ಅಸೂಸ್ ಜೆನ್‌ಪೋನ್ 2 ಭಾರತಕ್ಕೆ ಶೀಘ್ರದಲ್ಲಿ
ಕಳೆದ ತಿಂಗಳು ಸಿಇಎಸ್ 2015 ರಲ್ಲಿ ಲಾಂಚ್ ಆದ ಅಸೂಸ್ ಜೆನ್‌ಪೋನ್ 2, ಈ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಮಳಿಗೆಗಳನ್ನು ಪ್ರವೇಶಿಸಲಿದೆ ಎಂದು ವರದಿ ತಿಳಿಸಿದೆ. ಇದೇ ಸಂದರ್ಭದಲ್ಲಿ ಅಸೂಸ್ ಜೆನ್‌ಪೋನ್ ಜೂಮ್, ಜೆನ್‌ಬುಕ್ ಸಿರೀಸ್ ಮತ್ತು ಜೆನ್‌ಫೋನ್ ವಾಚ್‌ಗಳನ್ನು ಕೂಡ ಕಂಪೆನಿ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಬ್ಯುಸಿನೆಸ್ ಟುಡೇ ವರದಿಯ ಪ್ರಕಾರ, ಭಾರತದ ಕಂಪೆನಿ ಮುಖ್ಯಸ್ಥ ಪೀಟರ್ ಚಾಂಗ್ ಹೇಳುವಂತೆ ಸಿಇಎಸ್ 2015 ರಲ್ಲಿ ಲಾಂಚ್ ಆಗಿರುವ ಎಲ್ಲಾ ಅಸೂಸ್ ಉತ್ಪನ್ನಗಳು 2015 ರ ಎರಡನೇ ತ್ರೈಮಾಸಿಕದಲ್ಲಿ ಲಭ್ಯವಾಗುವುದೆಂದು ತಿಳಿಸಿದ್ದಾರೆ. ಜೆನ್‌ಪೋನ್ 2 ಸ್ಮಾರ್ಟ್‌ಫೋನ್‌ನೊಂದಿಗೆ ಲಾಂಚ್ ಆದ ಅಸೂಸ್ ಜೆನ್‌ಫೋನ್ ಜೂಮ್ ಭಾರತದಲ್ಲಿ ಜೆನ್‌ಫೋನ್ 2 ನ ಲಾಂಚ್ ನಂತರ ಬಿಡುಗಡೆಯಾಗಲಿದೆ ಎಂದು ಚಾಂಗ್ ತಿಳಿಸಿದ್ದಾರೆ. ಇನ್ನು ನಿಖರ ದಿನಾಂಕ ತಿಳಿದು ಬಂದಿಲ್ಲ.
ಎರಡನೇ ತ್ರೈಮಾಸಿಕ ಅವಧಿಯಲ್ಲಿ ಜೆನ್‌ಬುಕ್ ಟಿ ಸಿರೀಸ್ ಮತ್ತು ಲ್ಯಾಪ್‌ಟಾಪ್‌ಗಳು ಬಿಡುಗಡೆಯಾಗಲಿದ್ದು ಜೆನ್‌ವಾಚ್ 2015 ರ ಪ್ರಥಮ ತ್ರೈಮಾಸಿಕದಲ್ಲಿ ಭಾರತಕ್ಕೆ ಕಾಲಿರಿಸಲಿದೆ. ಕಂಪೆನಿಯ ಸ್ಮಾರ್ಟ್‌ಪೋನ್ ಮತ್ತು ನೋಟ್‌ಬುಕ್ ಲಾಂಚ್‌ಗಳ ನಂತರ ಇದು ಆಗಮಿಸಬಹುದು.


Click it and Unblock the Notifications








