ಮಕ್ಕಳಿಗಾಗಿ ಬರಲಿದೆ ಮಿನಿ ಮೊಬೈಲ್ !

Posted By: Staff

ಮಕ್ಕಳಿಗಾಗಿ ಬರಲಿದೆ ಮಿನಿ ಮೊಬೈಲ್ !
ದೊಡ್ಡವರ ಕೈಯಲ್ಲಿ ಮೊಬೈಲ್ ನೋಡುವಾಗ ಮಕ್ಕಳಿಗೆ ನಮಗೂ ಮೊಬೈಲ್ ಬೇಕೆಂಬ ಹಂಬಲ, ಆದರೆ ಮಕ್ಕಳಿಗೆ ಮೊಬೈಲ್ ಕೊಡಿಸಬೇಕೊ ಬೇಡವೊ ಎಂಬ ಗೊಂದಲ ಹಿರಿಯರಿಗೆ, ಈಗ ಚಿಂತೆ ಬಿಡಿ ಧಾರಾಳವಾಗಿ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಬಹುದು ಒಂದ್ನಿಮಿಷ ತಡಿಯಿರಿ ! ಯಾವ ಮೊಬೈಲ್ ಎಂದು ಗೊತ್ತಾಗ ಬೇಡವೆ?

ಮಕ್ಕಳಿಗಾಗಿಯೆ ಕೊರಿಯನ್ ನ ಮೊಬೈಲ್ ಪೋನ್ ತಯಾರಕರು ಮಕ್ಕಳಿಗಾಗಿ 'ಮಿನಿ' ಎಂಬ ಹೊಸ ಮೊಬೈಲ್ ಅನ್ನು ತಯಾರಿಸಲು ತೀರ್ಮಾನಿಸಿದೆ. ಬೇಸಿಕ್ ಮೊಬೈಲ್ಸ್ ಎಂಬ ಹೆಸರಿನ ಕಂಪನಿಯು ಅಕ್ಟೋಬರ್ ಕೊನೆಯ ಅಥವಾ ನವಂಬರ್ ತಿಂಗಳಿನ ಮಧ್ಯದಲ್ಲಿಯೆ ಈ ಪುಟಾಣಿಗಳ ಮೊಬೈಲ್ ಅನ್ನು ಬಿಡುಗಡೆಯಾಗಿ ಮಕ್ಕಳ ಮೊಬೈಲ್ ಆಸೆಯನ್ನು ಪೂರೈಸಲು ಬರುತ್ತಿದೆ.

ಬರಲಿರುವ ಮಿನಿ ಮೊಬೈಲ್ ನ ಗುಣಲಕ್ಷಣಗಳು ಇಂತಿವೆ:

* ಮೊಬೈಲ್ ನ ಗಾತ್ರ 7.8 x 3.6 x 1.4 cm
* ತೂಕ 40 ಗ್ರಾಂ
* ನಂ ಮತ್ತು ಇಂಗ್ಲೀಷ್ ಅಕ್ಷರ ಹೊಂದಿರುವ ಕೀಪ್ಯಾಡ್
* ಇ ಮೇಲ್ ಮತ್ತು ಮ್ಯೂಸಿಕ್ ಪ್ಲೇಯರ್ ಸೌಲಭ್ಯ
* ಹಾಡುಗಳ ಆಯ್ಕೆಗೆ ಬಟನ್
* 400 mAh ಬ್ಯಾಟರಿ
* 1 GB ಸಮರ್ಥ್ಯದ ಮೆಮೊರಿ ಕಾರ್ಡ್
* ಸ್ಟಿರಿಯೋ ಹೆಡ್ ಸೆಟ್
* FM ರೇಡಿಯೋ

ಇಷ್ಟೆಲ್ಲಾ ಸೌಲಭ್ಯಕ್ಕಿಂತ ಮಕ್ಕಳಿಗೆ ಇನ್ನೇನು ಬೇಕು ಅಲ್ಲವಾ? ಈ ಮೊಬೈಲ್ ಅನ್ನು ಮಕ್ಕಳಿಗೆ ಕೊಡಿಸ ಬಯಸುವರು ಸ್ವಲ್ಪ ಕಾದರೆ ಈ ಉತ್ತಮ ಗುಣಮಟ್ಟದ ಮಿನಿ ಮೊಬೈಲ್ ರು. 3,400 ಕ್ಕೆ ಕೊಡಿಸಬಹುದು. ಇದರ ಮತ್ತೊಂದು ಆಯಾಮ ರು. 3,900ಕ್ಕೆ ಲಭ್ಯವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot