ವೈಯು ಯುರೇಕಾ ಸ್ಮಾರ್ಟ್‌ಫೋನ್ ದರಕಡಿತ ಆಫರ್
ಭಾರತದ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ತನ್ನ ಇತ್ತೀಚಿನ ಬಜೆಟ್ ಹ್ಯಾಂಡ್‌ಸೆಟ್ ಆದ ಯುರೇಕಾ ಪ್ಲಸ್ ಮೇಲೆ ರೂ 1,000 ದರಕಡಿತವನ್ನು ವಿಧಿಸಿದೆ. ಫೋನ್ ಅನ್ನು ಮೂಲತಃ 9,999 ಕ್ಕೆ ಲಾಂಚ್ ಮಾಡಲಾಗಿತ್ತು.
ಓದಿರಿ: ಇಂಟರ್ನೆಟ್ ಬಳಸುತ್ತಿದ್ದೀರಾ? ಎಚ್ಚರಿಕೆಯಿಂದಿರಿ

ಡಿವೈಸ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಅಂಶ ಇದರ 5.5 ಇಂಚಿನ ಡಿಸ್‌ಪ್ಲೇಯಾಗಿದೆ. 64 ಬಿಟ್ 1.5GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ ಚಿಪ್ ಇದರಲ್ಲಿದ್ದು 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ಫೋನ್ 16 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದಾಗಿದೆ.
ಓದಿರಿ: ಬೆಂಗಳೂರು ಪೋಲೀಸರು ಇನ್ನು ವಾಟ್ಸಾಪ್‌ನಲ್ಲಿ 24x7 ಡ್ಯೂಟಿ

ಸಿನೋಜಿನ್ ಓಎಸ್ 12 ಇದರಲ್ಲಿ ಚಾಲನೆಯಾಗುತ್ತಿದ್ದು, ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿದೆ. ಸಿನೋಜಿನ್ ಇದನ್ನು ಅಭಿವೃದ್ಧಪಡಿಸಿದೆ. ಫೋನ್ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಎಂದೆನಿಸಿದೆ. ಇನ್ನು ಫೋನ್‌ನ ಸಂಪರ್ಕ ವಿಶೇಷತೆಗಳತ್ತ ನೋಡುವುದಾದರೆ ಇದು ಡ್ಯುಯಲ್ ಸಿಮ್ ಬೆಂಬಲವನ್ನು ಪಡೆದುಕೊಂಡಿದೆ. 3ಜಿ, 4ಜಿ, ಬ್ಲ್ಯೂಟೂತ್ ಮತ್ತು ಜಿಪಿಎಸ್‌ಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದು 2500mAh ಬ್ಯಾಟರಿಯನ್ನು ಒಳಗೊಂಡಿದೆ.


Click it and Unblock the Notifications








