ಬೆಂಗಳೂರು ಮೂಲದ 'Dunzo'ನಲ್ಲಿ 200 ಮಿಲಿಯನ್ ಡಾಲರ್ ಹೂಡಿದ ರಿಲಯನ್ಸ್ ರಿಟೇಲ್!

|

ಭಾರತದ ಪ್ರಮುಖ ತ್ವರಿತ ವಾಣಿಜ್ಯ ಸಂಸ್ಥೆ Dunzo (ಡಂಜೊ)ತನ್ನ ಇತ್ತೀಚಿನ ನಿಧಿ ಸಂಗ್ರಹ ಕಾರ್ಯದಲ್ಲಿ ಯುಎಸ್ ಡಾಲರ್ 240 ಮಿಲಿಯನ್ ಅನ್ನು ಸಂಗ್ರಹಿಸಿದೆ. ಅಸ್ತಿತ್ವದಲ್ಲಿರುವ ಹೂಡಿಕೆದಾರರಾದ ಲೈಟ್‌ಬಾಕ್ಸ್, ಲೈಟ್‌ಟ್ರಾಕ್, 3L ಕ್ಯಾಪಿಟಲ್ ಮತ್ತು ಆಲ್ಟೇರಿಯಾ ಕ್ಯಾಪಿಟಲ್‌ಗಳ ಭಾಗವಹಿಸುವಿಕೆಯೊಂದಿಗೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ("ರಿಲಯನ್ಸ್ ರಿಟೇಲ್") ಈ ಹೂಡಿಕೆಯನ್ನು ಮುನ್ನಡೆಸಿದೆ. ಯುಎಸ್ ಡಾಲರ್ 200 ಮಿಲಿಯನ್ ಹೂಡಿಕೆಯೊಂದಿಗೆ, ರಿಲಯನ್ಸ್ ರಿಟೇಲ್ 25.8% ಪಾಲನ್ನು ಹೊಂದಿರುತ್ತದೆ. ಈ ರೌಂಡ್ ನಲ್ಲಿ Dunzo ಅವರ ಸಾಮರ್ಥ್ಯ ಮತ್ತು ಅಸಾಧಾರಣ ಬಳಕೆದಾರ ಅನುಭವವನ್ನು ಸೃಷ್ಟಿಸುವಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊಸ ಹೂಡಿಕೆದಾರರ ವಿಶ್ವಾಸದ ಮರುಸ್ಥಾಪನೆ ಮಾಡಲಿದೆ.

ಬೆಂಗಳೂರು ಮೂಲದ 'Dunzo'ನಲ್ಲಿ 200 ಮಿಲಿಯನ್ ಡಾಲರ್ ಹೂಡಿದ ರಿಲಯನ್ಸ್ ರಿಟೇಲ್!

ಭಾರತೀಯ ನಗರಗಳ ಸ್ಥಳೀಯ ವ್ಯಾಪಾರಿಗಳಿಗೆ ಲಾಜಿಸ್ಟಿಕ್ಸ್ ಅನ್ನು ಸಕ್ರಿಯಗೊಳಿಸಲು ಅದರ B2B ವ್ಯಾಪಾರವನ್ನು ಲಂಬವಾಗಿ ವಿಸ್ತರಿಸುವುದರ ಜೊತೆಗೆ ಮೈಕ್ರೋ ವೇರ್‌ಹೌಸ್‌ಗಳ ಜಾಲದಿಂದ ಅಗತ್ಯ ವಸ್ತುಗಳ ತ್ವರಿತ ವಿತರಣೆಯನ್ನು ಸಕ್ರಿಯಗೊಳಿಸುವ ಗುರಿ ಹೊಂದಿದೆ. ಈ ಮೂಲಕ, ದೇಶದಲ್ಲಿ ಅತಿ ದೊಡ್ಡ ತ್ವರಿತ ವಾಣಿಜ್ಯ ವ್ಯವಹಾರವಾಗಿ Dunzo ದೂರದೃಷ್ಟಿಯನ್ನು ಮತ್ತಷ್ಟು ಹೆಚ್ಚಿಸಲು ಈ ಬಂಡವಾಳವನ್ನು ಬಳಸಲಾಗುತ್ತದೆ.

ಬೆಂಗಳೂರು ಮೂಲದ 'Dunzo'ನಲ್ಲಿ 200 ಮಿಲಿಯನ್ ಡಾಲರ್ ಹೂಡಿದ ರಿಲಯನ್ಸ್ ರಿಟೇಲ್!

Dunzo ಭಾರತದಲ್ಲಿ ತ್ವರಿತ ವಾಣಿಜ್ಯ ವಿಭಾಗದ ಮಾರುಕಟ್ಟೆಯಲ್ಲಿ ನಾಯಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಇದು US$50+ ಬಿಲಿಯನ್‌ ಮೌಲ್ಯದ ಮಾರುಕಟ್ಟೆ ಅವಕಾಶಗಳನ್ನು ಹೊಂದಿದೆ. ಪ್ರಸ್ತುತ Dunzo ಭಾರತದಲ್ಲಿ 7 ಮೆಟ್ರೋ ನಗರಗಳಲ್ಲಿ ಲಭ್ಯವಿದೆ ಮತ್ತು ಹೆಚ್ಚುವರಿ ಬಂಡವಾಳವನ್ನು 15 ನಗರಗಳಿಗೆ ತ್ವರಿತ ವಾಣಿಜ್ಯ ವ್ಯವಹಾರವನ್ನು ವಿಸ್ತರಿಸಲು ಬಳಸಲು ನಿರ್ಧರಿಸಿದೆ. Dunzo ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ತನ್ನ ತ್ವರಿತ ವಿತರಣಾ ಮಾದರಿ 'ಡಂಜೊ ಡೈಲಿ' ಅನ್ನು ಪ್ರಾರಂಭಿಸಿದೆ, ಇದು ವಾರದಿಂದ ವಾರಕ್ಕೆ ಶೇಕಡ 20ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ. ಡಂಜೊ ಡೈಲಿ ಮಾದರಿಯು ದೈನಂದಿನ ಮತ್ತು ಸಾಪ್ತಾಹಿಕ ಅಗತ್ಯಗಳನ್ನು 15-20 ನಿಮಿಷಗಳಲ್ಲಿ ತಲುಪಿಸುತ್ತದೆ, ಉತ್ತಮ ಗುಣಮಟ್ಟದ ಹಣ್ಣುಗಳು ಮತ್ತು ತರಕಾರಿಗಳನ್ನು ಒದಗಿಸುವುದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತದೆ.

ಬೆಂಗಳೂರು ಮೂಲದ 'Dunzo'ನಲ್ಲಿ 200 ಮಿಲಿಯನ್ ಡಾಲರ್ ಹೂಡಿದ ರಿಲಯನ್ಸ್ ರಿಟೇಲ್!

ಈ ಮೊತ್ತದ ಜೊತೆಗೆ, ಡಂಜೊ ಮತ್ತು ರಿಲಯನ್ಸ್ ರಿಟೇಲ್ ಕೆಲವು ವ್ಯಾಪಾರ ಪಾಲುದಾರಿಕೆಗೂ ಕಾಲಿಟ್ಟಿದೆ. Dunzo ರಿಲಯನ್ಸ್ ರಿಟೇಲ್‌ನಿಂದ ನಿರ್ವಹಿಸಲ್ಪಡುವ ಚಿಲ್ಲರೆ ಅಂಗಡಿಗಳು ಹೈಪರ್‌ಲೋಕಲ್ ಲಾಜಿಸ್ಟಿಕ್ಸ್ ಅನ್ನು ಸಕ್ರಿಯಗೊಳಿಸುತ್ತದೆ, ರಿಲಯನ್ಸ್ ರೀಟೇಲ್‌ನ ಓಮ್ನಿ-ಚಾನೆಲ್ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. JioMart ನ ಮರ್ಚೆಂಟ್ ನೆಟ್‌ವರ್ಕ್‌ಗಾಗಿ ದೂರದ ಡೆಲಿವರಿಗಳನ್ನು ಕೂಡ Dunzo ಸುಗಮಗೊಳಿಸುತ್ತದೆ.

ಹೂಡಿಕೆಯ ಕುರಿತು ಮಾತನಾಡಿದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕಿ ಇಶಾ ಅಂಬಾನಿ, "ನಾವು ಆನ್‌ಲೈನ್‌ ಬಳಕೆಯ ಮಾದರಿಗಳಲ್ಲಿ ಬದಲಾವಣೆಯನ್ನು ನೋಡುತ್ತಿದ್ದೇವೆ ಮತ್ತು ಡಂಜೊ ತನ್ನ ಕಾರ್ಯಕ್ಷೇತ್ರದಲ್ಲಿ ವಿಸ್ತರಿಸಿರುವ ಪರಿಯನ್ನು ಕಂಡು ಹೆಚ್ಚು ಪ್ರಭಾವಿತರಾಗಿದ್ದೇವೆ. Dunzo ಭಾರತದಲ್ಲಿ ತ್ವರಿತ ವಾಣಿಜ್ಯದ ಪ್ರವರ್ತಕರಾಗಿದ್ದಾರೆ ಮತ್ತು ದೇಶದಲ್ಲಿ ಪ್ರಮುಖ ಸ್ಥಳೀಯ ವಾಣಿಜ್ಯ ವ್ಯವಹಾರಗಳನ್ನು ಸಕ್ರಿಯಗೊಳಿಸುವ ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸಲು ನಾವು ಅವರನ್ನು ಬೆಂಬಲಿಸಲು ಬಯಸುತ್ತೇವೆ.

Dunzo ಜೊತೆಗಿನ ನಮ್ಮ ಪಾಲುದಾರಿಕೆಯ ಮೂಲಕ, ನಾವು ರಿಲಯನ್ಸ್ ರೀಟೇಲ್‌ನ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸಲು ಮತ್ತು ರಿಲಯನ್ಸ್ ರೀಟೇಲ್ ಸ್ಟೋರ್‌ಗಳಿಂದ ಉತ್ಪನ್ನಗಳ ತ್ವರಿತ ವಿತರಣೆಯ ಮೂಲಕ ಗ್ರಾಹಕರಿಗೆ ವಿಭಿನ್ನ ಅನುಭವವನ್ನು ಒದಗಿಸಲು ಸಾಧ್ಯವಾಗುತ್ತದೆ. ನಮ್ಮ ವ್ಯಾಪಾರಿಗಳು ಜಿಯೋ ಮಾರ್ಟ್ ಮೂಲಕ ತಮ್ಮ ವ್ಯವಹಾರವನ್ನು ಆನ್‌ಲೈನ್‌ನಲ್ಲಿ ನಡೆಸುವಾಗ ಅವರ ಬೆಳವಣಿಗೆಯನ್ನು ಬೆಂಬಲಿಸಲು ಡಂಜೊದ ಹೈಪರ್‌ಲೋಕಲ್ ಡೆಲಿವರಿ ನೆಟ್‌ವರ್ಕ್‌ಗೆ ಪ್ರವೇಶವನ್ನು ಪಡೆಯುತ್ತಾರೆ" ಎಂದರು.

Best Mobiles in India

English summary
Dunzo raises US$240M in a round led by Reliance Retail: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X