Subscribe to Gizbot

ಸೋನಿ Xperia ಅಡ್ವಾನ್ಸ್ ವಾಟರ್ ಪ್ರೂಫ್ ಫೋನ್

Posted By: Varun
ಸೋನಿ Xperia ಅಡ್ವಾನ್ಸ್ ವಾಟರ್ ಪ್ರೂಫ್ ಫೋನ್
ಸೋನಿ ಕಂಪನಿ ಏನೇ ಉತ್ಪನ್ನವನ್ನು ಹೊರತಂದರೂ ಅದು ಸ್ಟೈಲಿಶ್ ಆಗಿರುತ್ತದೆ. ಇತ್ತೀಚಿಗೆ Xperia ಸರಣಿಯ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಅದು ಈಗ ವಾಟರ್ ಪ್ರೂಫ್ ಹಾಗು ಧೂಳು ನಿರೋಧಕ ಸ್ಮಾರ್ಟ್ ಫೋನ್ ಒಂದನ್ನು ಹೊರತರಲಿದೆ.

ಸೋನಿ Xperia ಅಡ್ವಾನ್ಸ್ ಹೆಸರಿನ ಇದುಈ ತಿಂಗಳು ಬಿಡುಗಡೆಯಾಗಲಿದ್ದು, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ ಹೊಂದಲಿದೆ.

ಇದರ ಫೀಚರುಗಳು ಈ ರೀತಿ ಇವೆ:

 • ಧೂಳು ನಿರೋಧಕ ಹಾಗು ತೇವ ನಿರೋಧಕ ಕೋಟಿಂಗ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

 • ST-Ericsson NovaThor U8500 ಪ್ರೋಸೆಸರ್

 • 512 MB ರಾಮ್

 • 3.5 ಇಂಚು ಗಾತ್ರದ ಮಲ್ಟಿ ಟಚ್ ಸ್ಕ್ರೀನ್

 • 320 X 480 ಪಿಕ್ಸೆಲ್ ರೆಸಲ್ಯೂಶನ್

 • 5 ಮೆಗಾ ಪಿಕ್ಸೆಲ್ ಕ್ಯಾಮರಾ, 2592 x 1944 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ

 • USB, ಬ್ಲೂಟೂತ್,ವೈಫೈ,GPRS, EDGE ಹಾಗು HSDPA

 • RDS ಎಫ್ಎಂ ರೇಡಿಯೋ

 • ಸ್ಟೀರಿಯೋ ಮೈಕ್ರೋಫೋನ್,ಲೌಡ್ ಸ್ಪೀಕರ್

 • 3.5 mm ಆಡಿಯೋ ಜ್ಯಾಕ್

 • ಆಕ್ಸಿಲೆರೋಮೀಟರ್ ಹಾಗು ಡಿಜಿಟಲ್ ಕಂಪಾಸ್

 • 1305 mAh ಬ್ಯಾಟರಿ
 

ಈ ಸ್ಮಾರ್ಟ್ ಫೋನ್ ಈ ತಿಂಗಳು ಬಿಡುಗಡೆಯಾಗಲಿದ್ದು, ಬೆಲೆಯನ್ನು ಸೋನಿ ನಿಗದಿಪಡಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot