೊಳಿಸಲು 30 ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ ಎಂದು ಇಲಾಖೆಯ ಪ್ರಭಾರ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಹೇಳಿದ್ದಾರೆ.

ಹೇಗೆ ಕಲಿಕೆ..?

ಹೇಗೆ ಕಲಿಕೆ..?

ಕನ್ನಡ ಕಲಿಕೆಯಲ್ಲಿ 4 ರಿಂದ 6 ನಿಮಿಷ ಸಮಯದ ಸಾಮಾನ್ಯವಾಗಿ 500 ಪದಗಳಿರುವ ಒಟ್ಟು 30 ವಿಡಿಯೋಗಳನ್ನು ಅಳವಡಿಸಲಾಗಿದೆ. ಆಸಕ್ತರು ಮೊದಲು ವಿಡಿಯೋ ನೋಡಿ, ನಂತರ ಅಲ್ಲಿ ಬಳಸಿದ ಪಠ್ಯವನ್ನು ಕೇಳಬಹುದು. ಪ್ರಮುಖವಾದ ಪದಗಳ ಪಟ್ಟಿಯನ್ನು ಇಂಗ್ಲಿಷ್‌ ಅನುವಾದದ ಜತೆ ಒದಗಿಸಲಾಗಿದೆ. ಇಷ್ಟೇ ಅಲ್ಲದೇ ವ್ಯಾಕರಣ ರೂಪಗಳನ್ನು ವೆಬ್‌ನಲ್ಲಿ ನೋಡಬಹುದು ಎಂದು ವಿಶುಕುಮಾರ್ ಹೇಳಿದ್ದಾರೆ.

ಯಾವ್ಯಾವ ವಿಡಿಯೋಗಳು..?

ಯಾವ್ಯಾವ ವಿಡಿಯೋಗಳು..?

ಕನ್ನಡ ಕಲಿಕೆ ಜಾಲತಾಣದಲ್ಲಿ 30 ವಿಡಿಯೋಗಳಿದ್ದು, ಶಿಶು ಗೀತೆಗಳು, ಕನ್ನಡ ಪತ್ರಿಕೆಗಳು, ನಮ್ಮ ಆಹಾರ, ತರಕಾರಿ ಮಾರುಕಟ್ಟೆ, ಆಧುನಿಕ ಕೃಷಿ, ಕಾಫಿ ಬೆಳೆ. ಯಕ್ಷಗಾನದ ಬಣ್ಣಗಳು, ಬಹುರೂಪಿಗಳು, ಕೊಡಗು ಸೀರೆ, ಕಡಲು, ಮಂಟೆಸ್ವಾಮಿ ಕಾವ್ಯ, ಜನಪದ ಲೋಕ, ಮೆಕ್ಕಿ ಕಟ್ಟೆಯ ಉರುಗಳು, ಕುಡುಬಿಯರು, ಕುಶಲ ಕರ್ಮಿಗಳ ಕಥೆ, ಕನ್ನಡ ಸಂಶೋಧನೆ, ಪತ್ರಿಕೋದ್ಯಮ, ದಾಸರ ಪದಗಳು, ಹೋಟೆಲ್ ಮೈಲಾರಿ, ಭೂತಾರಾಧನೆ, ರಂಗಾಯಣ. ಹೋಟೆಲ್ ಉದ್ಯಮ, ಕುಶಲ ಕರ್ಮಿಗಳ ಶಿಕ್ಷಣ ಸಂಸ್ಥೆ, ಹಂಚಿನ ಕಾರ್ಖಾನೆ, ಶ್ರೀರಂಗಪಟ್ಟಣ, ರಂಗ ಗೀತೆ, ಹಂಪಿ, ಕಲಾವಿದನ ಆತ್ಮಕಥೆ. ರವೀಂದ್ರ ಕಲಾಕ್ಷೇತ್ರ, ಜಾಗತೀಕರಣದ ವಿಡಿಯೋಗಳನ್ನು ಒಳಗೊಂಡಿದೆ.

ಸಾಮಾನ್ಯ ವ್ಯಾಕರಣ

ಸಾಮಾನ್ಯ ವ್ಯಾಕರಣ

ಕನ್ನಡ ಕಲಿಕೆ ಜಾಲತಾಣದಲ್ಲಿ ವಿಡಿಯೋಗಳ ಜತೆ ಸಾಮಾನ್ಯ ವ್ಯಾಕರಣವನ್ನು ಕಲಿಕೆಗೆ ಅನುಗುಣವಾಗಿ ರೂಪಿಸಲಾಗಿದೆ. ವ್ಯಾಕರಣ ವಿಭಾಗದಲ್ಲಿ ಕನ್ನಡ ವರ್ಣಮಾಲೆ, ಕಾಲಗಳು, ವಿಭಕ್ತಿ ಪ್ರತ್ಯಯಗಳು, ಕೃದಂತಗಳು, ಗುಣ ವಿಶೇಷಕ ಹಾಗೂ ಕ್ರಿಯಾ ವಿಶೇಷಕಗಳು, ಅಂಕೆಗಳು. ಪ್ರೇರಣಾತ್ಮಕ ಪ್ರತ್ಯಯಗಳು, ನಾಮಪದಗಳು ಮತ್ತೀತರ ವ್ಯಾಕರಣ ಅಂಶಗಳನ್ನು ಒಳಗೊಂಡಿದೆ.

ಲಿಂಕ್‌ಗಳು ಇವೆ

ಲಿಂಕ್‌ಗಳು ಇವೆ

ಕನ್ನಡ ಕಲಿಕೆಯಲ್ಲಿ ಕನ್ನಡ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಲಿಂಕ್‌ಗಳಿವೆ. ಕನ್ನಡ ಪ್ರಾಧಿಕಾರ, ಕನ್ನೆಡ ಪತ್ರಿಕೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಸರ್ಕಾರದ ವೆಬ್‌ ಲಿಂಕ್‌ಗಳನ್ನು ನೀಡಲಾಗಿದೆ. ಮತ್ತು ಕನ್ನಡ ಕಲಿಕೆಗೆ ಸಹಾಯಕವಾಗುವಂತಹ ತಾಣಗಳ ಲಿಂಕ್‌ಗಳನ್ನು ನೀಡಲಾಗಿದೆ.

ಹೆಚ್ಚಿನ ನೆರವು

ಹೆಚ್ಚಿನ ನೆರವು

ವೆಬ್‌ಸೈಟ್‌ ಅನಾವರಣಗೊಳಿಸಿ ಮಾತನಾಡಿ ಸಚಿವೆ ಜಯಮಾಲಾ, ''ಕನ್ನಡೇತರರಿಗೆ ಕನ್ನಡ ಕಲಿಸಲು ಮೊದಲ ಬಾರಿಗೆ ವೆಬ್‌ಸೈಟ್‌ ರೂಪಿಸಿರುವ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಕಾರ್ಯ ಮೆಚ್ಚುವಂತದ್ದು, ದೆಹಲಿಯ ಕನ್ನಡ ಅಧ್ಯಯನ ಪೀಠಕ್ಕೆ ಹೆಚ್ಚಿನ ನೆರವು ನೀಡಲು ಸರ್ಕಾರ ಮುಂದಾಗುತ್ತದೆ" ಎಂದು ಹೇಳಿದರು.

5 ಕೋಟಿ ರೂ. ನೆರವು ನಿರೀಕ್ಷೆ

5 ಕೋಟಿ ರೂ. ನೆರವು ನಿರೀಕ್ಷೆ

ದೆಹಲಿಯ ಜವಾಹರಲಾಲ್‌ ನೆಹರು ವಿವಿಯ ಕನ್ನಡ ಅಧ್ಯಯನ ಪೀಠ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕಾದರೆ ಸರ್ಕಾರ ಇನ್ನು 5 ಕೋಟಿ ರೂ. ನೆರವು ನೀಡಬೇಕು ಎಂದು ಜೆಎನ್‌ಯು ಕನ್ನಡ ಅಧ್ಯನ ಪೀಠದ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Best Mobiles in India

English summary
JNU launch new kannada learning news web portal. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X