ಐಫೋನ್ X ಗಿಂತಲೂ ಆಕರ್ಷವಾಗಿದೆ ಒನ್‌ಪ್ಲಸ್ 5T: ಲೀಕ್ ಆಯ್ತು ಫೋಟೋ

|

ನವೆಂಬರ್ 16ರಂದು ಬಿಡುಗಡೆ ಸಿದ್ಧವಾಗಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಕುರಿತಂತೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿದ್ದು, ಸದ್ಯ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಫೋಟೋವೊಂದು ಲೀಕ್ ಆಗಿದ್ದು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಐಫೋನ್ Xಗಿಂತಲೂ ಉತ್ತಮ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ.

ಐಫೋನ್ X ಗಿಂತಲೂ ಆಕರ್ಷವಾಗಿದೆ ಒನ್‌ಪ್ಲಸ್ 5T: ಲೀಕ್ ಆಯ್ತು ಫೋಟೋ

ಫುಲ್‌ಸ್ಕ್ರಿನ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬ್ರಜಿಲ್ ಲೆಸ್ ಆಗಿದೆ. ಈ ಫೋನಿನಲ್ಲಿಲೂ ಹೋಮ್ ಬಟನ್ ಇಲ್ಲ ಎನ್ನಲಾಗಿದ್ದು, ಫಿಂಗರ್ ಫ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದು, ನೋಡಲು ಸುಂದರವಾಗಿದ್ದು, ಫುಲ್ ಸ್ಕ್ರಿನ್ ನೋಡಲು ಆಕರ್ಷಕವಾಗಿದೆ.

18:9 ಡಿಸ್‌ಪ್ಲೇ:

18:9 ಡಿಸ್‌ಪ್ಲೇ:

ಒನ್‌ಪ್ಲಸ್ 5T ಫೋನ್ ಫೋಟೋ ಲೀಕ್ ಆಗಿದ್ದು, ಇದರಲ್ಲಿ 18:9 ಫುಲ್ ಸ್ಕ್ರಿನ್ ಡಿಸ್‌ಪ್ಲೇ ವಿನ್ಯಾಸವು ನೋಡಲು ಆಕರ್ಷಕವಾಗಿದ್ದು, ಇತರೇ ಫುಲ್ ಸ್ಕ್ರಿನ್ ಡಿಸ್‌ಪ್ಲೇಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದೆ ಎನ್ನಲಾಗಿದೆ. 6 ಇಂಚಿನ ಡಿಸ್‌ಪ್ಲೇ ಇದಾಗಿದೆ.

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಇಷ್ಟು ದಿನ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡುತ್ತಿದ್ದ ಒನ್‌ಪ್ಲಸ್ ಈ ಬಾರಿ ಫುಲ್ ಸ್ಕ್ರಿನ್ ವಿನ್ಯಾಸವನ್ನು ಮಾಡುವ ಸಲುವಾಗಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗದಕ್ಕೆ ಶಿಫ್ಟ್ ಮಾಡಿದೆ.

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಒನ್‌ಪ್ಲಸ್ 5T ಫೋನ್ ಫೋಟೋ ಈ ಹಿಂದಿನ ಒನ್‌ಪ್ಲಸ್ 5 ಫೋನಿನ ಮಾದರಿಯಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಎಡಭಾಗದ ಮೂಲೆಯಲ್ಲಿ ಇದನ್ನು ಕಾಣಬಹುದಾಗಿದೆ. ಮದ್ಯಭಾಗದಲ್ಲಿ ಒನ್‌ಪ್ಲಸ್ ಲೋಗೊ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

 ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ಒನ್‌ಪ್ಲಸ್ 5T ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದೆ. ಒಂದು 64GB ಮತ್ತೊಂದು 128GB ಯಲ್ಲಿ ಲಭ್ಯವಿದೆ. ಬೆಲೆಗಳು ಈ ಹಿಂದಿನ ಒನ್‌ಪ್ಲಸ್ 5 ನಷ್ಟೆ ಇರಲಿದೆ ಎನ್ನಲಾಗಿದೆ.

Best Mobiles in India

English summary
OnePlus 5T’s New Render Reveals the Entire Phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X