ಫ್ಯೂಜಿಫಿಲ್ಮ್‌ ಸಂಸ್ಥೆಯಿಂದ ಸೆಲ್ಫಿ ಮೋಡ್ ಹೊಂದಿರುವ ಮಿನಿ ಕ್ಯಾಮೆರಾ ಬಿಡುಗಡೆ!

|

ಕ್ಯಾಮೆರಾ ಮಾರುಕಟ್ಟೆಯಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈಗಾಗಲೇ ಹಲವು ಮಾದರಿಯ ಕ್ಯಾಮೆರಾಗಳನ್ನು ಪರಿಚಯಿಸಿ ಕ್ಯಾಮೆರಾ ಪ್ರಿಯರ ಮನ ಗೆದ್ದಿದೆ. ಸದ್ಯ ಇದೀಗ ಭಾರತದಲ್ಲಿ ಫ್ಯೂಜಿಫಿಲ್ಮ್‌ ಇನ್ಸ್ಟಾಕ್ಸ್‌ ಮಿನಿ 40 ಕ್ಯಾಮೆರಾವನ್ನು ಲಾಂಚ್‌ ಮಾಡಿದೆ. ಇದು ಮಿನಿ ಪಿಕ್ಚರ್ ಫಾರ್ಮ್ಯಾಟ್ ಫಿಲ್ಮ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕಂಪನಿಯ ತ್ವರಿತ ಕ್ಯಾಮೆರಾಗಳ ಸರಣಿಗೆ ಹೆಚ್ಚುವರಿಯಾಗಿರುತ್ತದೆ. ಜೊತೆಗೆ ಇದು ಸ್ಥಳದಲ್ಲೇ ಫೋಟೋ ಮುದ್ರಣವನ್ನು ನೀಡುತ್ತದೆ.

ಫ್ಯೂಜಿಫಿಲ್ಮ್‌

ಹೌದು, ಫ್ಯೂಜಿಫಿಲ್ಮ್‌ ಕಂಪೆನಿ ಹೊಸ ಇನ್ಸ್ಟಾಕ್ಸ್ ಮಿನಿ 40 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಇದು ಆಟೋಮ್ಯಾಟಿಕ್‌ ಎಕ್ಸಪೋಸರ್‌, ಸೆಲ್ಫಿ ಮೋಡ್ ಸೇರಿದಂತೆ ಹೆಚ್ಚಿನ ಫೀಚರ್ಸ್‌ಗಳನ್ನು ಹೊಂದಿದೆ. ಅಲ್ಲದೆ ಇದು ಕ್ಲಾಸಿಕ್ ಕ್ಯಾಮೆರಾ ವಿನ್ಯಾಸವನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಲೈದರ್‌ ಟೆಕ್ಸ್ಚರ್ಡ್ ಬಾಡಿ ಮತ್ತು ಸಿಲ್ವರ್‌ ಅಸೆಂಟ್ಸ್‌ ಅನ್ನು ಹೊಂದಿದೆ. ಈ ಕ್ಯಾಮೆರಾ 60mm ಇನ್ಸ್ಟಾಕ್ಸ್ ಲೆನ್ಸ್ ಹೊಂದಿದ್ದು, ಫೋಕಲ್ ಉದ್ದ 30 ಸೆಂ ಮತ್ತು ಅದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ಇನ್ನುಳಿದತೆ ಈ ಕ್ಯಾಮೆರಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಯೂಜಿಫಿಲ್ಮ್

ಫ್ಯೂಜಿಫಿಲ್ಮ್ ಇನ್ಸ್ಟಾಕ್ಸ್ ಮಿನಿ 40 ಕ್ಯಾಮೆರಾ ಎರಡು ಎಎ ಗಾತ್ರದ ಕ್ಷಾರೀಯ ಬ್ಯಾಟರಿಗಳಲ್ಲಿ ಚಲಿಸುತ್ತದೆ. ಇದರಲ್ಲಿ ಆಡ್ವಾನ್ಸ್‌ ಫೋಟೋ ಮೇಲಿನಿಂದ ಹೊರಬರುತ್ತದೆ. ಇನ್ಸ್ಟಾಕ್ಸ್ ಮಿನಿ 40 ಆಟೋಮ್ಯಾಟಿಕ್‌ ಎಕ್ಸ್‌ಪೋಸರ್‌ ಫೀಚರ್ಸ್‌ ಅನ್ನು ಹೊಂದಿದ್ದು ಇದು ಸುತ್ತಮುತ್ತಲಿನ ಹೊಳಪನ್ನು ಸರಿಹೊಂದಿಸುತ್ತದೆ. ಕ್ಯಾಮೆರಾ ಆಟೋಮ್ಯಾಟಿಕ್‌ ಆಗಿ ಶೂಟರ್ ಪರಿಸ್ಥಿತಿಗಳಿಗೆ ಅನುಗುಣವಾಗಿ ಶಟರ್ ವೇಗ, ಫ್ಲ್ಯಾಷ್ ಔಟ್‌ಪುಟ್ ಮತ್ತು ಇತರ ಸೆಟ್ಟಿಂಗ್‌ಗಳನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಇದು ಡಾರ್ಕ್ ನೇಚರ್‌ನಲ್ಲಿ ಫೋಟೋಗಳನ್ನು ಉತ್ತಮವಾಗಿ ತೆಗೆದುಕೊಳ್ಳುವುದನ್ನು ಸುಲಭಗೊಳಿಸುತ್ತದೆ.

ಕ್ಯಾಮೆರಾ

ಇನ್ನು ಈ ಕ್ಯಾಮೆರಾದಲ್ಲಿ "ಸೆಲ್ಫಿ ಮೋಡ್" ಸಹ ಇದೆ. ಇದರಿಂದ ಸೆಲ್ಫಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ಬಳಕೆದಾರರು ಕ್ಯಾಮೆರಾದ ಲೆನ್ಸ್‌ನ ಮುಂಭಾಗದ ಎಡ್ಜ್‌ ಅನ್ನು ಹೊರತೆಗೆಯಬಹುದು. ಕ್ಯಾಮೆರಾದಿಂದ ಮುದ್ರಿಸುವ ಡೀಫಾಲ್ಟ್ ಫೋಟೋ ಚಿತ್ರದ ಗಾತ್ರ 62x46 ಮಿಮೀ. ಇರಲಿದೆ. ಇದು ಎರಡು-ಘಟಕ, ಎರಡು-ಅಂಶ 60 ಎಂಎಂ ಲೆನ್ಸ್‌ ಅನ್ನು ಸಂಯೋಜಿಸುತ್ತದೆ ಮತ್ತು 30cm ಮತ್ತು ಅದಕ್ಕಿಂತ ಹೆಚ್ಚಿನ ಫೋಕಲ್ ಉದ್ದವನ್ನು ಹೊಂದಿದೆ. ಸೆಲ್ಫಿಗಳಿಗಾಗಿ, ಶೂಟಿಂಗ್ ಶ್ರೇಣಿ 30cm ನಿಂದ 50cm ಆಗಿದೆ.

ಫ್ಯೂಜಿಫಿಲ್ಮ್

ಇದಲ್ಲದೆ ಫ್ಯೂಜಿಫಿಲ್ಮ್ ಇನ್ಸ್ಟಾಕ್ಸ್‌ ಮಿನಿ 40 ಕ್ಯಾಮೆರಾ ಪ್ರೋಗ್ರಾಮ್ ಮಾಡಲಾದ ಎಲೆಕ್ಟ್ರಾನಿಕ್ ಶಟರ್ ಅನ್ನು 1/2 ಸೆಕೆಂಡ್‌ನಿಂದ 1/250 ಸೆಕೆಂಡ್ ವರೆಗೆ ಹೊಂದಿದೆ. ಫಿಲ್ಮ್ ಎಜೆಕ್ಷನ್ ಪ್ರಕ್ರಿಯೆಯು ಸ್ವಯಂಚಾಲಿತವಾಗಿದೆ. ಇದಕ್ಕೆ ಯಾವುದೇ ಹಸ್ತಚಾಲಿತ ಹಸ್ತಕ್ಷೇಪದ ಅಗತ್ಯವಿಲ್ಲ. ಬ್ಯಾಟರಿಯನ್ನು ಉಳಿಸಲು ಐದು ನಿಮಿಷಗಳ ಕಾಲ ಬಳಸದಿದ್ದರೆ ಕ್ಯಾಮೆರಾ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ.

ಫ್ಯೂಜಿಫಿಲ್ಮ್

ಇನ್ನು ಈ ಹೊಸ ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 40 ಕ್ಯಾಮೆರಾ ಭಾರತದಲ್ಲಿ 8,499. ರೂ.ಬೆಲೆಯನ್ನು ಹೊಂದಿದೆ. ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ಬರಲಿದೆ. ಇದು ಭಾರತದಾದ್ಯಂತ ಕ್ಯಾಮೆರಾ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಕ್ಯಾಮೆರಾವನ್ನು ಅಮೆಜಾನ್‌ನಲ್ಲಿ ಖರೀದಿಸಲು ಪಟ್ಟಿ ಮಾಡಲಾಗಿದೆ.

Most Read Articles
Best Mobiles in India

English summary
Fujifilm Instax Mini 40 Camera Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X