ಝೋಲೋ ಬಿಡುಗಡೆ ಮಾಡಲಿದೆ 4ಜಿ ಸ್ಮಾರ್ಟ್‌ಫೋನ್

Posted By:

ದೇಶೀಯ ಸ್ಮಾರ್ಟ್‌‌ಫೋನ್‌ ಕಂಪೆನಿ ಝೋಲೋ 4ಜಿ ಗ್ರಾಹಕರಿಗಾಗಿ ತನ್ನ ಎಲ್‌ಟಿಇ ಕನೆಕ್ಟಿವಿಟಿ ವಿಶೇಷತೆ ಇರುವ ಪ್ರಥಮ ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಎಲ್‌ಟಿ 900 ಹೆಸರಿನ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗಲಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬಗ್ಗೆ ಮಾಹಿತಿ ಪ್ರಕಟಗೊಂಡಿದೆ.

ಭಾರತದಲ್ಲಿ 3ಜಿ ಸಂಪರ್ಕ ಕ್ರಾಂತಿ ಈಗಾಗಲೇ ಆರಂಭಗೊಂಡಿದ್ದು 4ಜಿ ಕ್ರಾಂತಿ ಈಗಷ್ಟೇ ಕೆಲವು ನಗರಗಳಲ್ಲಿ ಆರಂಭಗೊಂಡಿದೆ.ಆ ನಗರಗಳ ಜನರು 4ಜಿ ಸಿಮ್‌‌‌ ಖರೀದಿಸಿದ್ದಲ್ಲಿ ಈ ಸ್ಮಾರ್ಟ್‌ಫೋನ್‌ ಬಳಸಬಹುದಾಗಿದೆ.ಸಿಂಗಲ್‌ ಸಿಮ್‌ ಹಾಕಬಹುದಾದ 4ಜಿ,3ಜಿ,ವೈಫೈ, ಬ್ಲೂಟೂತ್‌ ಕನೆಕ್ಟಿವಿಟಿ ಇರುವ ಸ್ಮಾರ್ಟ್‌ಫೋನಿನ ಬೆಲೆ ಬಗ್ಗೆ ಮಾಹಿತಿ ಪ್ರಕಟಗೊಂಡಿಲ್ಲ. ಸ್ಮಾರ್ಟ್‌ಫೋನ್ ಗೈರೋಸ್ಕೋಪ್‌,ಮ್ಯಾಗ್ನಟೊಮೀಟರ್‌,ಎಕ್ಸಲರೋ ಮೀಟರ್‌,ಲೈಟ್‌ ಸೆನ್ಸರ್‌‌,ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಝೋಲೋ ಬಿಡುಗಡೆ ಮಾಡಲಿದೆ 4ಜಿ ಸ್ಮಾರ್ಟ್‌ಫೋನ್


ಝೋಲೋ ಎಲ್‌ ಟಿ900
ವಿಶೇಷತೆ:
ಸಿಂಗಲ್‌ ಸಿಮ್‌
4.3 ಇಂಚಿನ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್
1.5 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‍
1ಜಿಬಿ ರ್‍ಯಾಮ್‌
8 ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1810 mAh ಬ್ಯಾಟರಿ

ಇದನ್ನೂ ಓದಿ: ಸೆಲೆಬ್ರಿಟಿಗಳ ಖಾತೆಯನ್ನು ಸುಲಭವಾಗಿ ಪತ್ತೆ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot