ಆನ್‌ಲೈನ್‌ನಲ್ಲಿ ಟ್ರೈನ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವ ಮುನ್ನ ಈ ಬದಲಾವಣೆ ಗಮನಿಸಿ!

|

ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)ದ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಬಳಸಿ ರೈಲು ಟಿಕೆಟ್‌ ಕಾಯ್ದಿರಿಸುವ ಪ್ರಕ್ರಿಯೆಯಲ್ಲಿ ಹೊಸ ಬದಲಾವಣೆ ಮಾಡಿದೆ. ಆನ್‌ಲೈನ್‌ನಲ್ಲಿ ಟ್ರೈನ್‌ ಟಿಕೆಟ್‌ ಮಾಡುವವರು ಈ ಹೊಸ ಬದಲಾವಣೆಯನ್ನು ಗಮನಿಸಬೇಕಿದೆ. ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಮುನ್ನ ಹೊಸದಾಗಿ ಪರಿಷ್ಕರಿಸಿರುವ ಬುಕ್ಕಿಂಗ್‌ ಪ್ರಕ್ರಿಯೆಯನ್ನು ಅನುಸರಿಸಬೇಕಿದೆ.

IRCTC

ಹೌದು, IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ ಮೂಲಕ ಟ್ರೈನ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವ ವಿಧಾನದಲ್ಲಿ ಹೊಸ ಬದಲಾವಣೆಯಾಗಿದೆ. IRCTC ತನ್ನ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ಬಳಕೆದಾರರು ತಮ್ಮ ಫೋನ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳನ್ನು ಪರಿಶೀಲಿಸುವುದನ್ನು ಕಡ್ಡಾಯಗೊಳಿಸಿದೆ. ಪರಿಶೀಲನೆ ಇಲ್ಲದೆ ಗ್ರಾಹಕರು ಟಿಕೆಟ್ ಬುಕ್ಕಿಂಗ್‌ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು IRCTC ಹೇಳಿದೆ. ಹಾಗಾದ್ರೆ IRCTCಯ ಹೊಸ ನಿಯಮ ಏನು ಹೇಳುತ್ತೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

IRCTC

IRCTC ಪರಿಚಯಿಸಿರುವ ಹೊಸ ನಿಯಮದ ಪ್ರಕಾರ ಟ್ರೈನ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವ ಪ್ರಯಾಣಿಕರು ತಮ್ಮ ಫೋನ್‌ ನಂಬರ್‌ ಮತ್ತು ಇಮೇಲ್‌ ಐಡಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಕೋವಿಡ್‌-19 ಶುರುವಾದ ನಂತರ ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡದ ಪ್ರಯಾಣಿಕರಿ ಈ ಹೊಸ ನಿಯಮಗಳು ಅನ್ವಯಿಸುತ್ತವೆ ಎಂದು ವರದಿಯಾಗಿದೆ. ಇನ್ನು IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡುವಾಗ ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಪರಿಶೀಲಿಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

IRCTC ಮೂಲಕ ರೈಲು ಟಿಕೆಟ್‌ ಬುಕ್ ಮಾಡುವಾಗ ನಿಮ್ಮ ಫೋನ್ ಸಂಖ್ಯೆ, ಇಮೇಲ್ ಐಡಿ ಪರಿಶೀಲಿಸುವುದು ಹೇಗೆ

IRCTC ಮೂಲಕ ರೈಲು ಟಿಕೆಟ್‌ ಬುಕ್ ಮಾಡುವಾಗ ನಿಮ್ಮ ಫೋನ್ ಸಂಖ್ಯೆ, ಇಮೇಲ್ ಐಡಿ ಪರಿಶೀಲಿಸುವುದು ಹೇಗೆ

ಹಂತ:1 ಮೊದಲಿಗೆ IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಹೋಗಿ
ಹಂತ:2 ನಂತರ ವೆರಿಫೈ ವಿಂಡೋಗೆ ನ್ಯಾವಿಗೇಟ್ ಮಾಡಿ
ಹಂತ:3 ಇದೀಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ
ಹಂತ:4 ನೀವು ಬಲಭಾಗದಲ್ಲಿ ವೆರಿಫೈ ಆಯ್ಕೆಯನ್ನು ಮತ್ತು ಎಡಭಾಗದಲ್ಲಿ ಎಡಿಟ್ ಬಟನ್ ಅನ್ನು ಕಾಣಬಹುದು.
ಹಂತ:5 ಇದೀಗ ನಿಮ್ಮ ವಿವರಗಳನ್ನು ಸೇರಿಸಿದ ನಂತರ, ಪರಿಶೀಲನೆಗಾಗಿ ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು OTP ಅನ್ನು ಸ್ವೀಕರಿಸುತ್ತೀರಿ

ಇದೀಗ ನಿಮ್ಮ ಒಟಿಪಿಯನ್ನು ನಮೂದಿಸಿದ ನಂತರ IRCTC ಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ವೆರಿಫೈ ಮಾಡಲಾಗುತ್ತದೆ. ನಂತರ ರೈಲು ಟಿಕೆಟ್‌ಗಳನ್ನು ತ್ವರಿತವಾಗಿ ಬುಕ್ ಮಾಡಲು ಸಾಧ್ಯವಾಗುತ್ತದೆ.

ವೆರಿಫೈ ಮಾಡಿದ ನಂತರ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದು ಹೇಗೆ?

ವೆರಿಫೈ ಮಾಡಿದ ನಂತರ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದು ಹೇಗೆ?

ಹಂತ:1 IRCTC ಪೋರ್ಟಲ್ ಅಥವಾ ಅಪ್ಲಿಕೇಶನ್‌ಗೆ ಹೋಗಿ
ಹಂತ:2 ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ
ಹಂತ:3 ರೈಲು ಹತ್ತುವ ನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣ, ಪ್ರಯಾಣದ ದಿನಾಂಕ ಮತ್ತು ಇತರ ವಿವರಗಳನ್ನು ನಮೂದಿಸಿ
ಹಂತ:4 ರೈಲನ್ನು ಆಯ್ಕೆ ಮಾಡಿ ಮತ್ತು 'ಬುಕ್ ನೌ' ಕ್ಲಿಕ್ ಮಾಡಿ
ಹಂತ:5 ನಂತರ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ಬರ್ತ್ ಆದ್ಯತೆ ವಿವರಗಳನ್ನು ನಮೂದಿಸಿ.
ಹಂತ:6 ಇದೀಗ ಪಾವತಿ ಮಾಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಪಾವತಿಯ ವಿಧಾನವನ್ನು ಆರಿಸಿ ಮತ್ತು ವಹಿವಾಟನ್ನು ಪೂರ್ಣಗೊಳಿಸಿ

ಪಾವತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, IRCTC ಬುಕ್ಕಿಂಗ್ ದೃಢೀಕರಣ ಮತ್ತು ಪ್ರಯಾಣದ ವಿವರಗಳನ್ನು ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸದಲ್ಲಿ ಕಾಣಬಹುದಾಗಿದೆ.

Best Mobiles in India

Read more about:
English summary
IRCTC has made it mandatory for users to get their phone numbers and email IDs verified before booking tickets online on its app or website.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X