ಕಡಿಮೆ ಬೆಲೆ ಆಂಡ್ರಾಯ್ಡ್‌ ಫೋನ್‌ ಖರೀದಿಸುವ ಮುನ್ನಾ ಎಚ್ಚರವಾಗಿರಿ

Posted By:

ಗಿಜ್ಬಾಟ್‌ ಇತ್ತೀಚಿಗಷ್ಟೇ ಸ್ಮಾರ್ಟ್‌ಫೋನ್ ಖರೀದಿಗೆ ಸಂಬಂಧಿಸಿದಂತೆ 6 ಟಿಪ್ಸ್ ತಂದಿತ್ತು. ಈಗ ಕಡಿಮೆ ದರದ ಆಂಡ್ರಾಯ್ಡ್‌ ಫೋನ್‌ ಖರೀದಿಸುವ ಮುನ್ನಾ ನೀವು ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ತಂದಿದೆ. ಅನೇಕ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್‌ ಮಾರುಕಟ್ಟೆಗೆ ಬಿಡುತ್ತಿವೆ. ಈ ಸಂದರ್ಭದಲ್ಲಿ ಹೊಸದಾಗಿ ಕೊಳ್ಳುವವರು ಹ್ಯಾಂಡ್‌ಸೆಟ್ ಇತರ ವಿಷಯಗಳನ್ನು ನಿರ್ಲಕ್ಷ್ಯಿಸಿ ಕೇವಲ ಬೆಲೆಯನ್ನು ನೋಡಿ ಫೋನ್‌ ಖರೀದಿಸುತ್ತಾರೆ. ಆದರೇ ಕೆಲ ಸಮಯದ ನಂತರ ಈ ಹ್ಯಾಂಡ್‌ಸೆಟ್‌ ಹಣೆಬರಹ ಗೊತ್ತಾಗುತ್ತದೆ. ಹಾಗಾಗಿ ಗಿಜ್ಬಾಟ್ ತನ್ನ ಓದುಗರಿಗೆ ಕಡಿಮೆ ಬೆಲೆಯ ಆಂಡ್ರಾಯ್ಡ್‌ ಫೋನ್‌ ಖರೀದಿಸುವಾಗ ತೆಗದುಕೊಳ್ಳಬೇಕಾದ 5 ಎಚ್ಚರಿಕೆಯ ಸೂತ್ರವನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ಓದಿಕೊಂಡು ಹೋಗಿ.

ವಿವಿಧ ಕಂಪೆನಿಗಳ ಮೊಬೈಲ್‌ ದರ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಚ್‌ಸ್ಕ್ರೀನ್‌ ಚೆನ್ನಾಗಿರಲಿ:

ಕಡಿಮೆ ಬೆಲೆ ಆಂಡ್ರಾಯ್ಡ್‌ ಫೋನ್‌ ಖರೀದಿಸುವ ಮುನ್ನಾ ಎಚ್ಚರವಾಗಿರಿ

ಸ್ಕ್ರೀನ್‌ ಚೆನ್ನಾಗಿದ್ದರೆ ತಾನೇ ನಿಮ್ಮ ಕೆಲಸ ಸುಲಭವಾಗುವುದು. ಹಾಗಾಗಿ ಕಡಿಮೆ ಗುಣಮಟ್ಟದ ಟಚ್‌ಸ್ಕ್ರೀನ್‌ ಹೊಂದಿರುವ ಆಂಡ್ರಾಯ್ಡ್‌ ಫೋನ್‌ ಖರೀದಿಸಬೇಡಿ.480 *320 ಪಿಕ್ಸೆಲ್‌ಗಳಿಗಿಂತ ಹೆಚ್ಚಿರುವ ಟಚ್‌ಸ್ಕ್ರೀನ್‌ ಖರೀದಿಸಿ.

ಪ್ರೊಸೆಸರ್‌, RAM ಬಗ್ಗೆ ವಿಚಾರಿಸಿಕೊಳ್ಳಿ

ಕಡಿಮೆ ಬೆಲೆ ಆಂಡ್ರಾಯ್ಡ್‌ ಫೋನ್‌ ಖರೀದಿಸುವ ಮುನ್ನಾ ಎಚ್ಚರವಾಗಿರಿ

ಕಡಿಮೆ ವೇಗದ ಸಿಂಗಲ್‌ ಕೋರ್‌ ಪ್ರೊಸೆಸರ್‌ ಮತ್ತು ಕಡಿಮೆ ಸಾಮರ್ಥ್ಯ ಹೊಂದಿರುವ RAM ಆಂಡ್ರಾಯ್ಡ್‌ ಫೋನ್‌ಗಳಿಂದ ದೂರವಿರಿ. ಕನಿಷ್ಠ 1GHz ಹೊಂದಿರುವ ಪ್ರೊಸೆಸರ್‌ ಖರೀದಿಸಿ. ಅದೇ ರೀತಿ ಕನಿಷ್ಠ 512 MB RAM ಇರುವಂತಹ ಫೋನ್‌ ಖರೀದಿಸಿ. ಬೆಲೆ ಕಡಿಮೆ ಎಂದು ನೀವು ಇವುಗಳನ್ನು ಗುಣಮಟ್ಟವನ್ನು ನಿರ್ಲಕ್ಷ್ಯ ಮಾಡಿದರೆ ತೊಂದರೆ ಅನುಭವಿಸುತ್ತೀರಿ. ಕಡಿಮೆ ವೇಗದ ಪ್ರೊಸೆಸರ್‌ ಮತ್ತು RAM ಖರೀದಿಸಿದ್ರೆ ನಿಮ್ಮ ಫೋನ್‌ ಆಗಾಗ ಹ್ಯಾಂಗ್ ಆಗುತ್ತೆ, ಕೆಲಸಗಳು ಎಲ್ಲಾ ನಿಧಾನವಾಗತೊಡಗುತ್ತದೆ.

