ಮೈಕ್ರೋಸಾಫ್ಟ್ ಸಂಸ್ಥೆಯಿಂದ ಡಿಟ್ಯಾಚೇಬಲ್ 2-ಇನ್ -1 ಲ್ಯಾಪ್‌ಟಾಪ್ ಬಿಡುಗಡೆ!

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಮೈಕ್ರೋಸಾಫ್ಟ್‌ ಕಂಪೆನಿ ತನ್ನ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ ಮೈಕ್ರೋಸಾಫ್ಟ್‌ ಸಂಸ್ಥೆ ತನ್ನ ಹೊಸ ಮೈಕ್ರೋಸಾಫ್ಟ್ ಸರ್ಫೇಸ್ ಗೋ 2 ಟ್ಯಾಬ್ಲೆಟ್ ಮತ್ತು ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3 ಡಿಟ್ಯಾಚೇಬಲ್ 2-ಇನ್ -1 ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಬಿಡುಗಡೆಯಾಗಿದೆ. ಇನ್ನು ಮೈಕ್ರೋಸಾಫ್ಟ್ ಸರ್ಫೇಸ್ ಗೋ 2 ಟ್ಯಾಬ್ಲೆಟ್ 8 ನೇ-ಜನ್ ಇಂಟೆಲ್ ಕೋರ್ ಎಂ ಪ್ರೊಸೆಸರ್ ಅನ್ನು ಹೊಂದಿದೆ ಮತ್ತು ಇದು 10 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಮೈಕ್ರೋಸಾಪ್ಟ್‌

ಹೌದು, ಮೈಕ್ರೋಸಾಪ್ಟ್‌ ಸಂಸ್ಥೆ ತನ್ನ ಹೊಸ ಎರಡು ಲ್ಯಾಪ್‌ಟಾಪ್‌ ಅನ್ನು ಪರಿಚಯಿಸಿದೆ. ಇನ್ನು ಪ್ರೀಮಿಯಂ ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3 ಲ್ಯಾಪ್‌ಟಾಪ್‌ 13 ಇಂಚಿನ ಮತ್ತು 15 ಇಂಚಿನ ಗಾತ್ರಗಳಲ್ಲಿ ಲಭ್ಯವಿದೆ ಮತ್ತು ಇಂಟೆಲ್‌ನ 10 ನೇ ಜನ್ ಐಸ್ ಲೇಕ್ ಕೋರ್ ಐ 5 ಮತ್ತು ಕೋರ್ ಐ 7 ಪ್ರೊಸೆಸರ್‌ ಅನ್ನು ಹೊಂದಿದೆ. ಇನ್ನು ಮೈಕ್ರೋಸಾಫ್ಟ್ ಸರ್ಫೇಸ್ ಗೋ 2 ಟ್ಯಾಬ್ಲೆಟ್ ವಿಂಡೋಸ್ 10 ಪ್ರೊನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3 ಲ್ಯಾಪ್‌ಟಾಪ್‌ 3,000x2,000 ಪಿಕ್ಸೆಲ್‌ ಸಾಮರ್ಥ್ಯ ಹೊಂದಿರುವ 13 ಇಂಚಿನ ಡಿಸ್‌ಪ್ಲೇ ಮತ್ತು 3,240x2,160 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 15 ಇಂಚಿನ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಇದು ಕ್ವಾಡ್-ಕೋರ್ 10 ನೇ-ಜನ್ ಇಂಟೆಲ್ ಕೋರ್ I5-1035 G7 ಮತ್ತು I7-1065 G7 ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು ಇದು ವಿಂಡೋಸ್ 10 ಪ್ರೊನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೇಯೆ 32GB RAM ಮತ್ತು 1TB ಸ್ಟೋರೇಜ್‌ ಆಯ್ಕೆಗಳನ್ನ ಹೊಂದಿದೆ. ಜೊತೆಗೆ ಮೈಕ್ರೋಸಾಫ್ಟ್ 365 ಅಪ್ಲಿಕೇಶನ್‌ಗಳನ್ನು ಪ್ರೀ ಲೋಡ್ ಹೊಂದಿದೆ.

ಲ್ಯಾಪ್‌ಟಾಪ್

ಇನ್ನು 13-ಇಂಚಿನ ಮತ್ತು 15-ಇಂಚಿನ ಮಾದರಿಯ ಎರಡು ಲ್ಯಾಪ್‌ಟಾಪ್‌ಗಳು ವೈ-ಫೈ 6, ಬ್ಲೂಟೂತ್ 5.0, ಎರಡು ಯುಎಸ್‌ಬಿ 3.1 ಜೆನ್ 2 ಟೈಪ್-ಎ ಪೋರ್ಟ್‌ಗಳು, ಒಂದು ಯುಎಸ್‌ಬಿ 3.1 ಜೆನ್ 2 ಟೈಪ್-ಸಿ ಪೋರ್ಟ್ ಅನ್ನು ಹೊಂದಿವೆ. ಇದರಲ್ಲಿ 13 ಇಂಚಿನ ಮಾದರಿಯು 15.5 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಆದರೆ 15 ಇಂಚಿನ ಮಾದರಿಯು 17.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದರಲ್ಲಿ ಡಿಟ್ಯಾಚೇಬಲ್ ಟ್ಯಾಬ್ಲೆಟ್ ಮತ್ತು ಕೀಬೋರ್ಡ್ ಬೇಸ್ ಸೇರಿವೆ.

