ಭಾರತಕ್ಕೆ ಬರುತ್ತಿದೆ ಡೂಗಿ ಸ್ಮಾರ್ಟ್‌ಫೋನ್!...ಶಿಯೋಮಿಗೂ ಸೆಡ್ಡು ಹೊಡೆಯಲಿದೆ!!

Written By:

ಪ್ರತಿವರ್ಷವೂ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿ ಒಂದಿಲ್ಲೊಂದು ಫೀಚರ್ಸ್ ಹೈಲೆಟ್ ಆಗುತ್ತಲೇ ಇರುತ್ತದೆ, ಅದಕ್ಕೆ ಈ ವರ್ಷ ಡಿಸ್‌ಪ್ಲೇ ಸೇರ್ಪಡೆಯಾಗಿದೆ.! ಹೌದು, ಸ್ಮಾರ್ಟ್‌ಫೋನ್ ಗ್ರಾಹಕರು 5.5 ಇಂಚ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಹಿಂದೆ ಬಿದ್ದಿದ್ದಾರೆ.!!

ಅದಕ್ಕೋ ಏನೊ ಮೊಬೈಲ್ ಡಿಸ್‌ಪ್ಲೇ ಮಾದರಿ ಕದಿಯುವವರ ಸಂಖ್ಯೆ ಹೆಚ್ಚಾಗಿದೆ.! ಇದೀಗ ಚೀನಾ ಮೂಲದ ಡೂಗಿ ಎಂಬ ಮೊಬೈಲ್ ಕಂಪೆನಿ ಶಿಯೋಮಿಯ ಮೈಮ್ಯಾಕ್ಸ್ ಸ್ಮಾರ್ಟ್‌ಫೋನ್ ರೀತಿಯಲ್ಲಿಯೇ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆಮಾಡಿದೆ.!!

ಅಷ್ಟೇನು ಪರಿಚಿತವಲ್ಲದ ಚೀನಾ ಮೂಲದ ಮೊಬೈಲ್ ಕಂಪೆನಿ ಇದಾಗಿದ್ದು, ಡೂಗಿ ಮಿಕ್ಸ್ ಎಂಬ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ.! ಹಾಗಾದರೆ, ಡೂಗಿ ಮಿಕ್ಸ್ ಸ್ಮಾರ್ಟ್‌ಫೋನ್ ಹೇಗಿದೆ? ಅದರ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚ್‌ ಡಿಸ್‌ಪ್ಲೇ ಹೊಂದಿದೆ ಡೂಗಿ ಮಿಕ್ಸ್ ಸ್ಮಾರ್ಟ್‌ಫೋನ್!!

5.5 ಇಂಚ್‌ ಡಿಸ್‌ಪ್ಲೇ ಹೊಂದಿದೆ ಡೂಗಿ ಮಿಕ್ಸ್ ಸ್ಮಾರ್ಟ್‌ಫೋನ್!!

ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವ AMOLED ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಡೂಗಿ ಮಿಕ್ಸ್ ಸ್ಮಾರ್ಟ್‌ಫೋನ್ ಹೊಂದಿದೆ. ನೂಡಲು ಬೇಜೆಲ್ ಲೆಸ್‌ ಡಿಸ್‌ಪ್ಲೇಯನ್ನು ಹೊಂದಿರುವ ಹಾಗಿದೆ.!!

16 ಮತ್ತು 8 ಎಮ್‌ಪಿ ಕ್ಯಾಮೆರಾ!!

16 ಮತ್ತು 8 ಎಮ್‌ಪಿ ಕ್ಯಾಮೆರಾ!!

ಡೂಗಿ ಮಿಕ್ಸ್ ಸ್ಮಾರ್ಟ್‌ಫೋನ್ ಅತ್ಯುತ್ತಮ ಡ್ಯುವೆಲ್ ಕ್ಯಾಮೆರಾ ಹೊಂದಿದ್ದು, 16 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 8 ಎಮ್‌ಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ.!!

RAM ಮತ್ತು ROM

RAM ಮತ್ತು ROM

4GB RAM ಮತ್ತು 64GB ಸ್ಟೋರೇಜ್ ಹಾಗೂ 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಎರಡು ವೇರಿಯಂಟ್‌ಗಳಲ್ಲಿ ಡೂಗಿ ಮಿಕ್ಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದೆ.!!

ಬ್ಯಾಟರಿ ಹೇಗಿದೆ?

ಬ್ಯಾಟರಿ ಹೇಗಿದೆ?

ಡೂಗಿ ಮಿಕ್ಸ್ ಸ್ಮಾರ್ಟ್‌ಫೋನ್ 3500Amh ಬ್ಯಾಟರಿ ಹೊಂದಿದೆ. ಬುದತೇಕ ಎಲ್ಲಾ ಫೀಚರ್ಗಳು ಸಹ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ರೀತಿಯಲ್ಲಿಯೇ ಹೋಲುತ್ತಿದ್ದು, ಶಿಯೋಮಿಯ ನಕಲು ಈ ಮೊಬೈಲ್ ಎಂದು ಹೇಳಲಾಗುತ್ತಿದೆ.!! ಇನ್ನು ಬೆಲೆಯ ವಿಚಾರಕ್ಕೆ ಬಂದರೆ ಈ ಸ್ಮಾರ್ಟ್‌ಫೋನ್ ಬೆಲೆ ಶಿಯೋಮಿಗಿಂತಲೂ ಕಡಿಮೆ ಇರುತ್ತದೆ ಎಂದು ವರದಿಗಳು ಹೇಳಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Every passing year brings a different smartphone feature in the highlight, one that all brands try to better in their flagship smartphones.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot