ನಿಮ್ಮ ಜಿ-ಮೇಲ್‌ನ್ನು ಥರ್ಡ್‌ ಪಾರ್ಟಿ ಆಪ್ ಗಳು ಸ್ಕ್ಯಾನ್ ಮಾಡುತ್ತಿವೆಯೇ..! ಆಗಿದ್ರೇ ಅದನ್ನು ನಿಲ್ಲಿಸುವುದು ಹೇಗೆ?

By GizBot Bureau
|

ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಅನ್ನುವ ಹಾಗೆ, ಅಂತರ್ಜಾಲದಲ್ಲಿ ನಿಮ್ಮ ಡಾಟಾಗಳಿಗೆ ನೀವೇ ಜವಾಬ್ದಾರರು ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಲು ಆರಂಭವಾಗಿದೆ. ಹೌದು, ಇತ್ತೀಚೆಗಷ್ಟೇ ಗೂಗಲ್ ತನ್ನ ದೊಡ್ಡ ಫ್ಲಾಟ್ ಫಾರ್ಮ್ ನಲ್ಲಿ ಇ-ಮೇಲ್ ಗಳ ಸುರಕ್ಷತೆಯ ಬಗ್ಗೆ ಕಾಳಜಿ ತೆಗೆದುಕೊಂಡಿದ್ದರೂ ಕೂಡ, ಥರ್ಡ್ ಪಾರ್ಟಿ ಆಪ್ ತಯಾರಕರು ಅದನ್ನು ಆಕ್ಸಿಸ್ ಮಾಡಲು ಸಾಧ್ಯವಾಗುತ್ತಿದೆ ಎಂಬ ವರದಿ ಕೇಳಿಯಾಗಿತ್ತು.

ಜಿ-ಮೇಲ್‌ನ್ನು ಆಪ್ ಗಳು ಸ್ಕ್ಯಾನ್ ಮಾಡುತ್ತಿದ್ದರೆ ನಿಲ್ಲಿಸುವುದು ಹೇಗೆ?

ವಾಲ್ ಸ್ಟ್ರೀಟ್ ಜರ್ನಲ್ ನ ವರದಿಯ ಹೇಳಿಕೆಯಂತೆ ನೂರಕ್ಕೂ ಅಧಿಕ ಸಾಫ್ಟ್ ವೇರ್ ತಯಾರಕರಿಗೆ ಗೂಗಲ್ ನಿಮ್ಮ ಜಿ-ಮೇಲ್ ಇನ್ ಬಾಕ್ಸ್ ನ್ನು ಸ್ಕ್ಯಾನ್ ಮಾಡಲು ಅವಕಾಶ ನೀಡುತ್ತದೆ ಆ ಮೂಲಕ ನಿಮ್ಮ ವಯಕ್ತಿಕ ಮಾಹಿತಿಯನ್ನು ಆಧರಿಸಿ ಜಾಹಿರಾತು ಕಂಪೆನಿಗಳು ನಿಮ್ಮನ್ನು ಟಾರ್ಗೆಟ್ ಮಾಡುತ್ತವೆ.

ಆದರೆ, ಈಗ ಹೀಗೆ ಎಲ್ಲಾ ಥರ್ಡ್ ಪಾರ್ಟಿ ಆಪ್ ತಯಾರಕರನ್ನು ದೂರವಿಡಲು ನಿಮಗೆ ಅವಕಾಶವಿದೆ. ಕೆಲವು ಸರಳ ಹಂತಗಳನ್ನು ಅನುಸರಿಸಿ, ಇದನ್ನು ಸಾಧಿಸಬಹುದು. ಆ ಹಂತಗಳು ಇಲ್ಲಿವೆ ನೋಡಿ.

ಹಂತ 1:

ಹಂತ 1:

ಗೂಗಲ್ ಸೆಕ್ಯುರಿಟಿ ಚೆಕ್ ಅಪ್ ಪೇಜ್ ಗೆ ತೆರಳಿ. ಅದುವೇ
https://myaccount.google.com/security-checkup/3 ಈ ಪೇಜ್ ನಿಮಗೆ ಕೇವಲ ಯಾವೆಲ್ಲ ಡಿವೈಸ್ ನಿಂದ ಗೂಗಲ್ ಅಕೌಂಟಿಗೆ ಲಾಗಿನ್ ಆಗಿದ್ದೀರಿ ಎಂಬುದನ್ನು ಮಾತ್ರ ತಿಳಿಸುವುದಿಲ್ಲ ಬದಲಾಗಿ ಯಾವೆಲ್ಲ ಥರ್ಡ್ ಪಾರ್ಟಿ ಆಪ್ ಗಳಿಗೆ ನೀವು ನಿಮ್ಮ ಗೂಗಲ್ ಅಕೌಂಟ್ ಸ್ಕ್ಯಾನ್ ಮಾಡಲು ಅನುಮತಿಸಿದ್ದೀರಿ ಎಂಬ ಮಾಹಿತಿಯನ್ನು ಒದಗಿಸುತ್ತದೆ.

ಹಂತ 2:

ಹಂತ 2:

ಪೇಜಿನ ಕೆಳಭಾಗಕ್ಕೆ ಸ್ಕ್ಯಾನ್ ಮಾಡಿ ಮತ್ತು ‘Third-party access'ನ್ನು ಕ್ಲಿಕ್ಕಿಸಿ. ಇದನ್ನು ಕ್ಲಿಕ್ ಮಾಡುತ್ತಿದ್ದಂತೆ ನಿಮಗೊಂದು ಡ್ರಾಪ್ ಡೌನ್ ಲಿಸ್ಟ್ ಸಿಗುತ್ತದೆ ಅದರಲ್ಲಿ ಯಾವೆಲ್ಲ ಆಪ್ ಗಳಿಗೆ ನಿಮ್ಮ ಗೂಗಲ್/ಜಿ-ಮೇಲ್ ಅಕೌಂಟಿಗೆ ಆಕ್ಸಿಸ್ ಇದೆ ಎಂಬುದು ತಿಳಿಯಲಿದೆ. ಪ್ರತಿಯೊಂದು ಆಪ್ ನ್ನು ಕ್ಲಿಕ್ ಮಾಡಿ ನೋಡುವುದರಿಂದಾಗಿ ನಿಮಗೆ ಆ ಆಪ್ ನಿರ್ಧಿಷ್ಟ ಸೇವೆಯ ಬಗ್ಗೆ ತಿಳಿಯುತ್ತದೆ.

ಹಂತ 3:

ಹಂತ 3:

ಒಂದು ವೇಳೆ ನೀವು ಆ ಆಪ್ ನ ಗೂಗಲ್ ಅಕೌಂಟಿನ ಆಕ್ಸಿಸ್ ತೆಗೆಯಲು ಇಚ್ಛಿಸಿದರೆ, ಸರಳವಾಗಿ ‘Remove Access' ನ್ನು ಕ್ಲಿಕ್ಕಿಸಿ.
ನೀವು ಗೂಗಲ್ ಸೇವೆಯ ಆಕ್ಸಿಸ್ ನ್ನು ಯಾವೆಲ್ಲ ಡಿವೈಸ್ ನಿಂದ ನೀವು ಲಾಗಿನ್ ಆಗಿದ್ದೀರೋ ಆ ಡಿವೈಸ್ ಗಳಿಗೂ ತೆಗೆಯಬಹುದು.

ರಿವ್ಯೂ ಪ್ರೊಸೆಸ್ ಅನುಸರಿಸಬೇಕು

ರಿವ್ಯೂ ಪ್ರೊಸೆಸ್ ಅನುಸರಿಸಬೇಕು

ಆದರೆ WSJ ವರದಿಯ ನಂತರ ಗೂಗಲ್ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಆಕ್ಸಿಸ್ ಪಡೆಯಲು ಥರ್ಡ್ ಪಾರ್ಟಿ ಆಪ್ ಗಳು ಸರಿಯಾದ ರಿವ್ಯೂ ಪ್ರೊಸೆಸ್ ನ್ನು ಅನುಸರಿಸಬೇಕಂತೆ. ಆಗ ಮಾತ್ರ ಬಳಕೆದಾರರ ಡಾಟಾ ಆಕ್ಸಿಸ್ ಮಾಡಲು ಅವಕಾಶವಂತೆ. ಅಷ್ಟೇ ಅಲ್ಲ, ಸೂಕ್ಷ್ಮ ಬಳಕೆದಾರರ ಡಾಟಾವನ್ನು ಪ್ರವೇಶಿಸಲು ಇದಕ್ಕೆ ಅಷ್ಟು ಸುಲಭದಲ್ಲಿ ಅವಕಾಶ ನೀಡುವುದಿಲ್ಲವಂತೆ.

ನಿಮ್ಮ ಡಾಟಾ ಸೆಕ್ಯುರಿಟಿಯನ್ನು ನೀವೇ ನೋಡಿಕೊಳ್ಳಿ..!

ನಿಮ್ಮ ಡಾಟಾ ಸೆಕ್ಯುರಿಟಿಯನ್ನು ನೀವೇ ನೋಡಿಕೊಳ್ಳಿ..!

ಅಷ್ಟೇ ಅಲ್ಲ, ಆಪ್ ಗಳು ಇನ್ಸ್ಟಾಲ್ ಆಗುವಾಗ ಯಾವೆಲ್ಲ ಮಾಹಿತಿಗಳನ್ನು ಈ ಆಪ್ ಬಳಕೆದಾರರಿಂದ ಪಡೆಯುತ್ತದೆ ಎಂಬ ಮಾಹಿತಿಯನ್ನು ನೀಡಲೇಬೇಕು ಎಂಬ ವಿಚಾರವನ್ನೂ ತಿಳಿಸಿದೆ. ಯಾವುದಕ್ಕೂ ನಿಮ್ಮ ಡಾಟಾ ಸೆಕ್ಯುರಿಯನ್ನು ನೀವು ನೋಡಿಕೊಳ್ಳುವುದು ನಿಮ್ಮ ಭದ್ರತೆಯ ದೃಷ್ಟಿಯಿಂದ ಹಿತವಾದುದ್ದು. ಹಾಗಾಗಿ ಈ ಥರ್ಡ್ ಪಾರ್ಟಿ ಆಪ್ ಗಳು ನಿಮ್ಮನ್ನು ಸ್ಕ್ಯಾನ್ ಮಾಡುವುದನ್ನು ಸುಲಭವಾಗಿ ಮೇಲಿನ ಹಂತಗಳನ್ನು ಅನುಸರಿಸಿ ನಿಲ್ಲಿಸಿಬಿಡಿ.

Best Mobiles in India

English summary
How to stop third-party apps from scanning your Gmail inbox. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X