ಅಮೆಜಾನ್ ಸೇಲ್‌ನಲ್ಲಿ 2,000 ರೂ, ಒಳಗೆ ನೀವು ಖರೀದಿಸಬಹುದಾದ ಪವರ್ ಬ್ಯಾಂಕುಗಳು!

|

ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಶಾಲವಾಗಿ ಬೆಳೆಯುತ್ತಿದೆಯೋ ಹಾಗೇಯೆ ಸ್ಮಾರ್ಟ್‌ಫೋನ್ ಆಕ್ಸ್‌ಸರಿಸ್ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಇನ್ನು ಸ್ಮಾರ್ಟ್‌ಫೋನ್‌ಗಳ ವಿದ್ಯುತ್‌ ದಾಹವನ್ನು ನೀಗಿಸುವುದಕ್ಕಾಗಿಯೇ ಮಾರುಕಟ್ಟೆಯ್ಲಿ ನಾನಾ ಮಾದರಿಯ ಪವರ್‌ಬ್ಯಾಂಕ್‌ಗಳು ಲಗ್ಗೆ ಹಾಕಿವೆ. ನೀವು ಎಲ್ಲಿಯಾದರೂ ಹೊರಗಡೆ ಹೋದಾಗ ಸ್ಮಾರ್ಟ್‌ಫೋನ್‌ ಬ್ಯಾಟರಿ ಮುಗಿದು ಹೋಗುತ್ತಿದ್ದರೆ ಪವರ್‌ ಬ್ಯಾಂಕ್‌ ಮೂಲಕ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಸದ್ಯ ನೀವು ರಿಯಾಯಿತಿ ದರದಲ್ಲಿ ಅತ್ಯುತ್ತಮ ಪವರ್ ಬ್ಯಾಂಕ್ ಖರೀದಿಸಲು ಕಾಯುತ್ತಿದ್ದರೆ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಹಲವು ಆಯ್ಕೆಗಳನ್ನು ನೋಡಬಹುದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ನೀವು ಅತ್ಯುತ್ತಮ ಎನಿಸುವ ಪವರ್‌ಬ್ಯಾಂಕ್‌ಗಳನ್ನ ಖರೀದಿಸಬಹುದಾಗಿದೆ. ಅದರಲ್ಲೂ ಶಿಯೋಮಿ, ಆಂಬ್ರೇನ್, ಸಿಸ್ಕಾ, ಸ್ಯಾಮ್‌ಸಂಗ್ ಸಂಸ್ಥೆಯ ಪವರ್‌ಬ್ಯಾಂಕ್‌ಗಳು ರಿಯಾಯಿತಿ ದರದಲ್ಲಿ ಲಬ್ಯವಾಗುತ್ತಿವೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಅತ್ಯುತ್ತಮ ಪವರ್‌ಬ್ಯಾಂಕ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ಪವರ್ ಬ್ಯಾಂಕ್ 3i

ಮಿ ಪವರ್ ಬ್ಯಾಂಕ್ 3i

ಮಿ ಪವರ್‌ ಬ್ಯಾಂಕ್‌ 3i 20,000 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದರ ಮೂಲ ಬೆಲೆ 2,199 ರೂ ಆಗಿದ್ದು, ಅಮೆಜಾನ್‌ ಸೇಲ್‌ನಲ್ಲಿ 1,399 ರೂಗಳಿಗೆ ಮಾರಾಟವಾಗುತ್ತಿದೆ. ಅಂದರೆ 800 ರೂ.ಗಳ ರಿಯಾಯಿತಿಯನ್ನು ಇಲ್ಲಿ ನೀವು ಪಡೆಯಬಹುದಾಗಿದೆ. ಈ ಪವರ್‌ ಬ್ಯಾಂಕ್‌ 18W ಫಾಸ್ಟ್ ಚಾರ್ಜಿಂಗ್ ಮತ್ತು ಟ್ರಿಪಲ್ ಪೋರ್ಟ್ ಔಟ್‌ಪುಟ್‌ ಅನ್ನು ಹೊಂದಿದೆ.

ಆಂಬ್ರೇನ್ 20,000mAh ಪವರ್‌ ಬ್ಯಾಂಕ್‌

ಆಂಬ್ರೇನ್ 20,000mAh ಪವರ್‌ ಬ್ಯಾಂಕ್‌

ಆಂಬ್ರೇನ್‌ ಕಂಪೆನಿಯ 20,000mAh ಬ್ಯಾಟರಿ ಸಾಮರ್ಥ್ಯದ ಪವರ್‌ ಬ್ಯಾಂಕ್‌ 2,469 ರೂ ಮೂಲಬೆಲೆಯನ್ನು ಹೊಂದಿದೆ. ಇದು ಅಮೆಜಾನ್‌ ಸೇಲ್‌ನಲ್ಲಿ ಕೇವಲ 799 ರೂ.ಗೆ ಖರೀದಿಸಬಹುದಾಗಿದ್ದು, 1,670 ರೂ.ಗಳ ರಿಯಾಯಿತಿಯನ್ನ ಪಡೆದುಕೊಂಡಿದೆ.

ಲ್ಯಾಪ್‌ಗಾರ್ಡ್ 20,000mAh ಪವರ್ ಬ್ಯಾಂಕ್

ಲ್ಯಾಪ್‌ಗಾರ್ಡ್ 20,000mAh ಪವರ್ ಬ್ಯಾಂಕ್

4,500 ರೂ ಮೂಲ ಬೆಲೆ ಹೊಂದಿರುವ ಲ್ಯಾಪ್‌ಗಾರ್ಡ್ 20,000mAh ಪವರ್‌ ಬ್ಯಾಂಕ್‌ ಅಮೆಜಾನ್‌ ಸೇಲ್‌ನಲ್ಲಿ ಕೇವಲ 799 ರೂ.ಗಳಲ್ಲಿ ಲಭ್ಯವಾಗಲಿದೆ. ಗ್ರಾಹಕರಿಗೆ ಬರೋಬ್ಬರಿ 3701 ರೂ.ಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ.ಇನ್ನು ಈ ಪವರ್ ಬ್ಯಾಂಕ್ ಮೂರು ಯುಎಸ್‌ಬಿ ಮಾದರಿಯ ಔಟ್‌ಪುಟ್ ಪೋರ್ಟ್‌ ಅನ್ನು ಹೊಂದಿದ್ದು, ಫ್ಲ್ಯಾಷ್‌ಲೈಟ್ ಅನ್ನು ಹೊಂದಿದೆ.

ಸಿಸ್ಕಾ 20000 mAh ಬ್ಯಾಟರಿ ಪವರ್ ಬ್ಯಾಂಕ್

ಸಿಸ್ಕಾ 20000 mAh ಬ್ಯಾಟರಿ ಪವರ್ ಬ್ಯಾಂಕ್

ಸಿಸ್ಕಾ 20000 mAh ಬ್ಯಾಟರಿ ಸಾಮರ್ಥ್ಯದ ಈ ಪವರ್ ಬ್ಯಾಂಕ್ ಒಂದೇ ಚಾರ್ಜ್‌ನಲ್ಲಿ 4000mAh ಫೋನ್ ಬ್ಯಾಟರಿಯನ್ನು ಮೂರು ಬಾರಿ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಪವರ್‌ ಬ್ಯಾಂಕ್‌ ಮೂಲಬೆಲೆ 1,999 ರೂ ಆಗಿದ್ದು, 1,100 ರೂ ರಿಯಾಯಿತಿ ನಂತರ ಕೇವಲ 899 ರೂಗಳಿಗೆ ಖರೀದಿಸಬಹುದಾಗಿದೆ.

ಪೆಬ್ಬಲ್ 20000mAh ಪವರ್ ಬ್ಯಾಂಕ್

ಪೆಬ್ಬಲ್ 20000mAh ಪವರ್ ಬ್ಯಾಂಕ್

ಪೆಬ್ಬಲ್ 20000mAh ಪವರ್ ಬ್ಯಾಂಕ್ 2,499 ರೂ ಮೂಲ ಬೆಲೆಯನ್ನು ಹೊಂದಿದ್ದು, ರಿಯಾಯಿತಿ ದರದಲ್ಲಿ 1,199 ರೂಗಳಲ್ಲಿ ಲಭ್ಯವಿದೆ. ಇನ್ನು ಈ ಪವರ್‌ ಬ್ಯಾಂಕ್‌ ಇಂಟರ್‌ ಬಿಲ್ಟ್‌ 3-ಇನ್ -1 ಟೈಪ್-ಸಿ, ಮೈಕ್ರೋ ಯುಎಸ್‌ಬಿ ಯನ್ನು ಹೊಂದಿದೆ.ಜೊತೆಗೆ ಇದು 12W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

Most Read Articles
Best Mobiles in India

Read more about:
English summary
If you have been waiting to buy a power bank, you can look for options in the Amazon Great Indian Festival sale. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X