ಏಪ್ರಿಲ್ ಫೂಲ್ ಮಾಡದಂತೆ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಎಚ್ಚರಿಕೆ!..ಏಕೆ ಗೊತ್ತಾ?

|

ಟೆಕ್ ದೈತ್ಯ ಕಂಪೆನಿ ಮೈಕ್ರೋಸಾಫ್ಟ್ ಸಾರ್ವಜನಿಕರಿಗೆ ತೊಂದರೆ ಮಾಡುವ ಏಪ್ರಿಲ್ ಫೂಲ್ ದಿನ ತಮಾಷೆ ಮಾಡದಂತೆ ತನ್ನ ಉದ್ಯೋಗಿಗಳಿಗೆ ಸೂಚಿಸಿದೆ. ಮೈಕ್ರೋಸಾಫ್ಟ್ ಮಾರುಕಟ್ಟೆ ಮುಖ್ಯಸ್ಥ ಕ್ರಿಸ್ ಕಾಪೋಸೆಲಾ ಅವರು ಮೆಮೋ ಒಂದನ್ನು ಕಳುಹಿಸಿದ್ದು, ಯಾವುದೇ ಉದ್ಯೋಗಿಗಳು ಕೂಡ ಏಪ್ರಿಲ್ 1 ರಂದು ಈ ರೀತಿಯಲ್ಲಿ ಪ್ರ್ಯಾಂಕ್ ಮಾಡಬಾರದು ಎಂದು ತಿಳಿಸಿದ್ದಾರೆ.

ಹೌದು, ಮೈಕ್ರೋಸಾಫ್ಟ್ ಉದ್ಯೋಗಿಗಳು ಏಪ್ರಿಲ್ ಫೂಲ್ ದಿನ ಆಂತರಿಕವಾಗಿ ತಮ್ಮ ತಮ್ಮೊಳಗೆ ಇಂಥವನ್ನು ಮಾಡುವುದಕ್ಕೆ ನಿರ್ಬಂಧವಿಲ್ಲ. ಆದರೆ, ವಿಶೇಷವಾಗಿ ಸಾರ್ವಜನಿಕರನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಈ ರೀತಿ ಏಪ್ರಿಲ್ ಫೂಲ್ ತಮಾಷೆ ಮಾಡುವುದನ್ನು ಅನುಸರಿಸದಂತೆ ಎಚ್ಚರಿಕೆಯ ಸಂದೇಶ ನೀಡಿ ಮೊದಲ ಬಾರಿ ಉದ್ಯೋಗಿಗಳಿಗೆ ಆಶ್ಚರ್ಯ ಮೂಡಿಸಿದ್ದಾರೆ.

ಏಪ್ರಿಲ್ ಫೂಲ್ ಮಾಡದಂತೆ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಎಚ್ಚರಿಕೆ!..ಏಕೆ ಗೊತ್ತಾ?

ನೀವೆಲ್ಲ ಇಂಥಹಾ ಚಟುವಟಿಕೆಗಳಿಗಾಗಿ ಸಾಕಷ್ಟು ಸಮಯ ಮತ್ತು ಸಂಪನ್ಮೂಲ ವ್ಯಯಿಸುತ್ತೀರಿ ಎಂಬುದು ನಿಜಕ್ಕೂ ಶ್ಲಾಘನೀಯವೇ. ಆದರೆ, ಆ ದಿನದಂದು ಮನರಂಜನೆಗೋಸ್ಕರ ಏನೋ ಮಾಡುವುದರಿಂದ ನಾವು ಗಳಿಸುವುದಕ್ಕಿಂತಲೂ ಕಳೆದುಕೊಳ್ಳುವುದೇ ಹೆಚ್ಚು. ಹಾಗಾಗಿ, ಸಾರ್ವಜನಿಕರಿಗೆ ತೊಂದರೆ ಮಾಡುವ ಫೂಲ್ ಬೇಡ ಎಂದು ಅವರು ಸಂದೇಶದಲ್ಲಿ ಹೇಳಿದ್ದಾರೆ.

ಏಪ್ರಿಲ್ 1 ರಂದು ನಡೆಸುವ ಪ್ರ್ಯಾಂಕ್‌ಗಳಿಂದ ಯಾವುದೇ ಧನಾತ್ಮಕ ಪರಿಣಾಮವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ವಾಸ್ತವವಾಗಿ ಇದು ಅನಗತ್ಯವಾದ ಸುದ್ದಿ ಪ್ರಸಾರಕ್ಕೆ ಕಾರಣವಾಗುತ್ತದೆ. ಇಂಥ ಸುದ್ದಿಗಳು ಸುಳ್ಳಾಗಿದ್ದರೂ, ಅರಿವಿಲ್ಲದ ಮಂದಿಯಲ್ಲಿ ಇದೊಂದು ಆತಂಕವನ್ನೋ ಅಥವಾ ಕುತೂಹಲವನ್ನೋ ಸೃಷ್ಟಿಸಿಬಿಡುತ್ತವೆ ಎಂದು ಮೆಮೋದಲ್ಲಿ ಹೇಳಿದ್ದಾರೆ.

ಏಪ್ರಿಲ್ ಫೂಲ್ ಮಾಡದಂತೆ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಎಚ್ಚರಿಕೆ!..ಏಕೆ ಗೊತ್ತಾ?

ಈ ಮೂಲಕ ಟೆಕ್ ಕಂಪನಿಗಳಲ್ಲಿ ಕೂಡ ಅವಿಭಾಜ್ಯ ಅಂಗವಾಗಿ ಬಂದಿದ್ದ ಏಪ್ರಿಲ್ ಫೂಲ್ ಪ್ರ್ಯಾಂಕ್‌ಗಳು ಇದೇ ಮೊದಲ ಭಾರಿ ಮೈಕ್ರೋಸಾಫ್ಟ್ನಿಂದ ನಿಷೇಧವಾಗಿದೆ. ಸುಳ್ಳುಸುದ್ದಿಗಳ ರುದ್ರತಾಂಡವೇ ನಡೆಯುತ್ತಿರುವ ಈ ದಿನಗಳಲ್ಲಿ ಮೈಕ್ರೋಸಾಫ್ಟ್ ಇಟ್ಟಿರುವ ಹೆಜ್ಜೆ ಪ್ರಮುಖವಾಗಿದ್ದು, ಇತರೆ ಕಂಪೆನಿಗಳು ಕೂಡ ಇದನ್ನೇ ಅನುಸರಿಸಬೇಕು ಎಂಬ ಆಶಯ ವ್ಯಕ್ತವಾಗಿದೆ.

Best Mobiles in India

English summary
Microsoft's concerns seem legit based on the April Fools' Day pranks that have backfired on major companies in the past. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X