ಮೈಕ್ರೋಸಾಫ್ಟ್ ಸರ್ಫೇಸ್ ಗೋ 2

ಮೈಕ್ರೋಸಾಫ್ಟ್ ಸರ್ಫೇಸ್ ಗೋ 2

ಮೈಕ್ರೋಸಾಫ್ಟ್ ಸರ್ಫೇಸ್ ಗೋ 2 ಟ್ಯಾಬ್ಲೆಟ್ 1,920x1,280 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದ 10.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಟ್ಯಾಬ್ಲೆಟ್‌ ಡಿಸ್‌ಪ್ಲೇ 220pp ಪಿಕ್ಸೆಲ್ ಸಾಂದ್ರತೆ, 3: 2 ರಚನೆಯ ಅನುಪಾತ ಮತ್ತು 1500: 1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ. ಈ ಟ್ಯಾಬ್ಲೆಟ್ ಇಂಟೆಲ್ ಪೆಂಟಿಯಮ್ ಗೋಲ್ಡ್ 4425 ವೈ ಮತ್ತು 8 ನೇ ಜನ್ ಇಂಟೆಲ್ ಕೋರ್ ಎಂ 3 ನ ಪ್ರೊಸೆಸರ್ ಆಯ್ಕೆಗಳಲ್ಲಿ ಬರುತ್ತದೆ. ಇದು ವಿಂಡೋಸ್ 10 ಪ್ರೊನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೇಯೇ 8GB RAM ಮತ್ತು 128GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಸರ್ಫೇಸ್ ಗೋ 2

ಇನ್ನು ಸರ್ಫೇಸ್ ಗೋ 2 ನಲ್ಲಿ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಮತ್ತು 1080p ಹೆಚ್‌ಡಿ ರೆಕಾರ್ಡಿಂಗ್ ಬೆಂಬಲಿಸುವ 8 ಮೆಗಾಪಿಕ್ಸೆಲ್ ಆಟೋಫೋಕಸ್ ರಿಯರ್‌ ಕ್ಯಾಮೆರಾ ಇದೆ. ಸರ್ಫೇಸ್ ಗೋ 2 ವೈ-ಫೈ 6, ಬ್ಲೂಟೂತ್ 5.0, ಚಾರ್ಜಿಂಗ್ ಮತ್ತು ಪರಿಕರಗಳಿಗಾಗಿ ಮೈಕ್ರೋಸಾಫ್ಟ್ನ ಸ್ವಾಮ್ಯದ ಸರ್ಫೇಸ್ ಕನೆಕ್ಟರ್, ಹೆಡ್ಫೋನ್ ಸಾಕೆಟ್ ಮತ್ತು ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3 13 ಇಂಚಿನ ಲ್ಯಾಪ್‌ಟಾಪ್‌ 8GB RAM + 256GB ಸ್ಟೋರೇಜ್ ಮತ್ತು 10 ನೇ ಜನ್ ಐಸ್ ಲೇಕ್ ಕೋರ್ I5 ಪ್ರೊಸೆಸರ್ ಹೊಂದಿರುವ ಸಣ್ಣ ಮಾದರಿಯ ಬೆಲೆ ರೂ. 1,56,299 ಆಗಿದೆ. ಹಾಗೇಯೆ 16GB RAM + 256GB ಸ್ಟೋರೇಜ್, ಮತ್ತು ಕೋರ್ I7 ಮಾದರಿಯ ಬೆಲೆ ರೂ. 1,95,899. ಹಾಗೂ 32GB RAM+512GB ಸ್ಟೋರೇಜ್, ಮತ್ತು ಕೋರ್ I7 ಪ್ರೊಸೆಸರ್ ರೂಪಾಂತರದ ಬೆಲೆ ರೂ. 2,37,199. ಆಗಿದೆ. ಇನ್ನು 15 ಇಂಚಿನ ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3 16GB RAM + 256GB ಸ್ಟೋರೇಜ್‌ ಮತ್ತು ಕೋರ್ I7 ಪ್ರೊಸೆಸರ್ ಕಾನ್ಫಿಗರೇಶನ್‌ಗೆ 2,20,399 ರೂ ಬೆಲೆಯನ್ನು ಹೊಂದಿದೆ. ಇದು 32GB RAM ಮತ್ತು 512 GB ಸ್ಟೋರೇಜ್ ಮಾದರಿ 2,66,499 ರೂ ಬೆಲೆಯನ್ನು ಹೊಂದಿದೆ. ಹಾಗೇಯೇ ಮೈಕ್ರೋಸಾಫ್ಟ್ ಸರ್ಫೇಸ್ ಗೋ 2 ರೂ. ಭಾರತದಲ್ಲಿ 47,599 ರೂ ಬೆಲೆಯನ್ನು ಹೊಂದಿದೆ.

Best Mobiles in India

English summary
Microsoft Surface Go 2 tablet and Microsoft Surface Book 3 detachable 2-in-1 laptop have launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X