ಶಿಯೋಮಿಯಿಂದ ಭಾರೀ ಮೋಸ?..ಅಪಾಯಕಾರಿ ಫೋನ್‌ಗಳ ಬಗ್ಗೆ ಶಾಕಿಂಗ್ ಪ್ರತಿಕ್ರಿಯೆ!

|

ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ಗಳ ಮತ್ತು ಅತೀ ಹೆಚ್ಚು ರೇಡಿಯೇಷನ್ ಹೊಂದಿರುವ ಮೊಬೈಲ್​ಗಳ ಪಟ್ಟಿ ಬಿಡುಗಡೆ ಮಾಡಿದ ನಂತರ ಶಿಯೋಮಿ ಕಂಪೆನಿಗೆ ಸಂಕಷ್ಟ ಶುರುವಾಗಿದೆ. ಭಾರತದ ಅತ್ಯುತ್ತಮ ಮೊಬೈಲ್ ಮಾರಾಟಗಾರ ಎಂದು ಖ್ಯಾತಿ ಪಡೆದಿರುವ ಶಿಯೋಮಿಯ ನಾಲ್ಕು ಸ್ಮಾರ್ಟ್‌ಪೋನ್‌ಗಳು ಪಟ್ಟಿಯಲ್ಲಿರುವ ಸುದ್ದಿ ವೈರಲ್ ಆದ ನಂತರ ಶಿಯೋಮಿ ಕಂಪೆನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ಶಿಯೋಮಿ ಕಂಪೆನಿಯ 'ಮಿ ಎ1' ಮೊಬೈಲ್​ 1.75 ಪ್ರಯಾಣದ ರೇಡಿಯೇಷನ್​ ಬಿಡುಗಡೆ ಮಾಡುವ ಮೂಲಕ ಈ ಪಟ್ಟಿಯ ಅತ್ಯಂತ ಅಪಾಯಕಾರಿ ಫೋನ್​ ಎನಿಸಿಕೊಂಡ ನಂತರ ಶಿಯೋಮಿ ಕಂಪೆನಿ ಹೆದರಿದೆ. ಹಾಗಾಗಿ, ಇದಕ್ಕೆ ಪ್ರತಿಕ್ರಿಯಿಸಿರುವ ಕಂಪೆನಿಯು, 'ತಾನು ಭಾರತದಲ್ಲಿ ಮಾರಲ್ಪಡುತ್ತಿರುವ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ನಿರ್ದಿಷ್ಟ ಹೀರಿಕೊಳ್ಳುವ ದರ (ಎಸ್ಎಆರ್) ರೇಟಿಂಗ್‌ ಅನ್ನು ಹೊಂದಿದ್ದು, ಭಾರತದಲ್ಲಿ ಇದಕ್ಕೆ ಅನ್ವಯವಾಗುವ ಗರಿಷ್ಠ ಮಿತಿಗಳಲ್ಲಿದೆ' ಎಂದು ಹೇಳಿಕೊಂಡಿರುವುದು ವರದಿಯಾಗಿದೆ.

ಶಿಯೋಮಿಯಿಂದ ಭಾರೀ ಮೋಸ?..ಅಪಾಯಕಾರಿ ಫೋನ್‌ಗಳ ಬಗ್ಗೆ ಶಾಕಿಂಗ್ ಪ್ರತಿಕ್ರಿಯೆ!

ಭಾರತದಲ್ಲಿ ಮಾರಾಟವಾದ ಎಲ್ಲಾ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಎಸ್ಎಆರ್ ಮೌಲ್ಯಗಳಿಗೆ ಕಾನೂನುಗಳನ್ನು ಅನುಸರಿಸುತ್ತವೆ ಮತ್ತು ಮಿತಿಯ ಅಡಿಯಲ್ಲಿವೆ. ಶಿಯೋಮಿ ಮಿ ಎ1 ಭಾರತದಲ್ಲಿ 1.26 W / kg (ಹೆಡ್) ಮತ್ತು 0.17 W / kg (ದೇಹ)ದ SAR ಮೌಲ್ಯವನ್ನು ಹೊಂದಿರುವುದಾಗಿ ಕಂಪೆನಿ ತಿಳಿಸಿದೆ. ಹಾಗಾದರೆ, ಏನಿದು ಅತೀ ಹೆಚ್ಚು ರೇಡಿಯೇಷನ್ ಶಾಕಿಂಗ್ ಸುದ್ದಿ?, ಶಿಯೋಮಿಯ 'ಮಿ ಎ1' ಸ್ಮಾರ್ಟ್‌ಪೋನ್ ಏಕೆ ಅಪಾಯಕಾರಿ ಫೋನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ವಿಕಿರಣ ಅಪಾಯಕಾರಿ ಫೋನ್‌ಗಳ ಪಟ್ಟಿ ಬಿಡುಗಡೆ!

ವಿಕಿರಣ ಅಪಾಯಕಾರಿ ಫೋನ್‌ಗಳ ಪಟ್ಟಿ ಬಿಡುಗಡೆ!

ಜರ್ಮನ್ ಫೆಡರಲ್ ಆಫೀಸ್ ಫರ್ ರೇಡಿಯೇಷನ್ ಪ್ರೊಟೆಕ್ಷನ್ ಕಂಪೆನಿಯು ಇತ್ತಿಚಿಗೆ ಅತಿ ಹೆಚ್ಚು ವಿಕಿರಣ ಸೂಸುವ ಟಾಪ್ 10 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಪಾಯಕಾರಿ ಎಂದು ಹೇಳಿರುವುದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭಯ ಮೂಡಿಸಿತ್ತು. ಈ ಪಟ್ಟಿಯಲ್ಲಿ ಆಪಲ್, ಒನ್‌ಪ್ಲಸ್ ಸೇರಿದಂತೆ ಶಿಯೋಮಿಯ ಮೂರು ಸ್ಮಾರ್ಟ್‌ಫೋನ್‌ಗಳು ಅಪಾಯಕಾರಿ ಟಾಪ್ 10 ಫೋನ್‌ಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದವು.

ಶಿಯೋಮಿ ಹೇಳಿದ್ದೇನು?

ಶಿಯೋಮಿ ಹೇಳಿದ್ದೇನು?

ಮೊದಲೇ ಹೇಳಿದಂತೆ, ಶಿಯೋಮಿ ತನ್ನೆಲ್ಲಾ ಸ್ಮಾರ್ಟ್‌ಫೋನ್‌ಗಳು 'ಎಸ್ಎಆರ್' ಮೌಲ್ಯಗಳಿಗೆ ಕಾನೂನುಗಳನ್ನು ಅನುಸರಿಸುತ್ತವೆ ಮತ್ತು ಮಿತಿಯ ಅಡಿಯಲ್ಲಿವೆ ಎಂದು ಹೇಳಿದೆ. ಅಂದರೆ, ಭಾರತ ಸರ್ಕಾರ ದೇಶದಲ್ಲಿ ಮೊಬೈಲ್‌ಗಳನ್ನು ಮಾರಲು ನಿಗದಿಪಡಿಸಿರುವ ವಿಕಿರಣದ 'ನಿರ್ದಿಷ್ಟ ಹೀರಿಕೊಳ್ಳುವ ದರ' (ಎಸ್ಎಆರ್)ದ ಒಳಗೆ ಇದ್ದು ಕಾನೂನುಗಳನ್ನು ಅನುಸರಿಸುತ್ತವೆ ಎಂದು ಹೇಳಿದೆ. ಅಂದರೆ, ತನ್ನ ಸ್ಮಾರ್ಟ್‌ಪೋನ್‌ಗಳು ದೆಶದಲ್ಲಿ ಅಪಾಯಕಾರಿಯಲ್ಲ ಎಂದು ಹೇಳಿಕೊಂಡಿದೆ.

ಎಸ್ಎಆರ್ ಮೌಲ್ಯ ಎಂದರೇನು?

ಎಸ್ಎಆರ್ ಮೌಲ್ಯ ಎಂದರೇನು?

ಮೊಬೈಲ್‌ಗಳು ಹೊರಸುಸುವ ವಿಕಿರಣ ಪ್ರಮಾಣವನ್ನು 'ಪ್ರತಿ ಕಿಲೋಗ್ರಾಮ್‌ಗೆ ವ್ಯಾಟ್' ಅಳತೆಯಲ್ಲಿ ಲೆಕ್ಕ ಹಾಕಲಾಗುತ್ತದೆ. ಇದನ್ನು ಕಿಲೋಗ್ರಾಂಗೆ (W / kg) ವ್ಯಾಟ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಕಡಿಮೆ ಅಂಕಗಳು ಬಂದರೆ ಸ್ಮಾರ್ಟ್‌ಫೋನ್ ಕಡಿಮೆ ವಿಕಿರಣ ಹೊರಸೂಸುವಿಕೆಯನ್ನು ಅರ್ಥೈಸುತ್ತದೆ. ಮಾನವನ ಕಿವಿ ಮತ್ತು ತಲೆಯ ಹಾಗೂ ನಡೆಯುತ್ತದೆ ಮಾನವ ದೇಹದಿಂದ 1.5 ಸೆಂಟಿಮೀಟರ್ ದೂರದಲ್ಲಿ ಇದನ್ನು ಲೆಕ್ಕಹಾಕಲಾಗುತ್ತದೆ.

ಎಸ್ಎಆರ್ ಮೌಲ್ಯ ಎಷ್ಟಿರಬೇಕು?

ಎಸ್ಎಆರ್ ಮೌಲ್ಯ ಎಷ್ಟಿರಬೇಕು?

ಪ್ರತಿಯೊಂದು ದೇಶವೂ ಸಹ ತನ್ನ ದೇಶದಲ್ಲಿ ಮಾರಾಟವಾಗುವ ಮೊಬೈಲ್ ಅಥವಾ ಸ್ಮಾರ್ಟ್‌ಫೋನ್‌ಗಳ ವಿಕಿರಣದ 'ನಿರ್ದಿಷ್ಟ ಹೀರಿಕೊಳ್ಳುವ ದರ' (ಎಸ್ಎಆರ್) ಮೌಲ್ಯವನ್ನು ಗರಿಷ್ಠ ಮಿತಿಯನ್ನು ಹೇರಿರುತ್ತವೆ. 2012 ರಲ್ಲಿ ಭಾರತದಲ್ಲಿ ದೂರಸಂಪರ್ಕ ಇಲಾಖೆಯು (ಡಿಒಟಿ) ಈ ಎಸ್ಎಆರ್ ಮಾರ್ಗದರ್ಶಿಗಳನ್ನು 1.6 W / kg ನಷ್ಟು ಗರಿಷ್ಠ ನಿಗಧಿಪಡಿಸಿದೆ. ಆದರೆ, ರಿಪೋರ್ಟ್ ತಯಾರಿಸಿರುವ ಕಂಪೆನಿಯ ದೇಶ ಜರ್ಮನ್‌ನಲ್ಲಿ ಇದರ ಪ್ರಮಾಣ ಗರಿಷ್ಠ 1.0 W / kg ಮೀರಬಾರದು ಎಂದು ಅಲ್ಲಿನ ಸರ್ಕಾರದ ಪ್ರತಿನಿಧಿಗಳು ತಿಳಿಸಿದ್ದಾರೆ.

ರಿಪೋರ್ಟ್ ಪ್ರಕಾರ ರೇಡಿಯೇಷನ್ ಮೌಲ್ಯ!

ರಿಪೋರ್ಟ್ ಪ್ರಕಾರ ರೇಡಿಯೇಷನ್ ಮೌಲ್ಯ!

ಜರ್ಮನ್ ಫೆಡರಲ್ ಆಫೀಸ್ ಫರ್ ರೇಡಿಯೇಷನ್ ಪ್ರೊಟೆಕ್ಷನ್ ಕಂಪೆನಿಯ ರಿಪೋರ್ಟ್ ಪ್ರಕಾರ, ಶಿಯೋಮಿ ಎ1 ಸ್ಮಾರ್ಟ್‌ಫೋನ್ ಪ್ರತಿ ಕಿಲೋಗ್ರಾಂಗೆ 1.75 ವ್ಯಾಟ್‌ಗಳಷ್ಟು ಅಪಾಯಕಾರಿ ವಿಕಿರಣವನ್ನು ಸೂಸುತ್ತಿದೆ ಎಂದು ಹೇಳಿದೆ. ಒನ್ನ್‌ಪ್ಲಸ್ 5 ಟಿ (1.68), ಶಿಯೋಮಿ ಮಿ ಮ್ಯಾಕ್ಸ್ 3 (1.58) ಮತ್ತು ಒನ್‌ಪ್ಲಸ್ 6 ಟಿ (1.55). ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್ 1.39 ವ್ಯಾಟ್ ವಿಕಿರಣವನ್ನು ಸೂಸುತ್ತಿವೆ. ಇದು ಭಾರತದ ಗರಿಷ್ಠ ಎಸ್ಎಆರ್ ಮಾರ್ಗದರ್ಶಿಗಳನ್ನು (1.6 W / kg) ಮೀರುತ್ತಿವೆ.

ರಿಪೋರ್ಟ್ ಅನ್ನು ಒಪ್ಪದ ಶಿಯೋಮಿ!

ರಿಪೋರ್ಟ್ ಅನ್ನು ಒಪ್ಪದ ಶಿಯೋಮಿ!

ಜರ್ಮನ್ ಫೆಡರಲ್ ಆಫೀಸ್ ಫರ್ ರೇಡಿಯೇಷನ್ ಪ್ರೊಟೆಕ್ಷನ್ ಕಂಪೆನಿಯ ರಿಪೋರ್ಟ್ ಹೇಳಿರುವಂತೆ ಶಿಯೋಮಿ ಎ1 ಸ್ಮಾರ್ಟ್‌ಫೋನ್ ಪ್ರತಿ ಕಿಲೋಗ್ರಾಂಗೆ 1.75 ವ್ಯಾಟ್‌ಗಳಷ್ಟು ಅಪಾಯಕಾರಿ ವಿಕಿರಣವನ್ನು ಸೂಸುತ್ತಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಭಾರತದಲ್ಲಿ 'ಮಿ ಎ1' ಸ್ಮಾರ್ಟ್‌ಫೋನ್ 1.26 W / kg (ಹೆಡ್) ಮತ್ತು 0.17 W / kg (ದೇಹ)ದ ಎಸ್ಎಆರ್ ಮೌಲ್ಯವನ್ನು ಹೊಂದಿದೆ ಎಂದು ವಾದಿಸಿದೆ. ಜೊತೆಗೆ ಜರ್ಮನಿಯಲ್ಲಿ ಇದರ ಮಿತಿ 2.0 W / kg ಆಗಿದೆ ಎಂದು ಹೇಳಿ ನಗೆಪಾಟಲಿಗೆ ಗುರಿಯಾಗಿದೆ.

ಹೆಚ್ಚು ವಿಕಿರಣ ಹೊರಸೂಸುವ ಅಪಾಯಕಾರಿ ಫೋನ್‌ಗಳ ಲಿಸ್ಟ್!..ಶಿಯೋಮಿಯ 3 ಫೋನ್‌ಗಳು!!

ಹೆಚ್ಚು ವಿಕಿರಣ ಹೊರಸೂಸುವ ಅಪಾಯಕಾರಿ ಫೋನ್‌ಗಳ ಲಿಸ್ಟ್!..ಶಿಯೋಮಿಯ 3 ಫೋನ್‌ಗಳು!!

ಮೊಬೈಲ್‌ಗಳಿಂದ ಹೊರಹೊಮ್ಮುವ ವಿಕಿರಣಗಳಿಂದ ಮಾನವ ಆರೋಗ್ಯ ಹದಗೆಡುತ್ತದೆ ಎಂಬ ಆತಂಕಕಾರಿ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ, ಇತ್ತೀಚಿನ ರಿಪೋರ್ಟ್ ಒಂದು ಅತಿ ಹೆಚ್ಚು ವಿಕಿರಣ ಸೂಸುವ ಟಾಪ್ 10 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಪಾಯಕಾರಿ ಎಂದು ಹೇಳಿರುವುದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭಯ ಮೂಡಿಸಿದೆ.

ಹೌದು, ಸ್ಮಾರ್ಟ್‌ಫೋನ್‌ಗಳು ಹೊರಸೂಸುತ್ತಿರುವ ವಿಕಿರಣದ ಪ್ರಮಾಣ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಜರ್ಮನ್ ಫೆಡರಲ್ ಆಫೀಸ್ ಫರ್ ರೇಡಿಯೇಷನ್ ಪ್ರೊಟೆಕ್ಷನ್ ಕಂಪೆನಿ ಬಿಡುಗಡೆ ಮಾಡಿರುವ ಒಂದು ವರದಿ ಬೆಚ್ಚಿ ಬೀಳಿಸುವಂತಿದೆ. ಶಿಯೋಮಿ, ಒನ್‌ಪ್ಲಸ್‌ ಮತ್ತು ಆಪಲ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಪಾಯಕಾರಿ ಎಂದು ರಿಪೋರ್ಟ್ ಹೇಳಿದ್ದು, ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್ ಒಂದು ಮೊದಲ ಸ್ಥಾನದಲ್ಲಿದೆ.

ಮೊಬೈಲ್ ಕ್ಯಾಮರಾ ಹೇಗಿದೆ?, ಸೌಂಡ್ ಕ್ವಾಲಿಟಿ ಚೆನ್ನಗಿದೆಯಾ?, ಇಂಟರ್ನೆಟ್ ಸ್ಪೀಡ್ ಎಷ್ಟಿದೆ?, ಮೆಮೊರಿ ಎಷ್ಟು ಎಂಬುದೆಲ್ಲದರ ಮೇಲೆ ಹೆಚ್ಚಿನ ಗಮನ ನೀಡುವ ಮೊಬೈಲ್ ಬಳಕೆದಾರರು ಇವೆಲ್ಲವನ್ನು ಹೊರತುಪಡಿಸಿ ಈಗ ಮತ್ತೊಂದು ವಿಚಾರವನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗಾದರೆ, ರೇಡಿಯೇಷನ್ ಪ್ರೊಟೆಕ್ಷನ್ ಕಂಪೆನಿ ನೀಡಿರುವ ಪಟ್ಟಿಯಂತೆ ಯಾವ ಸ್ಮಾರ್ಟ್‌ಫೋನ್ ಅತಿ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುತ್ತದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸೋನಿ ಎಕ್ಸ್‌ಪೀರಿಯಾ ಎಕ್ಸ್‌ಝೆಡ್ 1 ಕಾಂಪ್ಯಾಕ್ಟ್

ಸೋನಿ ಎಕ್ಸ್‌ಪೀರಿಯಾ ಎಕ್ಸ್‌ಝೆಡ್ 1 ಕಾಂಪ್ಯಾಕ್ಟ್

ಆಗಸ್ಟ್ 2017 ರಲ್ಲಿ ಸೋಮಿ ಕಂಪೆನಿ ಬಿಡುಗಡೆ ಮಾಡಿದ್ದ 'ಎಕ್ಸ್‌ಪೀರಿಯಾ ಎಕ್ಸ್‌ಝೆಡ್ 1' ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.

ಐಫೋನ್ 7

ಐಫೋನ್ 7

ಸೆಪ್ಟೆಂಬರ್ 2016 ರಲ್ಲಿ ಆಪಲ್ ಬಿಡುಗಡೆ ಮಾಡಿದ್ದ ಐಫೋನ್ 7 ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಒನ್‌ಪ್ಲಸ್ 5

ಒನ್‌ಪ್ಲಸ್ 5

2017ನೇ ಜೂನ್ ತಿಂಗಳಿನಲ್ಲಿ ಒನ್‌ಪ್ಲಸ್ ಬಿಡುಗಡೆ ಮಾಡಿದ್ದ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್:

ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್:

ಕಳೆದ ವರ್ಷ ಗೂಗಲ್ ಬಿಡುಗಡೆ ಮಾಡಿದ್ದ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಶಿಯೋಮಿ ಮಿ ಮಿಕ್ಸ್ 3

ಶಿಯೋಮಿ ಮಿ ಮಿಕ್ಸ್ 3

ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ್ದ ಶಿಯೋಮಿ ಮಿ ಮಿಕ್ಸ್ 3 ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಹೆಚ್‌ಟಿಸಿ ಯು12 ಲೈಫ್

ಹೆಚ್‌ಟಿಸಿ ಯು12 ಲೈಫ್

ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ಅಲ್ಟ್ರಾ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಹೆಚ್‌ಟಿಸಿ ಯು12 ಲೈಫ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಒನ್‌ಪ್ಲಸ್ 6T:

ಒನ್‌ಪ್ಲಸ್ 6T:

ಭಾರತದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಹೆಚ್ಚು ಮಾರಾಟವಾದ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

'ಶಿಯೋಮಿ ಮಿ ಮ್ಯಾಕ್ಸ್ 3'

'ಶಿಯೋಮಿ ಮಿ ಮ್ಯಾಕ್ಸ್ 3'

ಶಿಯೋಮಿ 2018ನೇ ಜುಲೈನಲ್ಲಿ ಬಿಡುಗಡೆ ಮಾಡಿದ 'ಶಿಯೋಮಿ ಮಿ ಮ್ಯಾಕ್ಸ್ 3' ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಒನ್‌ಪ್ಲಸ್ 5T!

ಒನ್‌ಪ್ಲಸ್ 5T!

2017ರ ನವೆಂಬರ್‌ನಲ್ಲಿ ಒನ್‌ಪ್ಲಸ್ ಬಿಡುಗಡೆ ಮಾಡಿದ್ದ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಫೋನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.

ಶಿಯೋಮಿ ಮಿ A1

ಶಿಯೋಮಿ ಮಿ A1

ಶಿಯೋಮಿ 2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ 'ಶಿಯೋಮಿ ಮಿ A1' ​​ಸ್ಮಾರ್ಟ್‌ಫೋನ್ ಅತಿಹೆಚ್ಚು ವಿಕಿರಣ ಸೂಸುವ ಅಪಾಯಕಾರಿ ಮೊಬೈಲ್ ಆಗಿದೆ.

Best Mobiles in India

English summary
Smartphone Radiation Report: Xiaomi Says All Phones Sold in India Comply With Local SAR Rating Guidelines

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X