ಗೂಗಲ್ ಕ್ರೋಮ್ ಇನ್ನು ಮುಂದೆ ನಿಮ್ಮ ಮಾತೃಭಾಷೆಯಲ್ಲಿ ಸೆಟ್ ಮಾಡಿಕೊಳ್ಳಿ

By Gizbot Bureau
|

ಗೂಗಲ್ ಸರ್ಚ್ ನಲ್ಲಿ ನೀವೇನೇ ಟೈಪ್ ಮಾಡಿದರೂ ಕೂಡ ಅದು ವಿಭಿನ್ನ ಭಾಷೆಗಳಲ್ಲಿ ತೋರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ ಬಳಕೆದಾರರಿಗೆ ಡೀಫಾಲ್ಟ್ ಭಾಷೆಯನ್ನು ಬದಲಾಯಿಸಿಕೊಳ್ಳುವುದಕ್ಕೂ ಕೂಡ ಗೂಗಲ್ ಕ್ರೋಮ್ ಅವಕಾಶ ನೀಡುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಭಾಷೆಯಲ್ಲಿ ಗೂಗಲ್ ಕ್ರೋಮ್ ಬಳಸಲು ಇಚ್ಚಿಸುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸುವುದಕ್ಕೆ ಮರೆಯಬೇಡಿ.

ಪ್ರಮುಖ ಅಗತ್ಯತೆಗಳು:

ನಿಮ್ಮ ಡಿವೈಸ್ ನಲ್ಲಿ ನೂತನ ವರ್ಷನ್ನಿನ ಗೂಗಲ್ ಕ್ರೋಮ್ ಕಾರ್ಯ ನಿರ್ವಹಿಸುತ್ತಿರಬೇಕು.

ಅನುಸರಿಸಬೇಕಾಗಿರುವ ಹಂತಗಳು:

ಸ್ಟಾರ್ಟ್ ಮೆನು

ಸ್ಟಾರ್ಟ್ ಮೆನು

ಸ್ಟಾರ್ಟ್ ಮೆನು ಅಥವಾ ಲಾಂಚರ್ ಬಳಸಿ ನಿಮ್ಮ ಪಿಸಿ ಅಥವಾ ಮ್ಯಾಕ್ ನಲ್ಲಿ ಗೂಗಲ್ ಕ್ರೋಮ್ ನ್ನು ಲಾಂಚ್ ಮಾಡಿ.

ವಿಂಡೋಸ್ ಬಳಕೆದಾರರು ಶಾರ್ಟ್ ಕಟ್ ಬಳಸಿ ಗೂಗಲ್ ಕ್ರೋಮ್ ನ್ನು ತೆರೆಯಬಹುದು ಅಥವಾ ಸ್ಟಾರ್ಟ್ ಮೆನುಗೆ ತೆರಳಿ ಕೂಡ ಓಪನ್ ಮಾಡಬಹುದು. ಅಥವಾ ಸರಳವಾಗಿ ಗೂಗಲ್ ಕ್ರೋಮ್ ನ್ನು ಸರ್ಚ್ ಮಾಡಿಯೂ ತೆರೆಯಬಹುದು.

ಡಾಕ್ ಅಥವಾ ಲಾಂಚರ್ ಬಳಸಿ ಬ್ರೌಸರ್ ನ್ನು ಆಕ್ಸಿಸ್ ಮಾಡುವುದಕ್ಕೆ ಮ್ಯಾಕ್ ಬಳಕೆದಾರರಿಗೆ ಅವಕಾಶವಿರುತ್ತದೆ.


ಇದೀಗ ಮೆನು ಬಟನ್ ಗೆ ತೆರಳಿ ಅದಕ್ಕಾಗಿ ಕ್ರೋಮ್ ವಿಂಡೋದಲ್ಲಿ ಮೇಲ್ಬಾಗದ ಬಲದಲ್ಲಿರುವ ಮೂರು ಲಂಬವಾಗಿರುವ ಡಾಟ್ ಗೆ ತೆರಳಿ.

ಡ್ರಾಪ್ ಡೌನ್ ಮೆನು ಆಯ್ಕೆಯಲ್ಲಿ ಸೆಟ್ಟಿಂಗ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಅಥವಾ ಬಳಕೆದಾರರು ‘chrome://settings/' ಎಂದು ಅಡ್ರೆಸ್ ಬಾರ್ ನಲ್ಲಿ ಟೈಪ್ ಮಾಡುವ ಮೂಲಕವೂ ಕ್ರೋಮ್ ಸೆಟ್ಟಿಂಗ್ಸ್ ಗೆ ತೆರಳಬಹುದು.

ಸೆಟ್ಟಿಂಗ್ಸ್ ಮೆನು

ಸೆಟ್ಟಿಂಗ್ಸ್ ಮೆನು

ಸೆಟ್ಟಿಂಗ್ಸ್ ಮೆನುವಿನ ಅಡಿಯಲ್ಲಿ, ಸ್ಕ್ರೋಲ್ ಡೌನ್ ಮಾಡಿ ಮತ್ತು ಅಡ್ವಾನ್ಸ್ ಆಯ್ಕೆಯನ್ನು ಗಮನಿಸಿ ಮತ್ತು ಅದನ್ನು ಕ್ಲಿಕ್ಕಿಸಿ.

