ಪ್ರಪಂಚವನ್ನು ಆಳುತ್ತಿರುವ ಭಾರತೀಯ ಟೆಕ್ ಸಿಇಒಗಳು

Posted By:

ಭಾರತೀಯ ಮೂಲದ ಸುಂದರ್ ಪಿಚ್ಚೈ ಇತ್ತೀಚೆಗೆ ಗೂಗಲ್ ಸಿಇಒ ಆಗಿ ನೇಮಕ ಮಾಡಲಾಗಿದೆ. ಸುಂದರ್ ಅವರ ಈ ಸಾಧನೆ ಹೊರದೇಶದಲ್ಲಿರುವ ಭಾರತೀಯರಿಗೆ ಒಂದು ಸ್ಫೂರ್ತಿದಾಯಕ ಮೈಲಿಗಲ್ಲಾಗಿದ್ದು ಇನ್ನಷ್ಟು ಭಾರತೀಯ ಪ್ರತಿಭೆಗಳನ್ನು ಹೊರತರುವ ಪ್ರಯತ್ನದಲ್ಲಿ ನೆರವಾಗಿದೆ.

ಓದಿರಿ: ಮಿಸ್‌ ಮಾಡದೇ ನೋಡಿ: ವಾಟ್ಸಾಪ್‌ನ ಅತ್ಯಾಧುನಿಕ ಫೀಚರ್‌ಗಳು

ಇಂದಿನ ಲೇಖನದಲ್ಲಿ ಭಾರತದ ಮಣ್ಣಿನಲ್ಲಿ ಹುಟ್ಟಿ ಹೊರದೇಶದಲ್ಲಿ ತಮ್ಮ ಕೀರ್ತಿ ಹಬ್ಬಿಸಿರುವ ಟೆಕ್ಕೀ ಸಿಇಒಗಳ ಪರಿಚಯವನ್ನು ನಾವು ಮಾಡಿಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್

ಸುಂದರ್ ಪಿಚ್ಚೈ

43 ರ ಹರೆಯದ ಸುಂದರ್ ಹುಟ್ಟಿದ್ದು ಚೆನ್ನೈನಲ್ಲಿ. ಕ್ರೋಮ್ ವೆಬ್ ಬ್ರೌಸರ್ ಲಾಂಚ್‌ನ ಜವಬ್ದಾರಿಯನ್ನು ಹೊಂದಿರುವ ಸುಂದರ್ ಈ ಹಿಂದೆಯೇ ಆಂಡ್ರಾಯ್ಡ್, ಕ್ರೋಮ್, ಮ್ಯಾಪ್ಸ್ ಮತ್ತು ಇತರ ಜನಪ್ರಿಯ ಗೂಗಲ್ ಉತ್ಪನ್ನಗಳ ಮುಖ್ಯಸ್ಥರಾಗಿದ್ದರು.

ಮೈಕ್ರೋಸಾಫ್ಟ್

ಸತ್ಯ ನಡೇಲ್ಲಾ

ಮೈಕ್ರೋಸಾಫ್ಟ್‌ನೊಂದಿಗೆ 22 ವರ್ಷಗಳನ್ನು ಕಳೆದಿರುವ ಸತ್ಯ ನಡೇಲ್ಲಾ, ಫೆಬ್ರವರಿ 2014 ರಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಹೈದ್ರಾಬಾದ್‌ನಲ್ಲಿ ಜನಿಸಿದ 47ರ ಹರೆಯದ ಈ ಟೆಕ್ ಪ್ರತಿಭೆ ಮೈಕ್ರೋಸಾಫ್ಟ್ ಕ್ಲೌಡ್ ಮತ್ತು ಉದ್ಯಮ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ನೋಕಿಯಾ ಸಲ್ಯೂಶನ್ಸ್ ಮತ್ತು ನೆಟ್‌ವರ್ಕ್ಸ್

ರಾಜೀವ್ ಸೂರಿ

1995 ರಲ್ಲಿ ನೋಕಿಯಾವನ್ನು ಸೇರಿದ ರಾಜೀವ್ ಸೂರಿಯವರನ್ನು 2014 ರಲ್ಲಿ ಅಧ್ಯಕ್ಷರು ಮತ್ತು ಸಿಇಒ ಆಗಿ ನೇಮಿಸಲಾಯಿತು. ಭೋಪಾಲ್‌ನಲ್ಲಿ ಜನಿಸಿದ ರಾಜೀವ್ ಸೂರಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.

ಅಡೋಬ್

ಶಂತನು ನಾರಾಯಣ್

ಹೈದ್ರಾಬಾದ್‌ನಲ್ಲಿ ಜನಿಸಿದ ಶಂತನು 1998 ರಲ್ಲಿ ಅಡೋಬ್ ಅನ್ನು ಸೇರಿದ್ದರು. 2005 ರಲ್ಲಿ ಸಿಇಒ ಆಗಿ ನೇಮಕಗೊಂಡರು.

