ಚಾಟ್ ಬ್ಯಾಕಪ್‌ಗೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್‌ ಸೇರಿಸಿದ ವಾಟ್ಸಾಪ್‌!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ವಾಟ್ಸಾಪ್‌ ಹೊಸದೊಂದು ಗೌಪ್ಯತೆ ಫೀಚರ್ಸ್‌ ಅನ್ನು ಘೋಷಿಸಿದೆ. ಇದು ಚಾಟ್ ಬ್ಯಾಕಪ್‌ಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸೇರಿಸಿದೆ. ವಾಟ್ಸಾಪ್‌ ಈಗಾಗಲೇ ಎಲ್ಲಾ ಸಂದೇಶಗಳು ಮತ್ತು ಕರೆಗಳು ಈಗಾಗಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಹೊಸದಾಗಿ ಚಾಟ್‌ ಬ್ಯಾಕಪ್‌ಗಳಿಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನ್ನು ಪರಿಚಯಿಸಿದೆ. ಇದು ಯಾವುದೇ ಮೂರನೇ ವ್ಯಕ್ತಿ ಚಾಟ್‌ ಬ್ಯಾಕಪ್‌ ಅನ್ನು ನೋಡುವುದಕ್ಕೆ ಸಾಧ್ಯವಿಲ್ಲದಂತೆ ಮಾಡಲಿದೆ. ಇಲ್ಲಿಯವರೆಗೆ, ಚಾಟ್ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ, ಇದೇ ಕಾರಣಕ್ಕೆ ಚಾಟ್‌ ಬ್ಯಾಕಪ್‌ ಬೇರೆಯವರ ಕೈಗೆ ಸಿಗುವುದು ಸುಲಭವಾಗಿತ್ತು. ಇದೀಗ ಚಾಟ್‌ ಬ್ಯಾಕಪ್‌ ಕೂಡ ಎನ್‌ಕ್ರಿಪ್ಶನ್‌ ಸೇರಿಸಿರುವುದರಿಂದ ಚಾಟ್‌ಬ್ಯಾಕಪ್‌ ಕೂಡ ಸೆಕ್ಯುರ್‌ ಆಗಿರಲಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫಿಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಫೀಚರ್ಸ್‌ ಮೂರನೇ ವ್ಯಕ್ತಿ ವಾಟ್ಸಾಪ್‌ ಚಾಟ್‌ನಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯುತ್ತದೆ. ಇಷ್ಟು ದಿನ ಇದು ಕೇವಲ ವಾಟ್ಸಾಪ್‌ ಚಾಟ್‌, ವಾಯ್ಸ್‌ ಮತ್ತು ವೀಡಿಯೊ ಕಾಲ್‌ಗೆ ಮಾತ್ರ ಸೀಮಿತವಾಗಿತ್ತು. ಇದೀಗ ಈ ಫೀಚರ್ಸ್‌ ಚಾಟ್‌ ಬ್ಯಾಕಪ್‌ ಅನ್ನು ಕೂಡ ಎನ್‌ಕ್ರಿಪ್ಶನ್‌ ಮಾಡಲಿದೆ. ಇದು "ಯಾರಾದರೂ ತಮ್ಮ ಚಾಟ್ ಹಿಸ್ಟರಿಯನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ ಬ್ಯಾಕಪ್ ಮಾಡಲು ಆರಿಸಿದರೆ, ಚಾಟ್‌ ಬ್ಯಾಕಪ್‌ ಅನ್ನು ಸೆಕ್ಯುರ್‌ ಮಾಡಲಿದೆ. ಅಲ್ಲದೆ ಇನ್ಮುಂದೆ ಯಾರೂ ಕೂಡ ನಿಮ್ಮ ಬ್ಯಾಕಪ್ ಅನ್ನು ಅನ್‌ಲಾಕ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸಾಪ್‌ ಸ್ಪಷ್ಟಪಡಿಸಿದೆ.

ಬ್ಯಾಕಪ್

ಇದಲ್ಲದೆ ಬ್ಯಾಕಪ್ ಸೇವಾ ಪೂರೈಕೆದಾರರು, ಅದು ಆಪಲ್ ಅಥವಾ ಗೂಗಲ್ ಆಗಿರಲಿ, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಕೀ ಮಾಡಿದ ಬ್ಯಾಕಪ್ ಅನ್ನು ಪ್ರವೇಶಿಸಬಹುದಾಗಿದೆ. ಐಒಎಸ್ ಬಳಕೆದಾರರಿಗೆ, ಇದಕ್ಕಾಗಿ ಚಾಟ್ ಬ್ಯಾಕಪ್‌ಗೆ ಇರುವ ಏಕೈಕ ಆಯ್ಕೆ ಐಕ್ಲೌಡ್, ಆಂಡ್ರಾಯ್ಡ್ ಬಳಕೆದಾರರು ಸಾಮಾನ್ಯವಾಗಿ ಗೂಗಲ್ ಡ್ರೈವ್ ಅನ್ನು ಬಳಸಬಹುದಾಗಿದೆ. ಸದ್ಯದ ಮಾಹಿತಿ ಪ್ರಕಾರ ವಾಟ್ಸಾಪ್‌ನಲ್ಲಿ 2 ಶತಕೋಟಿ ಬಳಕೆದಾರರು, ಪ್ರತಿದಿನ 100 ಶತಕೋಟಿಗೂ ಹೆಚ್ಚು ಸಂದೇಶಗಳನ್ನು ಕಳುಹಿಸುತ್ತಾರೆ. ಇದೇ ಕಾರಣಕ್ಕೆ ಚಾಟ್‌ ಬ್ಯಾಕಪ್‌ ಸೆಕ್ಯುರ್‌ ಮಾಡುವುದು ನಮ್ಮ ಕರ್ತವ್ಯ ಅನ್ನೊದನ್ನ ವಾಟ್ಸಾಪ್‌ ಹೇಳಿದೆ.

ಆಂಡ್ರಾಯ್ಡ್

ಇನ್ನು ಈ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಮುಂಬರುವ ವಾರಗಳಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಆಯ್ಕೆಯ ಫೀಚರ್ಸ್‌ ಆಗಿ ಲಾಂಚ್‌ ಮಾಡಲಾಗುತ್ತದೆ. ಇದನ್ನು ಯಾವುದೇ ರೀತಿಯ ಪೂರ್ವನಿಯೋಜಿತವಾಗಿ ಆನ್ ಮಾಡಿರುವುದಿಲ್ಲ ಬದಲಿಗೆ ಬಳಕೆದಾರರು ತಮಗೆ ಇಚ್ಛಯಿದ್ದರೆ ಮಾತ್ರ ಆಯ್ಕೆ ಮಾಡಬಹುದಾಗಿದೆ. ಇನ್ನು ವಾಟ್ಸಾಪ್ ಬಳಕೆದಾರರು ಚಾಟ್‌ಬ್ಯಾಕಪ್‌ಗೆ ಎನ್‌ಕ್ರಿಪ್ಶನ್‌ ಮಾಡುವುದಕ್ಕೆ ಪಾಸ್‌ವರ್ಡ್ ಕ್ರಿಯೆಟ್‌ ಮಾಡಬೇಕಾಗುತ್ತದೆ. ಒಂದು ವೇಳೆ ಬಳಕೆದಾರರು ಪಾಸ್‌ವರ್ಡ್ ಅನ್ನು ಮರೆತಿದ್ದರೆ, ಖಾತೆಯನ್ನು ಮತ್ತೆ ಪಡೆಯುವುದಕ್ಕೆ ವಾಟ್ಸಾಪ್‌ ಸಹಾಯ ಮಾಡುವುದಿಲ್ಲ ಅನ್ನುವುದನ್ನು ಕೂಡ ಗಮನಿಸಬೇಕಾಗುತ್ತದೆ.

ಫೀಚರ್ಸ್‌

ಇದಲ್ಲದೆ ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನುವ ಶ್ವೇತಪತ್ರವನ್ನು ಸಹ ವಾಟ್ಸಾಪ್‌ ಬಿಡುಗಡೆ ಮಾಡಿದೆ. ಅದರ ಪ್ರಕಾರ ಬ್ಯಾಕಪ್ ಅನ್ನು ಬಳಕೆದಾರರು ಒದಗಿಸಿದ ಪಾಸ್‌ವರ್ಡ್‌ನೊಂದಿಗೆ ಎನ್‌ಕ್ರಿಪ್ಟ್ ಮಾಡಲಾಗಿದೆ. ಇದು ವಾಟ್ಸಾಪ್‌ ಇಲ್ಲವೇ ಬಳಕೆದಾರರ ಮೊಬೈಲ್ ಡಿವೈಸ್‌ ಕ್ಲೌಡ್ ಪಾಲುದಾರರಿಗೂ ಕೂಡ ತಿಳಿಯುವುದಲ್ಲ ಎಂದು ಹೇಳಿದೆ. ಇದರ ಜೊತೆಗೆ, ಒಂದು ಗೂಡಲಿಪೀಕರಣ ಕೀಲಿಯನ್ನು ಹಾರ್ಡ್‌ವೇರ್ ಸೆಕ್ಯುರಿಟಿ ಮಾಡ್ಯೂಲ್ (HSM) ಬ್ಯಾಕಪ್ ಕೀ ವಾಲ್ಟ್‌ನಲ್ಲಿ ಸಂಗ್ರಹಿಸಲಾಗಿದೆ. ಇದು ಡಿವೈಸ್‌ ಕಳೆದುಹೋದ ಅಥವಾ ಕದ್ದ ಸಂದರ್ಭದಲ್ಲಿ ಬಳಕೆದಾರರಿಗೆ ಕೀಲಿಯನ್ನು ಮರುಪಡೆಯಲು ಅನುವು ಮಾಡಿಕೊಡುತ್ತದೆ.

Best Mobiles in India

English summary
WhatsApp has announced a major privacy update, where it will now add end-to-end encryption to chat backups as well.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X