1.2 ಬಿಲಿಯನ್ ಡೌನ್‌ಲೋಡ್ ಕಂಡ ಈ ಆಪ್ ನಿಮ್ಮ ಫೋನ್‌ನಲ್ಲಿಯೂ ಇದೆ..!

|

ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಅತೀ ಸುಲಭವಾಗಿ ಡೇಟಾವನ್ನು ಒಂದು ಫೋನ್ ನಿಂದ ಮತ್ತೊಂದು ಫೋನ್‌ಗೆ ವರ್ಗಾಹಿಸಿದ ಕೀರ್ತಿ ಶೇರ್‌ ಇಟ್ ಆಪ್‌ಗೆ ಸಲ್ಲುತ್ತದೆ. ಸದ್ಯ ಈ ಆಪ್ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದ್ದು, ವಿಶ್ವದಲ್ಲಿ ಸುಮಾರು 1.2 ಬಿಲಿಯನ್ ಮಂದಿ ಈ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

1.2 ಬಿಲಿಯನ್ ಡೌನ್‌ಲೋಡ್ ಕಂಡ ಈ ಆಪ್ ನಿಮ್ಮ ಫೋನ್‌ನಲ್ಲಿಯೂ ಇದೆ..!

ಓದಿರಿ: ಜಿಯೋ-ನೋಕಿಯಾ ಒಪ್ಪಂದ: ಗ್ರಾಹಕರಿಗೆ ಆಚ್ಚರಿಯ ಕೊಡುಗೆಗಳ ಸುರಿಮಳೆ..!

ಕೇವಲ ಎರಡು ವರ್ಷದಲ್ಲಿ ಶೇರ್‌ ಇಟ್ ಈ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ್ದು, ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಈ ಆಪ್ ಅನ್ನು ಆಂಡ್ರಾಯ್ಡ್ ಮತ್ತು iOS ಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದರುವುದು ಸಹ ಮಟ್ಟದ ಬೆಳವಣಿಗೆಗೆ ಕಾರಣವಾಗಿದೆ.

ವಿಶ್ವದಲ್ಲಿ 1.2 ಬಿಲಿಯನ್, ಭಾತರದಲ್ಲಿಯೇ 300 ಮಿಲಿಯನ್:

ವಿಶ್ವದಲ್ಲಿ 1.2 ಬಿಲಿಯನ್, ಭಾತರದಲ್ಲಿಯೇ 300 ಮಿಲಿಯನ್:

ಈಗಾಗಲೇ ವಿಶ್ವದಲ್ಲಿ 1.2 ಬಿಲಿಯನ್ ಬಾರಿ ಡೌನ್‌ಲೋಡ್ ಆಗಿದೆ ಎನ್ನಲಾಗಿದ್ದು, ಇದೇ ಮಾದರಿಯಲ್ಲಿ ಭಾರತದಲ್ಲಿಯೂ ಈ ಆಪ್ ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದ್ದು, ಸುಮಾರು 300 ಮಿಲಿಯನ್ ಬಾರಿ ಡೌನ್‌ಲೋಡ್ ಆಗಿದೆ ಎನ್ನಲಾಗಿದೆ. ವಿಶ್ವದ ಎಲ್ಲೇ ಕಡೆಯೂ ಖ್ಯಾತಿಯನ್ನು ಪಡೆದುಕೊಂಡಿದೆ.

ವಿಡಿಯೋ- ಮ್ಯೂಸಿಕ್ ಹಂಚಿಕೊಳ್ಳಲು:

ವಿಡಿಯೋ- ಮ್ಯೂಸಿಕ್ ಹಂಚಿಕೊಳ್ಳಲು:

ಎರಡು ಮೊಬೈಲ್‌ಗಳ ನಡುವೆ ವಿಡಿಯೋ ಮತ್ತು ಮ್ಯೂಸಿಕ್ ಸೇರಿದಂತೆ ಆಪ್‌ಗಳು ಡೇಟಾಗಳನ್ನು ಹಂಚಿಕೊಳ್ಳಲು ಶೇರ್‌ ಇಟ್ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಇದು ಹೆಚ್ಚಿನ ಖ್ಯಾತಿಯನ್ನು ತಂದು ಕೊಟ್ಟಿದೆ. ಈ ಕಾರಣದಿಂದಲೇ ಈ ಆಪ್ ಅನ್ನು ಬಳಕೆ ಮಾಡಿಕೊಳ್ಳಲುವಂತೆ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಪ್ರೇರೆಪಿಸುತ್ತಿದೆ.

ಇನ್ನು ಬೆಳೆಯಲಿದೆ ಸಂಖ್ಯೆ:

ಇನ್ನು ಬೆಳೆಯಲಿದೆ ಸಂಖ್ಯೆ:

ಶೇರ್ ಇಟ್ ಆಪ್ ಖ್ಯಾತಿಯೂ ಇನ್ನು ಹೆಚ್ಚಾಗುತ್ತಿದೆ. ಅಲ್ಲದೇ ಮಾರುಕಟ್ಟೆಗೆ ಬರುವ ಸ್ಮಾರ್ಟ್‌ಫೋನ್‌ಗಳೇಲ್ಲವು ಶೇರ್‌ ಇಟ್ ಆಪ್‌ ಬಳಕೆ ಮಾಡಿಕೊಳ್ಳುವುದು ಅನಿವಾರ್ಯವಾಗುವಂತ ಸ್ಥಿತಿಯೂ ನಿರ್ಮಾಣವಾಗಿದ್ದು, ಈ ಆಪ್‌ಗೆ ಪ್ರತಿ ಸ್ಪರ್ಧಿಯೇ ಇಲ್ಲ ಎನ್ನಲಾಗಿದೆ.

Best Mobiles in India

English summary
SHAREit achieves 1.2bn user base worldwide. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X