ಲೆನೊವೊ ಥಿಂಕ್ ಪ್ಯಾಡ್, ಖರೀದಿಗೆ ಮುನ್ನ ಥಿಂಕ್ ಮಾಡಿ

Posted By: Staff

ಲೆನೊವೊ ಥಿಂಕ್ ಪ್ಯಾಡ್, ಖರೀದಿಗೆ ಮುನ್ನ ಥಿಂಕ್ ಮಾಡಿ
ಲೆನೊವೊ ಕಂಪನಿಯ ಲ್ಯಾಪ್ ಟಾಪ್ ಗಳು ಇದೀಗ ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಕಂಪನಿಯು ಲೆನೊವೊ ಎಲ್420 ಮತ್ತು ಲೆನೊವೊ 520 ಥಿಂಕ್ ಪ್ಯಾಡ್ ಹೊರತಂದಿದೆ. ಇದರಲ್ಲಿ ಬೊಂಬಾಟ್ ಫೀಚರುಗಳಿವೆ. ಆದರೆ ಖರೀದಿಗೆ ಮುನ್ನ ಥಿಂಕ್ ಮಾಡಿ.

ಇವೆರಡು ಲ್ಯಾಪ್ ಟಾಪ್ ಗಳು ಗುಣಮಟ್ಟ, ಕಾರ್ಯಕ್ಷಮತೆ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದಿಂದ ಪಾಸಾಗಿವೆ. ಅಂದರೆ ಮೆಕಾನಿಕ್ ಷಾಕ್, ಡಸ್ಟ್ ಪ್ರೊಟೆಕ್ಟ್, ಗರಿಷ್ಠ ಮತ್ತು ಕನಿಷ್ಠ ಟೆಂಪರೇಚರ್ ಇವೆಲ್ಲದರಲ್ಲೂ ಓಕೆ ಆಗಿದೆ. ಈ ಥಿಂಕ್ ಪ್ಯಾಡ್ ಗಳು ಎಲ್ ಇಡಿ 16.9 ಇಂಚಿನ ಡಿಸ್ ಪ್ಲೇ ಹೊಂದಿವೆ.

ಥಿಂಕ್ ಪ್ಯಾಡ್ ಲ್ಯಾಪ್ ಟಾಪ್ ಇಂಟೆಲ್ ಕೊರ್ ಐ5 ಪ್ರೊಸೆಸರ್ ಹೊಂದಿದೆ. ಇಂಟೆಲ್ ಎಚ್ ಡಿ ಗ್ರಾಫಿಕ್ಸ್ ಕೂಡ ಇರುವುದರಿಂದ ದಕ್ಷತೆ ಇನ್ನಷ್ಟು ಹೆಚ್ಚಿದೆ. ಕೀ ಬೋರ್ಡ್ ನಲ್ಲಿ ಮಲ್ಟಿ ಟಚ್ ಪ್ಯಾಡ್ ಮತ್ತು ಟ್ರಾಕ್ ಪಾಯಿಂಟ್ ಇರುವುದರಿಂದ ಸುಲಭವಾಗಿ ಕಾರ್ಯನಿರ್ವಹಿಸಬಹುದಾಗಿದೆ.

ವಿದ್ಯುತ್ ಉಳಿತಾಯ ಮಾಡಲು ಶೇಕಡ ನೂರರಷ್ಟು ಕಾರ್ಯಕ್ಷಮತೆಯ ಎಲ್ ಇಡಿ ಎಚ್ ಡಿ ಡಿಸ್ ಪ್ಲೇ ಇದೆ. ಕಂಪನಿಯ ಹಳೆಯ ಸೀರಿಸ್ ಲ್ಯಾಪ್ ಟಾಪ್ ಗಳಿಗೆ ಹೋಲಿಸಿದರೆ ಬ್ಯಾಟರಿ ಬಾಳಿಕೆ ಶೇಕಡ 40ರಷ್ಟು ಹೆಚ್ಚಾಗಿದೆ. ಹಳೆಯ ಲ್ಯಾಪ್ ಟಾಪ್ ಗಳಿಗೆ ಹೋಲಿಸಿದರೆ ದರ ಕೂಡ ಹೆಚ್ಚಾಗಿದೆ. ಅಂದರೆ ಇದರ ದರ 70,500 ರುಪಾಯಿ. ಖರೀದಿಸೋ ಮುನ್ನ ಸ್ವಲ್ಪ ಥಿಂಕ್ ಮಾಡಿ!!

Please Wait while comments are loading...
Opinion Poll

Social Counting