ಏರ್‌ಟೆಲ್‌ ಸಿಮ್‌ ಬಳಸುತ್ತಿದ್ದೀರಾ ಹಾಗಾದ್ರೆ ಈ ಸ್ಟೋರಿ ಓದಿರಿ!

|

ಇತ್ತೀಚಿನ ದಿನಗಳಲ್ಲಿ ಕೆವೈಸಿ ಅಪ್ಡೇಟ್‌ ಹೆಸರಿನಲ್ಲಿ ಸಾಕಷ್ಟು ವಂಚನೆ ಪ್ರಕರಣಗಳು ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ವಂಚಕರು ಗ್ರಾಹಕರಿಗೆ ಮೋಸ ಮಾಡಲು ಸಿಗುವ ಯಾವುದೇ ಒಮದು ಮಾರ್ಗವನ್ನು ಕೂಡ ಬಿಡೋದಿಲ್ಲ. ಟೆಕ್ನಾಲಜಿ ಅಪ್ಡೇಟ್‌ ಆದಂತೆ ವಂಚಕರು ಕೂಡ ಸಾಕಷ್ಟು ಅಪ್ಡೇಟ್‌ ಆಗುತ್ತಿದ್ದು, ಅಮಾಯಕರನ್ನು ಸುಲಭವಾಗಿ ವಂಚನೆ ಮಾಡಿಬಿಡುತ್ತಿದ್ದಾರೆ. ಸದ್ಯ ಇದೀಗ ಏರ್‌ಟೆಲ್‌ ಕೆವೈಸಿ ಸೇವೆಯ ಹೆಸರಿನಲ್ಲಿ ವಂಚನೆ ನಡೆಯುತ್ತಿರೋದು ದಾಖಲಾಗಿದೆ.

ಏರ್‌ಟೆಲ್‌

ಹೌದು, ಭಾರತದ ಮುಂಚೂಣಿ ಟೆಲಿಕಾಂ ಆಗಿರುವ ಏರ್‌ಟೆಲ್‌ ಕಂಪೆನಿ ಹೆಸರಿನಲ್ಲಿ ಕೆವೈಸಿ ಅಪ್ಡೇಟ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ಏರ್‌ಟೆಲ್ ಕೆವೈಸಿ ಸೇವೆಯ ನೆಪದಲ್ಲಿ ಹೊಸ ವಂಚನೆ ನಡೆಯುತ್ತಿರೋದು ಬೆಳಕಿಗೆ ಬಂದಿದ್ದು, ಗ್ರಾಹಕರಿಂದ ಬ್ಯಾಂಕ್‌ ವಿವರವನ್ನು ಸಂಗ್ರಹಿಸುತ್ತಿರುವ ಪ್ರಕರಣ ನಡೆದಿದೆ. ಏರ್‌ಟೆಲ್‌ ಕೆವೈಸಿ ಹಗರಣಕ್ಕೆ ಈಗಾಗಲೇ ಹಲವು ಅಮಾಯಕರು ಹಣ ಕಳೆದುಕೊಂಡಿದ್ದು, ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಏರ್‌ಟೆಲ್‌ ಸಿಇಒ ತಿಳಿಸಿದ್ದಾರೆ. ಹಾಗಾದ್ರೆ ಏರ್‌ಟೆಲ್‌ ಕೆವೈಸಿ ವಿಚಾರದಲ್ಲಿ ನಿಜಕ್ಕೂ ನಡೆದಿರೋದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ನೀವು ಕೂಡ ಏರ್‌ಟೆಲ್‌ ಗ್ರಾಹಕರಾಗಿದ್ದರೆ ನಿಮಗೂ ಕೂಡ ಕೆವೈಸಿ ಅಪ್ಡೇಟ್‌ ಹೆಸರಿನಲ್ಲಿ ಕರೆ ಬರಬಹುದು. ನೀವು ಕೂಡ ಎಚ್ಚರಿಕೆಯಿಂದ ಇರೋದು ಅಗತ್ಯ. ಏಕೆಂದರೆ ಏರ್‌ಟೆಲ್‌ ಕೆವೈಸಿ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಸ್ವತಃ ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್ ಅವರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಏರ್‌ಟೆಲ್ ಅಥವಾ ಅದರ ಯಾವುದೇ ಬ್ಯಾಂಕ್ ಪಾಲುದಾರರು ಎಂದಿಗೂ ಗ್ರಾಹಕರಿಗೆ ಕರೆ ಮಾಡಿ ಕೆವೈಸಿ ಡಿಟೇಲ್ಸ್‌ ಕೇಳುವುದಿಲ್ಲ ಎಂಬ ಸಂದೇಶವನ್ನ ನೀಡಿದ್ದಾರೆ.

ಏರ್‌ಟೆಲ್‌

ವಿಶೇಷವಾಗಿ ಏರ್‌ಟೆಲ್‌ ಎಂದಿಗೂ ಗ್ರಾಹಕರಿಗೆ ಕರೆ ಮಾಡಿ ನಿಮ್ಮ ಗೌಪ್ಯ ಮಾಹಿತಿಯನ್ನು ಕಲೆಹಾಕುವುದಿಲ್ಲ. ನಿಮ್ಮ ಬ್ಯಾಂಕ್‌ ವಿವರಗಳನ್ನು ಕೂಡ ಎಂದಿಗೂ ಪಡೆದುಕೊಳ್ಳುವುದಿಲ್ಲ. ನಿಮಗೆ ಏನಾದರೂ ಕೆವಯಸಿ ಹೆಸರಿನಲ್ಲಿ ಕರೆ ಬಮದರೆ ತಕ್ಷಣವೇ ಅಂತಹ ಕರೆಯನ್ನು ನಿರ್ಲಕ್ಷಿಸಬೇಕು ಎನ್ನುವ ಮಾಹಿತಿ ನೀಡಲಾಗಿದೆ. ವಂಚನೆ ಮಾಡುವವರು ಗ್ರಾಹಕರಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಸಿಬ್ಬಂದಿಗಳ ಹೆಸರಿನಲ್ಲಿ ಕರೆ ಮಾಡಿ ಒಟಿಪಿ ಪಡೆದು ವಂಚಿಸುತ್ತಾರೆ.

ಇದಲ್ಲದೆ

ಇದಲ್ಲದೆ ಗ್ರಾಹಕರ ID, MPIN, OTP ಮುಂತಾದ ಯಾವುದೇ ಹಣಕಾಸಿನ ಅಥವಾ ವೈಯಕ್ತಿಕ ಮಾಹಿತಿಯನ್ನು ಫೋನ್‌ನಲ್ಲಿ ಹಂಚಿಕೊಳ್ಳಬೇಡಿ ಎಂದು ಏರ್‌ಟೆಲ್‌ ಸಂಸ್ಥೆ ಹೇಳಿಕೊಂಡಿದೆ. ನಕಲಿ ಬ್ಯಾಂಕ್ ಅಪ್ಲಿಕೇಶನ್ ಅಥವಾ ಬೇರೆ ಯಾವುದನ್ನಾದರೂ ಡೌನ್‌ಲೋಡ್ ಮಾಡಲು ಲಿಂಕ್‌ಗಳನ್ನು ಕಳುಹಿಸುವ ಅಪರಿಚತರ ಲಿಂಕ್‌ಗಳನ್ನು ಟ್ಯಾಪ್‌ ಮಾಡಬೇಡಿ. ಈ ವಂಚಕರು ಸಾಮಾನ್ಯವಾಗಿ ಏರ್‌ಟೆಲ್ ಕಾರ್ಯನಿರ್ವಾಹಕರ ಸೋಗಿನಲ್ಲಿ ಮೋಸಮಾಡಬಹುದು. ಆದರಿಂದ ಎಚ್ಚರಿಕೆ ವಹಿಸಿ ಎಂದು ಏರ್‌ಟೆಲ್‌ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

MPIN

ವಂಚಕರು ಕಳುಹಿಸುವ ಲಿಂಕ್‌ಗಳಲ್ಲಿ ಗ್ರಾಹಕರು ಯಾವುದಾದರೂ ಒಂದನ್ನು ಡೌನ್‌ಲೋಡ್ ಮಾಡಿದರೆ, ಅವರ ಎಲ್ಲಾ ಬ್ಯಾಂಕ್ ವಿವರಗಳನ್ನು ಮತ್ತು ಅವರ MPIN ಅನ್ನು ನಮೂದಿಸಲು ಅವರನ್ನು ಕೇಳಲಾಗುತ್ತದೆ ಇದರ ಬಗ್ಗೆ ಎಚ್ಚರ ಅಗತ್ಯ. ಏಕೆಂದರೆ ನಿಮ್ಮ ಬ್ಯಾಂಕ್ ವಿವರಗಳು ವಂಚಕರಿಗೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆ. ದಯವಿಟ್ಟು ಅಂತಹ ಅನುಮಾನಾಸ್ಪದ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ತಪ್ಪಿಸಿ ಮತ್ತು ಇಮೇಲ್ ಮೂಲಕ ಅಥವಾ ಇಮೇಲ್‌ನಲ್ಲಿರುವ ಯಾವುದೇ ಅನುಮಾನಾಸ್ಪದ ಲಿಂಕ್‌ನ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸುವುದು ಉತ್ತಮ.

ನಿಮ್ಮ ಮಾಹಿತಿ ಸುರಕ್ಷಿತವಾಗಿರಲು ಏನು ಮಾಡಬೇಕು?

ನಿಮ್ಮ ಮಾಹಿತಿ ಸುರಕ್ಷಿತವಾಗಿರಲು ಏನು ಮಾಡಬೇಕು?

* ಮೊದಲನೆಯದಾಗಿ ನೀವು ನಿಮ್ಮ ಬ್ಯಾಂಕ್ ವಿವರಗಳನ್ನು ಫೋನ್ ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದು ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್, ನೆಟ್ ಬ್ಯಾಂಕಿಂಗ್ ಐಡಿ, ಯಾವುದೇ ಪರಿಶೀಲಿಸದ OTP ಅಥವಾ IFSC ಕೋಡ್ ಅನ್ನು ಒಳಗೊಂಡಿರುತ್ತದೆ.
* ಇದಲ್ಲದೆ ಅಪರಿಚತರು ಕರೆ ಮಾಡಿ ಕಳುಹಿಸುವ ಲಿಂಕ್‌ಗಳ ಮೇಲೆ ಯಾವುದೇ ಕಾರಣಕ್ಕೆ ಕ್ಲಿಕ್‌ ಮಾಡಬೇಡಿ. ಅಪರಿಚಿತರಿಂದ ಬರುವ ಲಿಂಕ್‌ಗಳು ಮಾಲ್‌ವೇರ್ ಅನ್ನು ಒಳಗೊಂಡಿರುವ ಸಾದ್ಯತೆ ಇರಲಿದೆ.
* ಟೆಲಿಕಾಂ ಕಂಪನಿ, ಬ್ಯಾಂಕ್ ಅಥವಾ ಇತರ ಸಂಸ್ಥೆಗಳಿಂದ ಕರೆ ಮಾಡುವ ಯಾವುದೇ ಗ್ರಾಹಕ ಪ್ರತಿನಿಧಿಗೆ UPI ಮೂಲಕ ಯಾವುದೇ ಪಾವತಿಗಳನ್ನು ಮಾಡಬೇಡಿ.

Best Mobiles in India

English summary
A new scam has been going around under the disguise of Airtel KYC service.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X