ಕವರ್‌ ವಿಚಾರದಲ್ಲಿ ರಾಜೀಯಾಗದಿರಿ

ಕಡಿಮೆ ಬೆಲೆ ಆಂಡ್ರಾಯ್ಡ್‌ ಫೋನ್‌ ಖರೀದಿಸುವ ಮುನ್ನಾ ಎಚ್ಚರವಾಗಿರಿ

ನಿಮ್ಮಲ್ಲಿರುವ ಹ್ಯಾಂಡ್‌ಸೆಟ್ ದೀರ್ಘ ಕಾಲ ಬಾಳಿಕೆ ಬರಬೇಕಲ್ವೇ ? ಹಾಗಾಗಿ ಖರೀದಿಸುವಾಗ ಕವರ್‌ ಗಟ್ಟಿಇರುವ ಹ್ಯಾಂಡ್‌ಸೆಟ್‌ ಖರೀದಿಸಿ. ಕೆಲವೊಂದು ಕಂಪೆನಿಗಳು ನೋಡಲು ಆಕರ್ಷಕವಾಗಿರುವ ಹ್ಯಾಂಡ್‌ಸೆಟ್‌ ವಿನ್ಯಾಸ ಮಾಡುತ್ತಾರೆ. ಆದರೇ ಅದರ ಕವರ್‌ ಗುಣಮಟ್ಟ ತುಂಬಾ ಕಳಪೆಯಾಗಿರುತ್ತದೆ. ಹಾಗಾಗಿ ಗಟ್ಟಿ ಪ್ಲಾಸ್ಟಿಕ್‌, ಸ್ಟೀಲ್‌ಕವರ್‌ ಹೊಂದಿರುವ ಹ್ಯಾಂಡ್‌ಸೆಟ್‌ ಖರೀದಿಸಿ.

ಆಂಡ್ರಾಯ್ಡ್‌ ಅಪ್‌ಡೆಟ್‌ ಆಗುತ್ತಾ ವಿಚಾರಿಸಿಕೊಳ್ಳಿ

ಕಡಿಮೆ ಬೆಲೆ ಆಂಡ್ರಾಯ್ಡ್‌ ಫೋನ್‌ ಖರೀದಿಸುವ ಮುನ್ನಾ ಎಚ್ಚರವಾಗಿರಿ

ಗೂಗಲ್‌ ಕಂಪೆನಿ ಆಂಡ್ರಾಯ್ಡ್‌ ಓಎಸ್‌ ಅಪ್‌ಡೆಟ್‌ ಮಾಡುತ್ತಲೇ ಇರುತ್ತಾರೆ. ಜಿಂಜರ್‌ಬ್ರೆಡ್‌ ಇದ್ದದ್ದು ಐಸ್‌ಕ್ರೀಮ್‌ ಸ್ವಾಂಡ್ವಿಚ್‌ ಆಯ್ತು,ಈಗ ಐಸಿಎಸ್‌ ಹೋಗಿ ಜೆಲ್ಲಿ ಬೀನ್‌ ಆಗಿದೆ. ಹಾಗಾಗಿ ಖರೀದಿಸುವಾಗ ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್‌ ಓಎಸ್‌ ಅಪಡೆಟ್‌ ಮಾಡಲು ಆಗುತ್ತದೆಯೇ ಎಂಬುದನ್ನು ವಿಚಾರಿಸಿಕೊಳ್ಳಿ. ಒಂದು ವೇಳೆ ಕಡಿಮೆ RAM ಹೊಂದಿರುವ ಹ್ಯಾಂಡ್‌ಸೆಟ್‌ ನಿಮ್ಮಲ್ಲಿದ್ದರೆ ಓಎಸ್‌ ಅಪ್‌ಡೆಟ್‌ ಮಾಡಲು ಸಾಧ್ಯವಿಲ್ಲ.

ಹ್ಯಾಂಡ್‌ಸೆಟ್‌ ಬೆಲೆಯ ಬಗ್ಗೆ ಗಮನವಿರಲಿ

ಕಡಿಮೆ ಬೆಲೆ ಆಂಡ್ರಾಯ್ಡ್‌ ಫೋನ್‌ ಖರೀದಿಸುವ ಮುನ್ನಾ ಎಚ್ಚರವಾಗಿರಿ

ನಮ್ಮಲ್ಲಿ ಬಹುತೇಕ ಮಂದಿ ಹ್ಯಾಂಡ್‌ಸೆಟ್‌ ಬೆಲೆಯನ್ನು ಮೊದಲು ಗಮನಿಸಿ ನಂತರ ಫೋನ್‌ ಖರೀದಿಸುತ್ತಾರೆ. ಆದರೆ ಆಂಡ್ರಾಯ್ಡ್‌ ಫೋನ್‌ ಖರೀದಿಸುವಾಗ ಈ ಹಿಂದಿನ ಪುಟದಲ್ಲಿನ ವಿಚಾರಗಳನ್ನು ಚರ್ಚಿಸಿ ನಂತರ ಹ್ಯಾಂಡ್‌ಸೆಟ್‌ ಖರೀದಿಸಿ.ಯಾಕಂದರೆ ಕಡಿಮೆ ಬೆಲೆಯ ಹ್ಯಾಂಡ್‌ಸೆಟ್‌ ಖರೀದಿಸಿ ನಂತರ ಇದಕ್ಕೆ ದುಬಾರಿ ಬೆಲೆ ನೀಡಿ ರಿಪೇರಿ ಮಾಡಬೇಕಾದಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot