Subscribe to Gizbot

ಈ ಸ್ಮಾರ್ಟ್‌ಫೋನ್ ಬ್ಯಾಟರಿ ಮುಗಿಯುವುದೇ ಇಲ್ಲವಂತೆ: ಅಂತದೇನಿದೆ..?

Written By:

ಎಷ್ಟು ದುಡ್ಡು ಕೊಟ್ಟು ಚಂದದ ಸ್ಮಾರ್ಟ್‌ಫೋನ್ ಕೊಂಡರು ಬ್ಯಾಟರಿ ಬಾಳಿಕೆ ಬರುವುದೇ ಇಲ್ಲ ಎಂಬುದು ಹಲವರ ದೂರ. ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಅನೇಕ ಸಂಶೋಧನೆಗಳು ನಡೆಯುತ್ತಲೇ ಇದೆ. ಇದಕ್ಕೆ ಪರಿಹಾರ ಎಂಬಂತೆ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯೊಂದು ಇದೇ ಮೊದಲ ಬಾರಿಗೆ 10000mAh ಬ್ಯಾಟರಿಯನ್ನು ತನ್ನ ಸ್ಮಾರ್ಟ್‌ಫೋನಿಗೆ ಅಳವಡಿಸಿದೆ.

ಈ ಸ್ಮಾರ್ಟ್‌ಫೋನ್ ಬ್ಯಾಟರಿ ಮುಗಿಯುವುದೇ ಇಲ್ಲವಂತೆ..!!!!

ಚೀನಾ ಮೂಲದ Oukitel ಕಂಪನಿಯೂ ತನ್ನ ನೂತನ ಸ್ಮಾರ್ಟ್‌ಫೋನ್ K10000 ಪ್ರೋ ನಲ್ಲಿ 10000mAh ಬ್ಯಾಟರಿಯನ್ನು ಅಳವಡಿಸುವ ಸಾಹಸವನ್ನು ಮಾಡಿದೆ ಎನ್ನಲಾಗಿದೆ. ಇದು ವರೆಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿರುವ ಅತೀ ಹೆಚ್ಚಿನ ಬ್ಯಾಟರಿ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತೀ ದೊಡ್ಡ ಬ್ಯಾಟರಿ ಜೊತೆ ವೇಗದ ಚಾರ್ಜರ್:

ಅತೀ ದೊಡ್ಡ ಬ್ಯಾಟರಿ ಜೊತೆ ವೇಗದ ಚಾರ್ಜರ್:

ಪ್ರೋ ನಲ್ಲಿ 10000mAh ಬ್ಯಾಟರಿಯನ್ನು ಅಳವಡಿಸಿದ್ದು, ಇಷ್ಟು ದೊಡ್ಡ ಪ್ರಮಾಣದ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರಲಿದೆ ಅದಲ್ಲದೇ ಇದರಲ್ಲಿ ವೇಗದ ಚಾರ್ಜರ್ ಸಹ ಅಳವಡಿಸಲಾಗಿದೆ. ಕಾರಣ ದೊಡ್ಡ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಹೆಚ್ಚಿನ ಕಾಲ ಬೇಕಾಗುತ್ತದೆ. ಅದಕ್ಕಾಗಿ ಇದರಲ್ಲಿ 12V/2A ಫ್ಲಾಷ್ ಚಾರ್ಜರ್ ಅಳವಡಿಸಲಾಗಿದ್ದು, ಇದು ಕೇವಲ ಮೂರುಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗಲಿದೆ.

ಈ ಫೋನಿನ ವಿಶೇಷತೆಗಳು:

ಈ ಫೋನಿನ ವಿಶೇಷತೆಗಳು:

5.5 ಇಂಚಿನ ಡಿಸ್‌ಪ್ಲೇ ಈ ಫೋನಿನಲ್ಲಿದ್ದು, ಇದಕ್ಕೆ ಗೊರಿಲ್ಲಾ ಗ್ಲಾಸ್ ಸುರಕ್ಷೆಯೂ ಇದೆ. ಇದರೊಂದಿಗೆ 1.5GHz ಮೀಡಿಯಾ ಟೆಕ್ MT6750T ಆಕ್ಟಾ ಕೊರ್ ಪ್ರೋಸೆಸರ್, 3GB RAM ನೊಂದಿಗೆ 32 GB ಇಂಟರ್ನಲ್ ಮೆಮೊರಿ ಸಹ ಇದರಲ್ಲಿದೆ. ಅಲ್ಲದೇ ಈ ಪೋನ್ ಹತ್ತಿರ ಹತ್ತಿರ 300 ಗ್ರಾಂ ತೂಕವನ್ನು ಹೊಂದಿದೆ.

K10000S ಮುಂದುವರೆದ ಭಾಗ K10000 ಪ್ರೋ:

K10000S ಮುಂದುವರೆದ ಭಾಗ K10000 ಪ್ರೋ:

ಕಳೆದ ವರ್ಷ ಅಕ್ಟೋಬರ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ K10000S ಫೋನಿನ ಮುಂದುವರೆದ ಭಾಗ K10000 ಪ್ರೋ ಆಗಿದ್ದು, ಈ ಫೋನಿನ ಹೊರಭಾಗದಲ್ಲಿ ಫೈವರ್ ಕವರಿಂಗ್ ಮತ್ತು ಮೆಟಲ್ ಎಡ್ಜ್ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Chinese company Oukitel announced its smartphone K10000pro with a humongous battery capacity of 10000mAh. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot