ಬೆಂಗಳೂರಿನ ಸೈಬರ್ ಠಾಣೆಯಲ್ಲಿ 32 ಕೋಟಿ ರೂ.ವಂಚನೆ ದೂರು ದಾಖಲು!!

|

ಬೆಂಗಳೂರಿನ ಸೈಬರ್ ಠಾಣೆಯಲ್ಲಿ ದಿನವೊಂದಕ್ಕೆ ಸರಾಸರಿ 25 ಸೈಬರ್ ಪ್ರಕರಣಗಳು ದಾಖಲಾಗುತ್ತಿದ್ದು, ಕಳೆದ ನಾಲ್ಕು ತಿಂಗಳಿನಲ್ಲಿ ಬರೋಬ್ಬರಿ 32 ಕೋಟಿ ರೂ. ದೋಚಿರುವ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಸೈಬರ್ ಠಾಣೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಖದೀಮರ ಸರಳ ಟ್ರಿಕ್ಸ್ಗಳಿಗೆ ಮೂಲಕ ಜನರು ಮರುಳಾಗಿ ತಮ್ಮೆಲ್ಲಾ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಯೋರ್ವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹೌದು, ಎಷ್ಟೇ ಜಾಗೃತಿ ಮೂಡಿಸಿದರೂ ಮೋಸ ಹೋಗುವವರ ಸಂಖ್ಯೆ ಮಾತ್ರ ಕಮ್ಮಿ ಆಗುತ್ತಿಲ್ಲ. ಆನ್‌ಲೈನ್ ಖದೀಮರು ಬಳಸುವ ಅತ್ಯಂತ ಸರಳ ತಂತ್ರಗಳಿಗೆ ಮರುಳಾಗಿ ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳ ವರೆಗೂ ಹಣ ಕಳೆದುಕೊಳ್ಳುವವರ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಇ-ಮೇಲ್‌ ಐಡಿ, ಮೊಬೈಲ್‌ ನಂಬರ್‌ಗಳಿಗೆ ಸಾಮೂಹಿಕವಾಗಿ ಮೆಸೇಜ್‌ ಕಳುಹಿಸುವ ವಂಚಕರ ಜಾಲಕ್ಕೆ ಹೆಚ್ಚು ಜನ ಬಲಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಸೈಬರ್ ಠಾಣೆಯಲ್ಲಿ 32 ಕೋಟಿ ರೂ.ವಂಚನೆ ದೂರು ದಾಖಲು!!

ಇ-ಮೇಲ್‌ ಐಡಿ, ಮೊಬೈಲ್‌ ನಂಬರ್‌ಗಳಿಗೆ ಸಾಮೂಹಿಕವಾಗಿ ಮೆಸೇಜ್‌ ಕಳುಹಿಸುವ ಖದೀಮರಿಂದಲೇ ಹೆಚ್ಚು ಜನರು ಮೋಸಹೋಗಿದ್ದಾರೆ. ಅವರು ಕೊಟ್ಟಿರುವ ಇ-ಮೇಲ್‌ ಐಡಿ ಅಥವಾ ಫೋನ್‌ ನಂಬರ್‌ಗೆ ಸಂಪರ್ಕಿಸಿದರೆ ಲಾಟರಿ ಗೆದ್ದಿರುವುದಾಗಿ ಹೇಳಿ ವಂಚಿಸಿರುವ ಘಟನೆಗಳು ಹೆಚ್ಚಿವೆ. ಹಾಗಾಗಿ, ಈ ಬಗ್ಗೆ ಜನರು ಹೆಚ್ಚು ಜಾಗೃತರಾಗಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಹಾಗಾದರೆ, ಸೈಬರ್ ಮತ್ತು ವಂಚನೆ ಪ್ರಕರಣಗಳಿಂದ ಪಾರಾಗುವುದು ಹೇಗೆ?, ವಂಚನೆ ನಡೆಸುತ್ತಿರುವವರು ಯಾರು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಿದೇಶಿ ವಂಚಕರೇ ಹೆಚ್ಚು!

ವಿದೇಶಿ ವಂಚಕರೇ ಹೆಚ್ಚು!

ಇಲ್ಲಿನ ನಾಗರಿಕರನ್ನು ಟಾರ್ಗೆಟ್‌ ಮಾಡುವ ಬಹುತೇಕ ವಂಚಕರು ಬೇರೆ ರಾಜ್ಯಗಳಲ್ಲಿ ಇರುತ್ತಾರೆ. ಇವರಲ್ಲಿ ಸಾವಿರಾರು ವಂಚನೆ ಪ್ರಕರಣಗಳು ಹೆಚ್ಚಿವೆ. ಆದರೆ, ಲಕ್ಷಾಂತರ ರೂ.ಯಿಂದ ಕೋಟ್ಯಂತರ ರೂ.ವರೆಗಿನ ಹಣಕ್ಕೆ ಕನ್ನ ಹಾಕುವವರ ಪೈಕಿ ಬಹುತೇಕರು ನೈಜೀರಿಯಾ ಸೇರಿದಂತೆ ಇತರೆ ವಿದೇಶಿ ವಂಚಕರೇ ಆಗಿರುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ವಂಚನೆ ಟ್ರಿಕ್ಸ್

ಇತ್ತೀಚಿನ ವಂಚನೆ ಟ್ರಿಕ್ಸ್

ವಂಚಕರು ಬಳಸುವ ಟ್ರಿಕ್ಸ್‌ಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಇತ್ತೀಚಿಗೆ ಬ್ಯಾಂಕ್‌ ಖಾತೆಗೆ ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಜೋಡಣೆ ಮಾಡಬೇಕು ಎಂದು ಸಹ ವಂಚಿಸಿರುವ ಘಟನೆಗಳು ನಡೆದಿವೆ.ವಧು-ವರರ ಜಾಲತಾಣಗಳು, ಫೇಸ್‌ಬುಕ್‌ ಸೇರಿದಂತೆ ಇತರ ಜಾಲತಾಣಗಳಲ್ಲಿ ಸ್ನೇಹ ಸಂಪಾದಿಸಿ ಉಡುಗೊರೆ ಕಳುಹಿಸುವ ನೆಪದಲ್ಲೂ ಸಹ ವಂಚನೆ ನಡೆಯುತ್ತಿವೆ.

ತಕ್ಷಣ ದೂರು ನೀಡಿದರೆ ಹಣ ವಾಪಸ್!

ತಕ್ಷಣ ದೂರು ನೀಡಿದರೆ ಹಣ ವಾಪಸ್!

ನಗರದ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಒಟ್ಟು 3,100 ಪ್ರಕರಣಗಳಲ್ಲಿ ಹಣ ಕಳೆದುಕೊಂಡಿರುವವರ ಪೈಕಿ ಶೇ.30ರಿಂದ 40ರಷ್ಟು ಜನರಿಗೆ ಹಣವಾಪಸ್ ಸಿಕ್ಕಿದೆ. ಮೋಸ ಹೋದವರು ತಕ್ಷಣ ದೂರು ನೀಡಿದರೆ ಹಣ ವಾಪಸ್ ಸಿಗುವ ಚಾನ್ಸ್ ಹೆಚ್ಚಿರುತ್ತದೆ. ಏಕೆಂದರೆ, ಹಣ ವರ್ಗಾವಣೆಯಾದ ಮತ್ತೊಂದು ಖಾತೆಯನ್ನು ಪೊಲೀಸರು ಆ ಕ್ಷಣದಲ್ಲೇ ಫ್ರೀಜ್ ಮಾಡಿಸುತ್ತಾರೆ.

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ

ನಿಮ್ಮ ಮೊಬೈಲ್ ನಂಬರ್‌ಗೆ ಗಿಫ್ಟ್ ಬಂದಿದೆ. ನಿಮಗೆ ಫಾರಿನ್ ಟ್ರಿಪ್ ಟಿಕೆಟ್ ಉಚಿತವಾಗಿ ಸಿಕ್ಕಿದೆ. ಉತ್ತಮ ಕೆಲಸ ಕೊಡಿಸುತ್ತೇನೆ ಎಂದು ಫೋನ್ ಅಥವಾ ಇಮೇಲ್‌ಗಳ ಮೂಲಕ ಸಂಪರ್ಕಿಸುವವರ ಬಗ್ಗೆ ಎಚ್ಚರವಾಗಿ. ಅವರೆಲ್ಲರೂ ನಿಮ್ಮ ಬಳಿ ಹಣವನ್ನು ದೂಚುವ ಸಲುವಾಗಿಯೇ ನಾಟಕ ಮಾಡುತ್ತಿರುತ್ತಾರೆ. ಇಂತಹ ಮೇಲ್‌ಗಳಿಗೆ ತಲೆಕೆಡಿಸಿಕೊಳ್ಳಲೇಬೇಡಿ.

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಳಾಗಿದ್ದು ಅವುಗಳನ್ನು ಬಹಲಿಸಬೇಕಿದೆ ಅಥವಾ ನಿಮ್ಮ ಕಾರ್ಡ್ ಸೆಕ್ಯುರಿಟಿ ಚೆಕ್ ಮಾಡಬೆಕಿದೆ ಎನ್ನುವ ಕಾಲ್‌ಗಳನ್ನು ಸೈಬರ್ ಕ್ರಿಮಿನಲ್‌ಗಳು ಮಾಡಿರುತ್ತಾರೆ. ಅಂತವರಿಗೆ ನಿಮ್ಮ ಯಾವುದೇ ಡೀಟೆಲ್ಸ್ ಅನ್ನು ನಿಡಬೇಡಿ. ಯಾವುದೇ ಬ್ಯಾಂಕ್‌ನಲ್ಲಿಯೂ ಸಹ ಫೋನ್ ಮೂಲಕ ವ್ಯವಹರಿಸುವುದಿಲ್ಲ ಎಂಬುದನ್ನು ನೀವು ತಿಳಿದಿರಿ.

ಪಿನ್‌ ಮತ್ತು ಒಟಿಪಿಯನ್ನು ನೀಡಲೇಬೇಡಿ!

ಪಿನ್‌ ಮತ್ತು ಒಟಿಪಿಯನ್ನು ನೀಡಲೇಬೇಡಿ!

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಅಥವಾ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಯಾರಿಗೂ ನಿಮ್ಮ ಪಿನ್ ಮತ್ತು ಒಟಿಪಿಯನ್ನು ನೀಡಲೇಬೇಡಿ. ಸೈಬರ್‌ಗಳಿಗೆ ನಿಮ್ಮ ಪಿನ್ ಸಂಖ್ಯೆ ಅಥವಾ ಒಟಿಪಿ ಸಂಖ್ಯೆ ಸಿಕ್ಕರೆ ಸಾಕು ನಿಮ್ಮ ಹಣಕ್ಕೆ ಪಂಗನಾಮ ಹಾಕುತ್ತಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಒಟಿಪಿ ಸಂಖ್ಯೆ ನಿಮ್ಮನ್ನು ಬಿಟ್ಟು ಅನ್ಯರಿಗೆ ತಿಳಿಯಲೇಬಾರದು.

ಗೂಗಲ್ ಅನ್ನು ಸಹ ನಂಬಬೇಡಿ!

ಗೂಗಲ್ ಅನ್ನು ಸಹ ನಂಬಬೇಡಿ!

ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಸಿಗುವ ಎಲ್ಲಾ ವಿಷಯಗಳು ಸಹ ನಿಜ ಎಂದು ನಂಬಬೇಡಿ. ಗೂಗಲ್‌ನಲ್ಲಿ ಖಾಸಾಗಿ ಜನರು ಸಹ ಮಾಹಿತಿಯನ್ನು ಎಡಿಟ್ ಮಾಡುವ ಆಯ್ಕೆ ಇದೆ. ಕೆಲವು ವೆಬ್‌ಸೈಟ್‌ಗಳು ನಂಬಿಕೆ ಬರುವಂತಹ ಬರಗಳಿಂದ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತವೆ. ಹೀಗೆ ಮಾಡಿ ನಿಮ್ಮಿಂದ ಖಾಸಾಗಿ ಮಾಹಿತಿಯನ್ನು ಸಂಗ್ರಹಿಸುತ್ತವೆ ಎಂಬುದು ಗೊತ್ತಿರಲಿ.

ಪಾಸ್‌ವರ್ಡ್ ಬದಲಿಸುತ್ತಿರಿ.

ಪಾಸ್‌ವರ್ಡ್ ಬದಲಿಸುತ್ತಿರಿ.

ಬ್ಯಾಂಕಿಂಗ್ ಮತ್ತು ಆನ್‌ಲೈನ್ ಪ್ರಪಂಚದಲ್ಲಿ ಈಗ ಸುರಕ್ಷಿತ ಪಾಸ್‌ವರ್ಡ್‌ಗಳೇ ಮುಖ್ಯ. ಹಾಗಾಗಿ, ಯಾವಾಗಲೂ ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗೆ ನೀಡಿರುವ ಪಿನ್ ಸಂಖ್ಯೆಯನ್ನು ಬದಲಿಸುತ್ತಿರಿ. ಹೀಗೆ ಮಾಡುವುದರಿಂದ ಸೈಬರ್ ಕಳ್ಳರಿಗೆ ನಿಮ್ಮ ಪಾಸ್‌ವರ್ಡ್ ಕದಿಯಲು ಸುಲಭ ಸಾಧ್ಯವಾಗುವುದಿಲ್ಲ ಎಂಬುದನ್ನು ತಿಳಿದಿರಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ನೀವು ಹೆಚ್ಚು ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚು ಮಾಡುತ್ತಿದ್ದರೆ ಅವುಗಳ ಸೆಕ್ಯುರಿಟಿ ಬಗ್ಗೆ ಎಚ್ಚರವಾಗಿರಿ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಉತ್ತಮ ಗುಣಮಟ್ಟದ ಆಂಟಿವೈರೆಸ್ ಸಾಫ್ಟ್‌ವೇರ್ ಬಳಸಿದರೆ ಒಳ್ಳೆಯದು. ಇದರಿಂದ ಸೈಬರ್ ಫೈಲ್‌ಗಳು ನಿಮ್ಮ ಡಿವೈಸ್ ಅನ್ನು ಕ್ರಾಕ್ ಮಾಡಲು ಸಾಧ್ಯವಿಲ್ಲ.

Best Mobiles in India

English summary
Cybercrimes In Bangalore On The Rise. The cybercrime has become enormously pervasive and global because the Internethas no precincts. Malicious software, computer viruses are helping. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X