ಆಂಡ್ರಾಯ್ಡ್ ಬಳಕೆದಾರರ ಫೋನ್ ನಲ್ಲಿ WhatsApp Chat ಇನ್ನು ಮುಂದೆ ಹೀಗೆ ಕಾಣಲಿದೆ!

By Gizbot Bureau
|

ಆಂಡ್ರಾಯ್ಡ್ ನಲ್ಲಿ ವಾಟ್ಸ್ ಆಪ್ ಬಳಸುತ್ತಿರುವವರಿಗಾಗಿ ವಾಟ್ಸ್ ಆಪ್ ಒಂದು ಸಣ್ಣ ಬದಲಾವಣೆಯನ್ನು ತನ್ನ ಆಟ್ಸ್ ಆಪ್ ಯುಐನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಪರಿಚಯ ಮಾಡಲಿದೆ.ವಾಬೇಟಾಇನ್ಫೋ ನೀಡಿರುವ ಮಾಹಿತಿಯ ಪ್ರಕಾರ ಚಾಟ್ ಸೆಲ್ ಗಳ ನಡುವಿನ ಲೈನ್ ಸಪರೇಟ್ ಗಳನ್ನು ಇನ್ಸೆಂಟ್ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ರಿಮೂವ್ ಮಾಡಲಿದೆಯಂತೆ.

ಆಂಡ್ರಾಯ್ಡ್ ಬಳಕೆದಾರರ ಫೋನ್ ನಲ್ಲಿ WhatsApp Chat ಇನ್ನು ಮುಂದೆ ಹೀಗೆ ಕಾಣಲಿದೆ!

ವಾಬೇಟಾ ಇನ್ಫೋ ಅನ್ನೋದು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗಾಗಿ ವಾಟ್ಸ್ ಆಪ್ ನಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಎಂಬುದನ್ನು ತಿಳಿಸುವ ಆನ್ ಲೈನ್ ಫ್ಲ್ಯಾಟ್ ಫಾರ್ಮ್ ಆಗಿದೆ. ಈ ವರದಿಯಲ್ಲಿ ವಾಬೇಟಾಇನ್ಫೋ ಸ್ಕ್ರೀನ್ ಶಾಟ್ ನ್ನು ಕೂಡ ಹಂಚಿಕೊಂಡಿದೆ.ಹೊಸ ಚಾಟ್ ಯುಐ ಹೇಗಿರಲಿದೆ ಎಂಬ ಬಗ್ಗೆ ಈ ಸ್ಕ್ರೀನ್ ಶಾಟ್ ವಿವರಿಸುತ್ತಿದೆ. ಅಂದರೆ ಒಮ್ಮೆ ಈ ಹೊಸ ಫೀಚರ್ ಬಿಡುಗಡೆಗೊಂಡ ನಂತರ ವಾಟ್ಸ್ ಆಪ್ ಚಾಟ್ ವಿಂಡೋ ಹೇಗೆ ಕಾಣುತ್ತದೆ ಎಂಬುದನ್ನು ಇದು ಹಂಚಿಕೊಂಡಿದೆ.

ಸದ್ಯ ವಾಟ್ಸ್ ಆಪ್ ನಲ್ಲಿ ಒಂದೊಂದು ಚಾಟ್ ಕೂಡ ಸಣ್ಣದೊಂದು ಗೆರೆಯಿಂದ ವಿಭಾಗಿಸಲ್ಪಡುತ್ತದೆ.ಹೊಸ ಫೀಚರ್ ನಲ್ಲಿ ಈ ಗೆರೆಯೇ ಇರುವುದಿಲ್ಲ.ಇದನ್ನು ವಾಟ್ಸ್ ಆಪ್ ನ ಆಂಡ್ರಾಯ್ಡ್ ಬಳಕೆದಾರರು ಇನ್ನು ಕೆಲವೇ ದಿನಗಳಲ್ಲಿ ಗಮನಿಸಬಹುದಾಗಿದೆ.ಸದ್ಯ ಇದು ಬೇಟಾ ಹಂತದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಹಲವು ಬೇಟಾ ಬಳಕೆದಾರರಿಗೆ ಇದು ಬಿಡುಗಡೆಗೊಳ್ಳಲಿದೆ ಎಂದು ಹೇಳಿದೆ ವಾಬೇಟಾಇನ್ಫೋ.

ಐಫೋನ್ ಬಳಕೆದಾರರಿಗೆ ಈ ಬದಲಾವಣೆ ಆಗಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನುವರೆಗೂ ಯಾವುದೇ ಖಚಿತತೆ ಸಿಕ್ಕಿಲ್ಲ.

