ಬೆಂಗಳೂರಿನ ಜಯನಗರದ ಆಟದ ಮೈದಾನಕ್ಕೆ ಹೋದ್ರೆ, ಉಚಿತ ಹೈಟೆಕ್ ವೈಫೈ ಸೇವೆ

By Suneel
|

ಟೆಕ್ನಾಲಜಿ ನಾವು ನಿರ್ವಹಿಸುವ ದೈನಂದಿನ ಕೆಲಸಗಳನ್ನು ಈಗಾಗಲೇ ಬದಲಿಸಿದೆ. ಅಲ್ಲದೇ ಆಡುವ ಆಟಗಳು ಮತ್ತು ಸಂವಹನ ವಿಧಾನವನ್ನು ಸಹ ಟೆಕ್ನಾಲಜಿ ಬದಲಾಯಿಸಿದೆ. ವಿಶೇಷ ಅಂದ್ರೆ ಟೆಕ್ನಾಲಜಿ ಈಗ ಜಯನಗರದ ಆಟದ ಮೈದಾನದಲ್ಲೂ ಸಹ ಸಂವಹನವನ್ನು ಬದಲಿಸಲಿದೆ.

ಬೆಂಗಳೂರಿನ ಜಯನಗರದ ಆಟದ ಮೈದಾನಕ್ಕೆ ಹೋದ್ರೆ, ಉಚಿತ ಹೈಟೆಕ್ ವೈಫೈ ಸೇವೆ

ಅತಿ ಶೀಘ್ರದಲ್ಲಿ ಬೆಂಗಳೂರಿನ ಜಯನಗರದ 'ಶ್ರೀ ಚಾಮುಂಡೇಶ್ವರಿ' ಆಟದ ಮೈದಾನಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರು ಸಹ ಉಚಿತ ವೈಫೈ ಸಂಪರ್ಕ ಪಡೆದು ಎಂಜಾಯ್ ಮಾಡಬಹುದಾಗಿದೆ.

ಬೆಂಗಳೂರು ನಗರದಲ್ಲಿ ಅತಿ ವೇಗದ ಇಂಟರ್ನೆಟ್ ಸೇವೆಯನ್ನು ಉಚಿತವಾಗಿ ನೀಡಿದ ಮೊಟ್ಟ ಮೊದಲ ಆಟದ ಮೈದಾನ ಎಂಬ ಹೆಗ್ಗಳಿಕೆಗೆ ಜಯನಗರದ 'ಶ್ರೀ ಚಾಮುಂಡೇಶ್ವರಿ' ಆಟದ ಮೈದಾನ ಪಾತ್ರವಾಗಿದೆ. ಉಚಿತ ಇಂಟರ್ನೆಟ್ ವೈಫೈ ಸಂಪರ್ಕ ಯೋಜನೆಯನ್ನು ಜಯನಗರ ನಿವಾಸಿಗಳ ಕ್ಷೇಮಾಭಿವೃದ್ದಿಗಾಗಿ ಕೆಲಸ ಮಾಡುತ್ತಿರುವ ಎಜ್‌ಜಿಓ 'ಸಿಟಿಜೆನ್ ಆಕ್ಷನ್‌' ಅಭಿವೃದ್ದಿಪಡಿಸಿದೆ. 'ಶ್ರೀ ಚಾಮುಂಡೇಶ್ವರಿ' ಆಟದ ಮೈದಾನಕ್ಕೆ ಬರುವ ಎಲ್ಲರಿಗೂ ಇಂಟರ್ನೆಟ್ ಸೇವೆ ಉಚಿತವಾಗಿ ನೀಡಲು ತಗಲುವ ವೆಚ್ಚವನ್ನು ಸಂಪೂರ್ಣವಾಗಿ ಎನ್‌ಜಿಒ ಸ್ವತಃ ತಾನೆ ಬರಿಸಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗುತ್ತದೆ. 'ಸಿಟಿಜೆನ್‌ ಆಕ್ಷನ್‌' ಸಂಸ್ಥಾಪಕರಾದ 'ಪುನೀತ್‌ ಟಿ' ರವರು ಈ ಯೋಜನೆಯನ್ನು 'ಡಿಜಿಟಲ್‌ ಇಂಡಿಯಾ' ಆಂದೋಲನಕ್ಕೆ ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಜಯನಗರದ ಆಟದ ಮೈದಾನಕ್ಕೆ ಹೋದ್ರೆ, ಉಚಿತ ಹೈಟೆಕ್ ವೈಫೈ ಸೇವೆ

ಅಂದಹಾಗೆ ಜಯನಗರದ 'ಶ್ರೀ ಚಾಮುಂಡೇಶ್ವರಿ' ಆಟದ ಮೈದಾನಕ್ಕೆ ಬರುವ ಮೊಬೈಲ್‌ ಬಳಕೆದಾರರಿಗೆ ಉಚಿತ ಇಂಟರ್ನೆಟ್ ಸೇವೆ ಮೊದಲ 30 ನಿಮಿಷಗಳು ಮಾತ್ರ ಎಂದು ಹೇಳಲಾಗಿದೆ. ನಂತರದಲ್ಲಿ ವೈಫೈ ಬಳಸಲು ಯಾವ ರೀತಿ ಶುಲ್ಕ ಇರುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ರಾತ್ರಿ ವೇಳೆ ಇಂಟರ್ನೆಟ್ ಕನೆಕ್ಷನ್‌ ಸ್ಲೋ ಆಗಲು 5 ಕಾರಣಗಳು, ಯಾವುವು ಗೊತ್ತೇ?

Best Mobiles in India

Read more about:
English summary
Jayanagar Playground goes Hi Tech with WiFi. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X