ಭಾರತದಲ್ಲಿ ಫ್ಯೂಜಿಫಿಲ್ಮ್ X-S10 ಮಿರರ್‌ಲೆಸ್ ಕ್ಯಾಮೆರಾ ಲಾಂಚ್‌!..ವಿಶೇಷತೆ ಏನು?

|

ಕ್ಯಾಮೆರಾಗಳ ಲೋಕ ಇಂದು ಕಂಪ್ಲೀಟ್‌ ಕಲರ್‌ಫುಲ್‌ ಆಗಿದ್ದು, ವಿನೂತನ ಫೀಚರ್ಸ್‌ಗಳನ್ನು ಒಳಗೊಂಡ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಕ್ಯಾಮೆರಾ ಕಂಪನಿಗಳು ಸಾಕಷ್ಟು ಹೊಸತನದ ಫೀಚರ್ಸ್‌ಗಳನ್ನು ಒಳಗೊಂಡ ಕ್ಯಾಮೆರಾಗಳನ್ನ ಪರಿಚಯಿಸುತ್ತಲೇ ಬಂದಿವೆ. ಅವುಗಳಲ್ಲಿ ಜನಪ್ರಿಯ 'ಪ್ಯೂಜಿಫಿಲ್ಮ್' ಕಂಪನಿಯು ಸಹ ಒಂದು. ವಿಶ್ವಮಟ್ಟದಲ್ಲಿ ತನ್ನ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳಿಂದ ಹೆಸರುವಾಸಿ ಆಗಿರುವ 'ಪ್ಯೂಜಿಫಿಲ್ಮ್' ಕಂಪನಿಯು ಇದೀಗ ಫ್ಯೂಜಿಫಿಲ್ಮ್ ಎಕ್ಸ್-ಎಸ್ 10 ಮಿರರ್‌ಲೆಸ್ ಡಿಜಿಟಲ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಫ್ಯೂಜಿಫಿಲ್ಮ್‌

ಹೌದು, ಜನಪ್ರಿಯ ಫ್ಯೂಜಿಫಿಲ್ಮ್‌ ಕ್ಯಾಮೆರಾ ಕಂಪನಿಯು X-S10 ಮಿರರ್‌ಲೆಸ್ ಡಿಜಿಟಲ್ ಕ್ಯಾಮೆರಾವನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಕ್ಯಾಮೆರಾ ಫ್ಯೂಜಿಫಿಲ್ಮ್‌ನ ಪ್ರಮುಖ X-ಸರಣಿಯ ಭಾಗವಾಗಿದೆ. ಇದು ವೈವಿಧ್ಯಮಯ ಲೆನ್ಸ್ ಕಿಟ್ ಆಯ್ಕೆಗಳೊಂದಿಗೆ ಲಭ್ಯವಿದ್ದು, X-S10 ಆರಂಭಿಕ ಮತ್ತು ವ್ಲಾಗ್‌ಗರ್ಗಳನ್ನು ಗುರಿಯಾಗಿರಿಸಿಕೊಂಡಿದೆ. ಇದು 26.1 ಮೆಗಾಪಿಕ್ಸೆಲ್ ಎಕ್ಸ್-ಟ್ರಾನ್ಸ್ ಸಿಎಮ್ಒಎಸ್ 4 ಸೆನ್ಸಾರ್‌, ಹೈ-ಸ್ಪೀಡ್ ಇಮೇಜ್ ಪ್ರೊಸೆಸಿಂಗ್ ಎಂಜಿನ್ ಮತ್ತು ಇನ್-ಬಾಡಿ ಇಮೇಜ್ ಸ್ಟೆಬಿಲೈಸೇಶನ್ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಕ್ಯಾಮೆರಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಯೂಜಿಫಿಲ್ಮ್

ಫ್ಯೂಜಿಫಿಲ್ಮ್ ಎಕ್ಸ್-ಎಸ್ 10 ಮಿರರ್‌ಲೆಸ್ ಡಿಜಿಟಲ್ ಕ್ಯಾಮೆರಾ ವೆರಿ-ಆಂಗಲ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ, ಇದನ್ನು 180 ಡಿಗ್ರಿಗಳಷ್ಟು ಮುಂದಕ್ಕೆ ತಿರುಗಿಸಬಹುದು. ಮೋಷನ್ ಸೆನ್ಸರ್ ರೇಟೆಂಷನ್ ಮೆಕ್ಯಾನಿಸಮ್‌ ಬಳಸುವ ಮೊದಲ ಮಧ್ಯ ಶ್ರೇಣಿಯ ಎಕ್ಸ್ ಸರಣಿ ಕ್ಯಾಮೆರಾ ಇದಾಗಿದೆ ಎಂದು ಫ್ಯೂಜಿಫಿಲ್ಮ್ ಹೇಳಿದೆ. ಇನ್ನು ಫ್ಯೂಜಿಫಿಲ್ಮ್ X-S10 ಎಕ್ಸ್-ಟ್ರಾನ್ಸ್ 26.1-ಮೆಗಾಪಿಕ್ಸೆಲ್ CMOS4 ಸೆನ್ಸಾರ್‌ ಹೊಂದಿದೆ. ಇದು 2.16 ಮಿಲಿಯನ್ ಫೇಸ್ ಡಿಟೆಕ್ಷನ್ ಪಿಕ್ಸೆಲ್‌ ಮತ್ತು ಎಕ್ಸ್-ಪ್ರೊಸೆಸರ್ 4 ಪ್ರೊಸೆಸರ್‌ನೊಂದಿಗೆ ಹೈಸ್ಪೀಡ್ ಎಎಫ್ ಅನ್ನು ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ ಕ್ಯಾಮೆರಾ 0.02 ಸೆಕೆಂಡುಗಳಷ್ಟು ವೇಗವಾಗಿ ಫೋಕಸ್ ಸಾಧಿಸಬಹುದು ಎಂದು ಫ್ಯೂಜಿಫಿಲ್ಮ್ ಹೇಳಿಕೊಂಡಿದೆ.

ಮಾನಿಟರ್

ಈ ಕ್ಯಾಮೆರಾ 180 ಡಿಗ್ರಿಗಳವರೆಗೆ ತಿರುಗಬಲ್ಲ ವೇರಿ-ಆಂಗಲ್ ಎಲ್ಸಿಡಿ ಮಾನಿಟರ್‌ನೊಂದಿಗೆ ಬರುತ್ತದೆ. ಕಡಿಮೆ ಬೆಳಕಿನ ಆದ್ಯತೆ, ರೆಸಲ್ಯೂಶನ್ ಆದ್ಯತೆಯ ಮಾದರಿ ಮತ್ತು ಫ್ರೇಮ್ ದರ ಆದ್ಯತೆ ಸೇರಿದಂತೆ ಮೂರು ಬೂಸ್ಟ್ ಮೋಡ್‌ಗಳನ್ನು ಹೊಂದಿರುವ ಲೈವ್ ವ್ಯೂ ಕಾರ್ಯವನ್ನು ಇದು ಒಳಗೊಂಡಿದೆ. ಇನ್ನು ಫ್ಯೂಜಿಫಿಲ್ಮ್ X-S10 ಮಿರರ್‌ಲೆಸ್‌ ಕ್ಯಾಮೆರಾ ಮತ್ತು ಇದು ಹೊಸದಾಗಿ ಅಭಿವೃದ್ಧಿಪಡಿಸಿದ ಇನ್-ಬಾಡಿ ಇಮೇಜ್ ಸ್ಟೆಬಿಲೈಸೇಶನ್ (ಐಬಿಐಎಸ್) ಕಾರ್ಯವಿಧಾನವನ್ನು ಹೊಂದಿದೆ, ಇದು ಕ್ಯಾಮೆರಾ ಫೈವ್-ಆಕ್ಸಿಸ್ ಇಮೇಜ್ ಸ್ಟಬಿಲಿಜೇಶನ್ ನೀಡುತ್ತದೆ.

ಕ್ಯಾಮೆರಾ

ಇನ್ನು ಈ ಕ್ಯಾಮೆರಾ ಸ್ವಯಂಚಾಲಿತವಾಗಿ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ಹೊಂದಿಸುವ AUTO / SP ಮೋಡ್ ಅನ್ನು ಒಳಗೊಂಡಿದೆ. ವೀಡಿಯೊ ಫೀಚರ್ಸ್‌ಗಳಲ್ಲಿ ಫ್ಯೂಜಿಫಿಲ್ಮ್ X-S10 ತೀಕ್ಷ್ಣವಾದ 4K ವೀಡಿಯೊಗಳನ್ನು ಸೆರೆಹಿಡಿಯಬಹುದಾಗಿದೆ. ಇದು 240fps ನಲ್ಲಿ ಹೆಚ್ಚಿನ ವೇಗದ ಪೂರ್ಣ-ಎಚ್ಡಿ ವೀಡಿಯೊವನ್ನು ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಫೂಟೇಜ್ ಲೋ ಸೌಂಡ್‌ದೊಂದಿಗೆ ಹೆಚ್ಚಿನ ರೆಸಲ್ಯೂಶನ್‌ನಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಕ್ಯಾಮೆರಾ 6K ಗೆ ಸಮನಾದ ಡೇಟಾದಿಂದ 4K ವಿಡಿಯೋವನ್ನು ಉತ್ಪಾದಿಸುತ್ತದೆ ಎಂದು ಕಂಪನಿ ಹೇಳಿದೆ.

ಫ್ಯೂಜಿಫಿಲ್ಮ್

ಫ್ಯೂಜಿಫಿಲ್ಮ್ X-S10 ಕ್ಯಾಮೆರಾ ಭಾರತದಲ್ಲಿ ಕೇವಲ ಕ್ಯಾಮೆರಾ ಬಾಡಿಗೆ 99,999.ರೂ. ಬೆಲೆ ಹೊಂದಿದೆ. ನೀವು ಇದನ್ನು 18-55 ಎಂಎಂ ಕಿಟ್ ಲೆನ್ಸ್‌ನೊಂದಿಗೆ ಖರೀದಿಸಲು ಬಯಸಿದರೆ, ಅದು ನಿಮಗೆ ರೂ. 1,34,999 ಮತ್ತು 16-80 ಎಂಎಂ ಕಿಟ್ ಲೆನ್ಸ್‌ನೊಂದಿಗೆ, ಕ್ಯಾಮೆರಾದ ಬೆಲೆ 1,49,999 ರೂ.ಗೆ ಖರೀದಿಸಬಹುದಾಗಿದೆ.

Best Mobiles in India

English summary
Fujifilm X-S10 mirrorless digital camera has been launched in India. This camera is part of the flagship X-series from Fujifilm.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X