ಗ್ಲೋಬಲ್ ಫೌಂಡ್ರೀಸ್

ಸಂಜಯ್ ಜಾ

ಭಗ್ಲಾಪುರ್, ಬಿಹಾರ್‌ನಲ್ಲಿ ಜನಿಸಿದ ಸಂಜಯ್ ಜಾ ಗ್ಲೋಬಲ್ ಫೌಂಡ್ರೀಸ್‌ನ ಸಿಇಒ ಆಗಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕ್ವಾಲ್‌ಕಾಮ್, ಬ್ರಾಡ್‌ಕಾಮ್ ಮೊದಲಾದ ಕಂಪೆನಿಗಳಿಗೆ ಚಿಪ್‌ಗಳನ್ನು ತಯಾರಿಸುವ ಸಂಸ್ಥೆಯಾಗಿದೆ ಗ್ಲೋಬಲ್ ಫೌಂಡ್ರೀಸ್.

ಸ್ಯಾಂಡ್‌ಡಿಸ್ಕ್

ಸಂಜಯ್ ಮೆಹರೋತ್ರಾ

ಫ್ಲ್ಯಾಶ್ ಮೆಮೊರಿ ಸ್ಟೋರೇಜ್ ಕಂಪೆನಿ ಸ್ಯಾಂಡ್‌ಡಿಸ್ಕ್‌ನ ಸಹಸ್ಥಾಪಕರಾಗಿರುವ ಸಂಜಯ್ ಜನವರಿ 2011 ರಿಂದ ಕಂಪೆನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಫ್ಟ್‌ಬ್ಯಾಂಕ್ ಇಂಟರ್ನೆಟ್ ಮತ್ತು ಮೀಡಿಯಾ ಇಂಕ್

ನಿಕೇಶ್ ಅರೋರಾ

ಸಾಫ್ಟ್‌ಬ್ಯಾಂಕ್ ಇಂಟರ್ನೆಟ್ ಮತ್ತು ಮೀಡಿಯಾ ಇಂಕ್‌ನ ಸಿಇಒ ಆಗಿರುವ ನಿಕೇಶ್ ಅರೋರಾ ವಿಶ್ವದಲ್ಲೇ ಮೂರನೇ ಹೆಚ್ಚು ಗಳಿಸುವ ವ್ಯಕ್ತಿಯಾಗಿದ್ದಾರೆ.

ನೆಟ್‌ಆಪ್

ಜಾರ್ಜ್ ಕುರಿಯನ್

ಸ್ಟೋರೇಜ್ ಮತ್ತು ಡೇಟಾ ಮ್ಯಾನೇಜ್‌ಮೆಂಟ್ ಕಂಪೆನಿಯಾಗಿರುವ ನೆಟ್‌ಆಪ್‌ನ ಸಿಇಒ ಆಗಿರುವ ಜಾರ್ಜ್ ಕುರಿಯನ್ ಕೇರಳಾದ ಕೋಟ್ಟಯಮ್‌ನಲ್ಲಿ ಜನಿಸಿದ್ದಾರೆ. ಸ್ಟ್ಯಾನ್‌ಫೋರ್ಡ್‌ನಿಂದ ಎಮ್‌ಬಿಎ ಪದವಿಯನ್ನು ಇವರು ಗಳಿಸಿದ್ದಾರೆ.

ಕೋಗ್ನಿಜಂಟ್

ಫ್ರಾನ್ಸಿಸ್ಕೊ ಡಿಸೋಜಾ

ಅತಿ ಕಿರಿಯ ಸಿಇಒ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿರುವ ಫ್ರಾನ್ಸಿಸ್ಕೊ ಡಿಸೋಜಾ ಕೋಗ್ನಿಜಂಟ್ ಸಂಸ್ಥೆಯ ಸಹ-ಸ್ಥಾಪಕರೂ ಹೌದು. 2007 ರಿಂದ ಇವರು ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇನ್ಯಾದಲ್ಲಿ ಡಿಸೋಜಾ ಜನಿಸಿದ್ದಾರೆ.

ಹರ್ಮಾನ್

ದಿನೇಶ್ ಪಲಿವಾಲ್

ಆಡಿಯೊ ಗೇರ್ ಬ್ರ್ಯಾಂಡ್ ಸಂಸ್ಥೆ ಹರ್ಮಾನ್‌ನ ಅಧ್ಯಕ್ಷರು ಮತ್ತು ಸಿಇಒ ಆಗಿರುವ ದಿನೇಶ್ ಪಲಿವಾಲ್ ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
India-born Sundar Pichai has been recently named as Google CEO. Pichai's elevation is another milestone for Indian-origin CEOs -- of whom at least half a dozen are in Fortune 500 companies. Here's a look at 10 India-born CEOs of global tech giants.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot