Subscribe to Gizbot

ಇನ್ನಷ್ಟು ಸುಧಾರಿತ ಆವೃತ್ತಿಯಲ್ಲಿ ಗೂಗಲ್ ಪ್ಲೇ

Posted By:

ನಿಮ್ಮ ಗೂಗಲ್ ಪ್ಲೇ ಸೇವೆಗಳ ವೈಶಿಷ್ಟ್ಯಗಳು ಯಾವಾಗ ನವೀಕರಣವಾಗುತ್ತದೋ ಎಂಬ ಕಾತರದಲ್ಲಿ ನೀವಿದ್ದಲ್ಲಿ ನಿಮಗಾಗಿ ನಾವೊಂದು ಹೊಸ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಗೂಗಲ್ ಈಗಾಗಲೇ ಈ ಸೇವೆಯಲ್ಲಿ ನಿರತವಾಗಿದ್ದು 4.4 ಆವೃತ್ತಿಯ ಪ್ಲೇ ಸೇವೆಗಳನ್ನು ಹೊರತಂದಿದ್ದು ಇದರಲ್ಲಿ ರಸ್ತೆ ವೀಕ್ಷಣೆಗಳು, ಗೇಮ್‌ಗಳು ಹೀಗೆ ಹಲವಾರು ರೀತಿಯ ಅಂಶಗಳನ್ನು ನಿಮಗೆ ಗಮನಿಸಬಹುದು.

ಇದರಲ್ಲಿ ರಸ್ತೆ ವೀಕ್ಷಣೆ ಅಂಶಗಳು ಲಭ್ಯವಾಗಿದ್ದು ಪನೋರಮಾ ವೀಕ್ಷಣೆಗಳನ್ನು ಇದು ಹೊಂದಿದೆ. ಹಿಂದೆ ಇದ್ದ ನವೀಕರಣಕ್ಕಿಂತ ಅತ್ಯಾಧುನಿಕವಾದ ಆವೃತ್ತಿ ಮತ್ತು ಸೆಟ್ಟಿಂಗ್‌ಗಳನ್ನು ಇದು ಹೊಂದಿದೆ ಎಂದು ಹೇಳಬಹುದಾಗಿದೆ. ಹೊಸ ನವೀಕೃತ ಆವೃತ್ತಿ 4.4ನೊಂದಿಗೆ ಗೂಗಲ್ ಪ್ಲೇ ಸೇವೆಗಳು, ಹೊಸ ರೀತಿಯ ರಸ್ತೆ ಪರಿಚಯ ಅಂಶಗಳನ್ನು ಇದರಲ್ಲಿ ನವೀಕರಿಸಿದೆ. ಇದರಿಂದ ನೀವು ಇನ್ನಷ್ಟು ಉತ್ತಮವಾಗಿ ಲೊಕೇಶನ್, ಗೇಮ್‌ಗಳು ಮತ್ತು ಇನ್ನಷ್ಟನ್ನು ಪಡೆಯಬಹುದಾಗಿದೆ.

ಇನ್ನಷ್ಟು ಸುಧಾರಿತ ಆವೃತ್ತಿಯಲ್ಲಿ ಗೂಗಲ್ ಪ್ಲೇ

ಪ್ರೊಗ್ರಾಮ್ ಮಾಡಿದ ಝೂಮ್ ಹಾಗೂ ಅನಿಮೇಶನ್ ಮಾಡಿದ ಕ್ಯಾಮೆರಾ ಚಲನೆಗಳು ಇದರಲ್ಲಿದ್ದು ಚಿತ್ರಗಳನ್ನು ನಿಮಗೆ ಇನ್ನಷ್ಟು ಅನನ್ಯ ರೂಪದಲ್ಲಿ ತೆಗೆಯಲು ಸಹಾಯ ಮಾಡಲಿದೆ. ಅಷ್ಟಲ್ಲದೇ ಪ್ರಯಾಣ ಮಾಹಿತಿ, ಸ್ಥಳ ಮಾಹಿತಿಯನ್ನು ಗೂಗಲ್ ಪ್ಲೇ ಸೇವೆಗಳು ನೀಡಲಿದ್ದು ಬಳಕೆದಾರರೊಂದಿಗೆ ಈ ಅಪ್ಲಿಕೇಶನ್ ಒಂದು ಉತ್ತಮ ಬಾಂಧವ್ಯವನ್ನು ಸೃಷ್ಟಿಸಿಕೊಳ್ಳಲಿದೆ.

ಇಷ್ಟಲ್ಲದೇ ಗೂಗಲ್ ತನ್ನ ಸ್ಥಾನ ಎಪಿಐ ಗೆ ಎರಡು ಡಿಟೆಕ್ಟರ್ ಅನ್ನು ಕೂಡ ಹಾಕಿಕೊಂಡಿದ್ದು ಇದರಿಂದ ಇದನ್ನು ಬಳಸುವ ಬಳಕೆದಾರ ಓಡುವಾಗ ಅಥವಾ ನಡೆಯುವಾಗ ನಿರ್ದಿಷ್ಟವಾಗಿ ಅದನ್ನು ನೋಂದಾಯಿಸುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot