ಶಿಯೋಮಿ ಸಂಸ್ಥೆಯಿಂದ ಹೊಸ ಮಿ ನೋಟ್‌ಬುಕ್ ಪ್ರೊ 15 (2020) ಬಿಡುಗಡೆ!

|

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಈಗಾಗಲೆ ತನ್ನ ವಿಶೇಷ ಮಾದರಿಯ ಸ್ಮಾರ್ಟ್‌ಪ್ರಾಡಕ್ಟ್‌ಗಳಿಂದ ಗುರುತಿಸಿಕೊಂಡಿದೆ. ಹಲವು ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿರುವ ಶಿಯೋಮಿ ಲ್ಯಾಪ್‌ಟಾಪ್‌ ವಲಯದಲ್ಲೂ ಸಹ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ನೋಟ್‌ಬುಕ್‌ ಅನ್ನು ಬಿಡುಗಡೆ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಸಂಸ್ಥೆಯು ತನ್ನ ಹೊಸ ಮಾದರಿಯ ಮಿ ನೋಟ್‌ಬುಕ್ ಪ್ರೊ 15 (2020) ಅನ್ನು ಬಿಡುಗಡೆ ಮಾಡಿದೆ. ಸದ್ಯ ಶಿಯೋಮಿ ತನ್ನ ಹೊಸ ನೋಟ್‌ಬುಕ್‌ ಅನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು,. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಮತ್ತು ಎನ್ವಿಡಿಯಾ ಜೀಫೋರ್ಸ್ MX350 GPU ನಿಂದ ನಿಯಂತ್ರಿಸಲ್ಪಡುತ್ತದೆ. ಸದ್ಯ ಈ ನೋಟ್‌ಬುಕ್‌ನ ವಿನ್ಯಾಸ ಹಾಗೂ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಶಿಯೋಮಿ

ಇನ್ನು ಶಿಯೋಮಿ ಬಿಡುಗಡೆ ಮಾಡಿರುವ ಶಿಯೋಮಿ ಮಿ ನೋಟ್‌ಬುಕ್‌ ಪ್ರೊ 15 ಎರಡು ಸಂರಚನೆಗಳಲ್ಲಿ ಲಭ್ಯವಿದೆ. ಅಲ್ಲದೆ ಮಿ ನೋಟ್ಬುಕ್ ಪ್ರೊ 15 (2020) ಸ್ಲಿಮ್ ಮತ್ತು ಲೈಟ್ ಲ್ಯಾಪ್ಟಾಪ್ ಆಗಿದ್ದು 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15 ಇಂಚಿನ ಸ್ಕ್ರೀನ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಕ್ರೀನ್‌ ಕೂಡ ಎರಡೂ ಮಾದರಿಯ ಸಂರಚನೆಯನ್ನ ಹೊಂದಿದೆ. ಅಲ್ಲದೆ ಮಿ ನೋಟ್ಬುಕ್ ಪ್ರೊ 15 (2020) ವಿಂಡೋಸ್ 10 ಹೋಮ್ ಅನ್ನು ಸಹ ಹೊಂದಿದ್ದು, ಸ್ಕ್ರೀನ್-ಟು-ಬಾಡಿ ನಡುವಿನ ಅನುಪಾತ 81.5% ಹೊಂದಿದೆ.

ಶಿಯೋಮಿ

ಇದಲ್ಲದೆ ಶಿಯೋಮಿಯ ಮಿ ನೋಟ್‌ಬುಕ್ ಪ್ರೊ 15 (2020) 10 ನೇ ತಲೆಮಾರಿನ ಕೋರ್ I7-10510U ಪ್ರೊಸೆಸರ್, 16GB RAM ವರೆಗೆ ಮತ್ತು 1TB ಸಂಗ್ರಹವನ್ನ ಸಹ ಹೊಂದಿದೆ. ಜೊತೆಗೆ ಈ ನೋಟ್‌ಬುಕ್‌ ಎನ್ವಿಡಿಯಾ ಜಿಫೋರ್ಸ್ MX350GPU ಗ್ರಾಫಿಕ್ಸ್‌ ಅನ್ನು ಹೊಂದಿದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ 6, ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸಲಿದೆ. ಅಲ್ಲದೆ ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು, HDMI ಪೋರ್ಟ್, ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳನ್ನ ಸಹ ಹೊಂದಿದೆ. ಇದರ ಜೊತೆಗೆ 2.5W ಸ್ಪೀಕರ್‌ಗಳ ಆಡಿಯೊ ಬೆಂಬಲವನ್ನು ಸಹ ಒಳಗೊಂಡಿದೆ.

ಮಿ ನೋಟ್ಬುಕ್ ಪ್ರೊ 15

ಇನ್ನು ಮಿ ನೋಟ್ಬುಕ್ ಪ್ರೊ 15 (2020) 60WHr ಬ್ಯಾಟರಿ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಇದು ಕೀಬೋರ್ಡ್ ಬ್ಯಾಕ್ಲಿಟ್ ಆಗಿದೆ. ಇದಲ್ಲದೆ ಇದು ಸ್ಲಿಮ್ ಲ್ಯಾಪ್‌ಟಾಪ್ ಆಗಿದ್ದರೂ ಮಿ ನೋಟ್‌ಬುಕ್ ಪ್ರೊ 15 (2020) ಯೋಗ್ಯವಾದ ಪೋರ್ಟ್ ಆಯ್ಕೆಯೊಂದಿಗೆ ಬರುತ್ತದೆ. ಇನ್ನು ಮಿ ನೋಟ್ಬುಕ್ ಪ್ರೊ 15 (2020) ಇಂಟೆಲ್ ಕೋರ್ I5 ಮಾದರಿಯ ಬೆಲೆ CNY 5999 (ಸರಿಸುಮಾರು ರೂ. 64,200) ಆಗಿದ್ದರೆ, ಇಂಟೆಲ್ ಕೋರ್ I7 ಮಾದರಿಯ ಬೆಲೆ CNY 6999 (ಸರಿಸುಮಾರು ರೂ. 74,900).ಬೆಲೆಯನ್ನ ಹೊಂದಿದೆ.

Best Mobiles in India

English summary
Mi Notebook Pro 15 (2020) packs a 60WHr battery and has two 2.5W speakers with Dolby Audio Premium support.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X