'ಒನ್‌ಪ್ಲಸ್' ಪಾಲಿಗೆ ಭಾರತದ 'ಸೂಪರ್‌ ಬ್ರ್ಯಾಂಡ್' ಕಿರೀಟ!

|

ಭಾರತದಲ್ಲಿ ಅತಿಹೆಚ್ಚು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ 'ಒನ್‌ಪ್ಲಸ್' ಕಂಪೆನಿಗೆ 2019ನೇ ಸಾಲಿನ ಭಾರತದ 'ಸೂಪರ್‌ ಬ್ರ್ಯಾಂಡ್' ಎಂಬ ಕಿರೀಟ ಸಿಕ್ಕಿದೆ. ವಿಶ್ವದ ಬ್ರ್ಯಾಂಡಿಂಗ್ ಮತ್ತು ಬ್ರ್ಯಾಂಡ್‌ಗಳನ್ನು ಆಯ್ಕೆ ಮಾಡುವ ಸ್ವತಂತ್ರ ಸಂಸ್ಥೆ 'ಸೂಪರ್‌ಬ್ರ್ಯಾಂಡ್ಸ್' ನಡೆಸಿದ ಸಮೀಕ್ಷೆಯಲ್ಲಿ 'ಒನ್‌ಪ್ಲಸ್' ಕಂಪೆನಿ ಭಾರತದ 'ಸೂಪರ್‌ ಬ್ರ್ಯಾಂಡ್' ಆಗಿ ಹೊರಹೊಮ್ಮಿದೆ. ದೊಡ್ಡ ದೊಡ್ಡ ಕಂಪೆನಿಗಳನ್ನು ಹಿಂದಿಕ್ಕಿ ಭಾರತದ ಸೂಪರ್‌ ಬ್ರ್ಯಾಂಡ್ ಆಗಿ 'ಒನ್‌ಪ್ಲಸ್' ಆಶ್ಚರ್ಯಮೂಡಿಸಿದೆ.

'ಒನ್‌ಪ್ಲಸ್' ಪಾಲಿಗೆ ಭಾರತದ 'ಸೂಪರ್‌ ಬ್ರ್ಯಾಂಡ್' ಕಿರೀಟ!

ಹೌದು, ವಿಶ್ವದಾದ್ಯಂತ ಬ್ರ್ಯಾಂಡಿಂಗ್ ಗುರುತಿಸುವಲ್ಲಿ ಹೆಸರಾಗಿರುವ ಸೂಪರ್‌ ಬ್ರ್ಯಾಂಡ್ಸ್ ನಡೆಸಿದ ಸಮೀಕ್ಷೆಯಲ್ಲಿ ಇಂತಹದೊಂದು ರಿಪೋರ್ಟ್ ಹೊರಬಿದ್ದಿದೆ. ಸೂಪರ್‌ ಬ್ರ್ಯಾಂಡ್ಸ್ 2019ರ ವರ್ಷದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಒನ್‌ಪ್ಲಸ್ ಕಂಪೆನಿಯು ಈ ವರ್ಷ ಹೆಚ್ಚಿನ ಸರಾಸರಿ ಗ್ರಾಹಕ ಸ್ಕೋರ್ ಅನ್ನು ಸಾಧಿಸಿದೆ. ಇತರ ಎಲ್ಲಾ ವಿಭಾಗಗಳ ಬ್ರಾಂಡ್‌ಗಳು ಸ್ವೀಕರಿಸಿದ ಸ್ಕೋರ್‌ಗಳಿಗಿಂತ ಒನ್‌ಪ್ಲಸ್ ಬ್ರ್ಯಾಂಡ್ ಹೆಚ್ಚು ಸ್ಕೋರ್ ಪಡೆದಿದೆ. ಈ ಮೂಲಕ 2019ರ ಸೂಪರ್‌ಬ್ರಾಂಡ್ ಎಂದು ಒನ್‌ಪ್ಲಸ್ ಕಂಪೆನಿಯನ್ನು ಗುರುತಿಸಲಾಗಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಒನ್‌ಪ್ಲಸ್ ಇಂಡಿಯಾ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್‌ವಾಲ್ ಅವರು, 2019ನೇ ಸಾಲಿನ ಸೂಪರ್‌ಬ್ರ್ಯಾಂಡ್ ಆಗಿ ಒನ್‌ಪ್ಲಸ್ ಕಂಪೆನಿಯು ಆಯ್ಕೆಯಾಗಿರುವ ಬಗ್ಗೆ ನಮಗೆ ಅತೀವ ಸಂತಸವಾಗಿದೆ ಎಂದು ಹೇಳಿದ್ದಾರೆ. ಇದು ನಮ್ಮ ಉತ್ಪನ್ನಗಳ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಯ ಪ್ರತೀಕ. ಈ ಪ್ರತಿಷ್ಠಿತ ಸಾಧನೆಗೆ ನೆರವಾಗಿರುವ ನಮ್ಮೆಲ್ಲಾ ಸಮುದಾಯಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಹೇಳುವ ಮೂಲಕ ಅಗರ್‌ವಾಲ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

'ಒನ್‌ಪ್ಲಸ್' ಪಾಲಿಗೆ ಭಾರತದ 'ಸೂಪರ್‌ ಬ್ರ್ಯಾಂಡ್' ಕಿರೀಟ!

ಒನ್‌ಪ್ಲಸ್ ಕಂಪೆನಿ ಪ್ರಾರಂಭಿಸಿದಾಗಿನಿಂದ ತನ್ನ ಗ್ರಾಹಕರಿಗೆ ತಮ್ಮ ಡಿವೈಸ್‌ನಲ್ಲಿ ಅತ್ಯುತ್ತಮವಾದ ಅನುಭವವನ್ನು ನೀಡಲು ಬದ್ಧತೆಯನ್ನು ತೋರಿಸುತ್ತಾ ಬಂದಿದೆ. ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೂರು ವರ್ಷದ ನಂತರವೂ ಗ್ರಾಹಕರು ತಮ್ಮ ಒನ್‌ಪ್ಲಸ್ ಡಿವೈಸ್‌ಗಳಲ್ಲಿ ಸಾಫ್ಟ್‌ವೇರ್ ಮತ್ತು ಸೆಕ್ಯೂರಿಟಿ ಅಪ್‌ಡೇಟ್‌ಗಳನ್ನು ಪಡೆಯಬಹುದಾಗಿದೆ. ಈ ಮೂಲಕ ಗ್ರಾಹಕರು ಹೊಸ ಒನ್‌ಪ್ಲಸ್ ಡಿವೈಸ್‌ಗಳ ಅನುಭವವನ್ನು ಪಡೆಯಲಿದ್ದಾರೆ ಎಂದು ವಿಕಾಸ್ ಅಗರ್‌ವಾಲ್ ಅವರು ತಿಳಿಸಿದ್ದಾರೆ.

ಅಮೆಜಾನಿನಲ್ಲಿ ವಂಚಕನ ಬೇಕಾಬಿಟ್ಟಿ ಶಾಪಿಂಗ್: ಬಿಲ್ ಮಾತ್ರ ಮತ್ತೊಬ್ಬನಿಗೆ!ಅಮೆಜಾನಿನಲ್ಲಿ ವಂಚಕನ ಬೇಕಾಬಿಟ್ಟಿ ಶಾಪಿಂಗ್: ಬಿಲ್ ಮಾತ್ರ ಮತ್ತೊಬ್ಬನಿಗೆ!

ಆಪಲ್‌ನ ಗುಣಮಟ್ಟ ಇರುವ ಫೋನ್ ಮತ್ತು ಅದರಲ್ಲಿ ಆಂಡ್ರಾಯ್ಡ್ ತಂತ್ರಾಂಶ ಎರಡೂ ಬೇಕಿರುವ ಗ್ರಾಹಕನನ್ನು ಹುಡುಕಿ ಹೊರಟಿದ್ದು ಒನ್‌ಪ್ಲಸ್ ಕಂಪೆನಿ. ಈ ಕಂಪೆನಿಯನ್ನು ಹುಟ್ಟಿಹಾಕಿದ್ದು ಕಾರ್ಲ್‌ ಮತ್ತು ಪೀಟ್ ಲೌ ಎಂಬ ಇಬ್ಬರು ಯುವಕರು. ಎಂಪಿ3ಗಳನ್ನು ಅಂತರ್ಜಾಲದಲ್ಲಿ ಮಾರಿ ದುಡ್ಡು ಮಾಡುತ್ತಿದ್ದ ಕಾರ್ಲ್‌ ಮತ್ತು ಓಪೋ ಮೊಬೈಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೀಟ್ ಲೌ ಅವರು ಸೇರಿ ಈ ಕಂಪೆನಿಗೆ ಅಡಿಪಾಯ ಹಾಕಿದರು. ಇದಾದ ನಂತರ ಒನ್‌ಪ್ಲಸ್ ಕಂಪೆನಿ ಸಾಧಿಸಿದ ಸಾಧನೆಗಳಿಗೆ ಇದು ಮತ್ತೊಂದು ಗರಿ.!

Best Mobiles in India

English summary
OnePlus, the leading premium smartphone maker, has been recognized as a Superbrand for 2019 by Superbrands India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X