ಅಡ್ವಾನ್ಸ್ ಆಯ್ಕೆಯು ಸೆಟ್ಟಿಂಗ್ಸ್ ಮೆನು ಪೇಜಿನ ಕೆಳಭಾಗದಲ್ಲಿ ಇರುತ್ತದೆ. ಇದು ಪಾಸ್ ವರ್ಡ್, ಆಟೋ ಫಿಲ್, ಲಾಂಗ್ವೇಜ್ ಇತ್ಯಾದಿಗಳಂತೆ ಹೆಚ್ಚುವರಿ ಆಯ್ಕೆ ಆಗಿರುತ್ತದೆ.

ನಂತರ ಲಾಂಗ್ವೇಜ್ ಆಯ್ಕೆಯನ್ನು ಕ್ಲಿಕ್ಕಿಸಿ

ನಂತರ ಸ್ಕ್ರೋಲ್ ಡೌನ್ ಮಾಡಿ. ಲಾಂಗ್ವೇಜ್ ಆಯ್ಕೆಯನ್ನು ಗಮನಿಸಿ ಮತ್ತು ಆ ಆಯ್ಕೆಯ ಮುಂಭಾಗದಲ್ಲಿರುವ ಕೆಳಭಾಗಕ್ಕೆ ಮುಖ ಮಾಡಿಕೊಂಡಿರುವ ಬಾಣದ ಗುರುತನ್ನು ಟ್ಯಾಪ್ ಮಾಡಿ.

ಇದೀಗ ನಿಮ್ಮ ಅಗತ್ಯದ ಭಾಷೆಯನ್ನು ಸೇರಿಸುವುದಕ್ಕಾಗಿ ‘Add a language' ಆಯ್ಕೆಯನ್ನು ಕ್ಲಿಕ್ಕಿಸಿ.

ಭಾಷೆಯ ಲಿಸ್ಟ್

ಭಾಷೆಯ ಲಿಸ್ಟ್

ಭಾಷೆಯ ಲಿಸ್ಟ್ ನ್ನು ಸ್ಕ್ರೋಲ್ ಮಾಡಿ ನಿಮ್ಮ ಭಾಷೆಯನ್ನು ಹುಡುಕಾಡಿ ಅಥವಾ ನಿಮ್ಮ ಭಾಷೆಯನ್ನು ಟೈಪ್ ಮಾಡುವ ಮೂಲಕವೂ ಪಡೆಯಬಹುದು.

ಭಾಷೆಯನ್ನು ಸೆಲೆಕ್ಟ್ ಮಾಡುವುದಕ್ಕಾಗಿ ಕ್ಲಿಕ್ಕಿಸಿ ಮತ್ತು ಆಡ್ ಬಟನ್ ನ್ನು ಟ್ಯಾಪ್ ಮಾಡಿ.

ಇದೀಗ ಡೀಫಾಲ್ಟ್ ಲಾಂಗ್ವೇಜ್ ಲಿಸ್ಟ್ ನಲ್ಲಿ ಕೆಳಭಾಗದಲ್ಲಿ ಹೊಸದಾಗಿ ಸೇರಿಸಲ್ಪಟ್ಟಿರುವ ಭಾಷೆಯೂ ಕಾಣುತ್ತದೆ.

ಒಂದು ವೇಳೆ ಹಲವು ಭಾಷೆಗಳು ಆಯ್ಕೆಯಾಗಿದ್ದಲ್ಲಿ ಹೊಸ ಭಾಷೆಯನ್ನು ಬಳಕೆದಾರರು ಡಿಫಾಲ್ಟ್ ಆಗಿ ಆಯ್ಕೆ ಮಾಡಿ ಸೆಟ್ ಮಾಡಬೇಕಾಗುತ್ತದೆ.

ಡೀಫಾಲ್ಟ್ ಭಾಷೆಯನ್ನು ಸೆಟ್ ಮಾಡುವುದಕ್ಕೆ ಮೆನು ಆಯ್ಕೆಯಲ್ಲಿರುವ ಮೂರು ಲಂಬವಾಗಿರುವ ಚುಕ್ಕಿಗಳನ್ನು ಹಿಟ್ ಮಾಡಿ . ಲಿಸ್ಟ್ ನ ನಿರ್ಧಿಷ್ಟ ಭಾಷೆಯ ಬಲಬದಿಯಲ್ಲಿ ಇದು ಇರುತ್ತದೆ ಮತ್ತು ‘Display Google Chrome in this language'.ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಬದಲಾವಣೆಯನ್ನು ಸೇವ್ ಮಾಡಲು ಮತ್ತು ಗಮನಿಸಲು ಬ್ರೌಸರ್ ನ್ನು ರೀಸ್ಟಾರ್ಟ್ ಮಾಡಿ.

Best Mobiles in India

Read more about:
English summary
Here’s how you can use Google Chrome in Hindi and other languages

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X