ಮತ್ತೊಂದು ಸುದ್ದಿಯಲ್ಲಿ ಫೇಸ್ ಬುಕ್ ಸಿಇಓ ಮಾರ್ಕ್ ಜ್ಯೂಕ್ ಬರ್ಗ್ ಮತ್ತು ವಾಟ್ಸ್ ಆಪ್ ಸಿಇಓ ವಿಲ್ ಕ್ಯಾಚ್ಕಾರ್ಟ್ ವಾಟ್ಸ್ ಆಪ್ ನಲ್ಲಿ ಬರುವ ಇನ್ನಷ್ಟು ಫೀಚರ್ ಗಳ ಬಗ್ಗೆ ಖಚಿತತೆ ನೀಡಿದ್ದಾರೆ.ಇತ್ತೀಚೆಗಿನ ವಾಬೇಟಾ ಇನ್ಫೋದ ಎಕ್ಸ್ ಕ್ಲೂಸೀವ್ ವರದಿಯಲ್ಲಿ ಮತ್ತು ವೆಬ್ ಸೈಟ್ ನಲ್ಲಿ ಈ ಬಗ್ಗೆ ಹೇಳಲಾಗಿದ್ದು ಹೊಸ ಫೀಚರ್ ಗಳು ಬಳಕೆದಾರರಿಗೆ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ವಿವರಿಸಲಾಗಿದೆ.

ಒಮ್ಮೆ ಕಳಿಸಿದ ಮೆಸೇಜ್ ಒಮ್ಮೆ ಮಾತ್ರ ಓದಲು ಅವಕಾಶ

ಇವುಗಳಲ್ಲಿ ಡಿಸ್ಅಪಿಯರ್ ಮೋಡ್,ನಾಲ್ಕು ಡಿವೈಸ್ ಗಳಿಗೆ ಅನುಕೂಲವಾಗುವಂತ ಮಲ್ಟಿಡಿವೈಸ್ ಬೆಂಬಲ ನೀಡುವುದು ಅಂದರೆ ಐಪಾಡ್ ನಲ್ಲಿ ವಾಟ್ಸ್ ಆಪ್ ಬಳಕೆಗೆ ಅನುಕೂಲವಾಗುವಂತಹ ಫೀಚರ್ ಗಳನ್ನು ಪರಿಚಯಿಸಲಾಗಿದೆ.ಡಿಸ್ಅಪಿಯರಿಂಗ್ ಮೋಡ್ ಮೂಲಕ ಗ್ರಾಹಕರು ಮೆಸೇಜ್ ಗಳನ್ನು ಅದೃಶ್ಯ ಸ್ವರೂಪದಲ್ಲಿ ಕಳುಹಿಸುವುದಕ್ಕೆ ಅವಕಾಶ ನೀಡುಲಾಗುತ್ತದೆಯಂತೆ. ಅಂದರೆ ಈ ಮೆಸೇಜ್ ಗಳನ್ನು ಒಮ್ಮೆ ಮಾತ್ರ ನೋಡಲು ಅವಕಾಶವಿರುವಂತೆ ಕಳುಹಿಸಲಾಗುತ್ತದೆ.

ನಾಲ್ಕು ಡಿವೈಸ್ ಗಳಿಗೆ ಕನೆಕ್ಷನ್

ಮುಂದಿನ ತಿಂಗಳಲ್ಲಿ ಮಲ್ಟಿ ಡಿವೈಸ್ ಮೋಡ್ ಬಿಡುಗಡೆಗೊಳ್ಳಲಿದೆ ಎಂದು ವಾಟ್ಸ್ ಆಪ್ ಸಿಇಓ ತಿಳಿಸಿದ್ದಾರೆ. ಆದರೆ ಇದು ಪಬ್ಲಿಕ್ ಬೇಟಾ ವರ್ಷನ್ ಆಗಿರುತ್ತದೆ. ನಾಲ್ಕು ಲಿಂಕ್ ಆಗಿರುವ ಡಿವೈಸ್ ಗಳನ್ನು ಕನೆಕ್ಟ್ ಮಾಡಿಕೊಳ್ಳುವುದಕ್ಕೆ ಈ ಫೀಚರ್ ಅವಕಾಶ ನೀಡಲಿದೆ.

Most Read Articles
Best Mobiles in India

Read more about:
English summary
Whatsapp chats to get a major overhaul for android users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X