Subscribe to Gizbot

ಹಾಯ್ ಏಸರ್... ಇದು ಕಪ್ಪು ಸುಂದರಿ ಕಣ್ರಿ

Posted By: Staff

ಹಾಯ್ ಏಸರ್... ಇದು ಕಪ್ಪು ಸುಂದರಿ ಕಣ್ರಿ
ಈಗ ಹೆಚ್ಚಿನವರು ಹೈಎಂಡ್ ಲ್ಯಾಪ್ ಟಾಪ್ ಗಳನ್ನೇ ಬಳಸುತ್ತಿದ್ದಾರೆ. ಅಂಥವರಿಗಾಗಿ ಏಸರ್ ಹೊರತರಲಿರುವ ಲ್ಯಾಪ್ ಟಾಪ್ ಹೆಸರು ಆಸ್ಪೈರ್ ಇಥೋಸ್ AS8951G-9600. ಇದು ಡೆಸ್ಕ್ ಟಾಪ್ ಕಂಪ್ಯೂಟರ್ ನಂತೆಯೇ ಉಪಯೋಗಕಾರಿ. ಯಾಕೆಂದರೆ ಇದು 18.4 ಇಂಚಿನ ದೊಡ್ಡ ಸ್ಕ್ರೀನ್ ಹೊಂದಿದೆ.

ಇದು ವೈರ್ ಲೆಸ್ ರಿಮೋಟ್ ಕಂಟ್ರೋಲ್ ನ ರಿಮುವೇಬಲ್ ಟಚ್ ಪ್ಯಾಡ್ ಹೊಂದಿದೆ. Acer Aspire Ethos AS8951G-9600 ಕಪ್ಪು ಸುಂದರಿ. ಅಂದರೆ ಮೆಟಾಲಿಕ್ ಫಿನಿಷ್ ಹೊಂದಿರುವ ಕಪ್ಪು ಲ್ಯಾಪ್ ಟಾಪ್.

ಇದು ದೊಡ್ಡದಾಗಿರುವುದರಿಂದ ಡೆಸ್ಕ್ ಟಾಪ್ ಕಂಪ್ಯೂಟರಿಗೆ ಬದಲಿಯಾಗಿ ಬಳಸಬಹುದು. ಹಾಗಂತ ಇದನ್ನು ಸಾಗಿಸುವುದು ಕಷ್ಟವೇನು ಆಗದು. ದೊಡ್ಡ ಪರದೆ ಹೊಂದಿದ್ದರೂ ಇದು ತೆಲು ಹಗುರವಾದ ಕಪ್ಪು ಸುಂದರಿ.

ಜಾಕಿ ಜಾಕಿ ಜಾಕಿ: ಉಳಿದಂತೆ ಇದರಲ್ಲಿ 3.5 ಎಂಎಂ ಆಡಿಯೋ ಜಾಕ್, ಒಂದು ಹೆಡ್ ಫೋನ್ ಜಾಕ್, ಮೈಕ್ರೊಫೋನ್ ಜಾಕ್ ಮತ್ತು ಫೈರ್ ವೈರ್ ಜಾಕ್ ಇದೆ. ಇದರಲ್ಲಿ ಹೆಚ್ಚುವರಿಯಾಗಿ ಮೂರು ಯುಎಸ್ ಬಿ ಪೋರ್ಟ್ ಗಳಿವೆ. ಇದರಲ್ಲಿ ಉಳಿದಂತೆ ಹೆಚ್ಚಿನ ಕಂಪ್ಯೂಟರ್ ಗಳಲ್ಲಿರುವ ಎಲ್ಲಾ ಫೀಚರುಗಳೂ ಇವೆ. ಅಂದಹಾಗೆ ಇದರ ದರ ಭಾರತದಲ್ಲಿ ಸುಮಾರು 75 ಸಾವಿರ ರುಪಾಯಿ ಇರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot