ಓಎಲ್‌ಎಕ್ಸ್‌, ಕ್ವಿಕ್ಕರ್‌ನಲ್ಲಿ ವಸ್ತು ಮಾರಾಟ ಮಾಡುವ ಮೊದಲು ಎಚ್ಚರ..!

By Gizbot Bureau
|

ಓಎಲ್‌ಎಕ್ಸ್‌, ಕ್ವಿಕ್ಕರ್‌ಮತ್ತು ಇತರ ವರ್ಗೀಕೃತ ಜಾಹೀರಾತು ಪ್ಲಾಟ್‌ಫಾರ್ಮ್‌ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು ಹಣವನ್ನು ಕಳೆದುಕೊಂಡರೆಂದರೆ ನಂಬಲು ಸಾಧ್ಯವೇ. ಹೌದು, ನಂಬಲೇಬೇಕು. ಈ ರೀತಿಯ ವಂಚನೆ ಮಹಾನಗರಗಳಲ್ಲಿ ನಡೆಯುತ್ತಿದ್ದು, ಸ್ಮಾರ್ಟ್‌ ಎಂದೆನಿಸಿಕೊಳ್ಳುವ ಸುಶಿಕ್ಷಿತ ಜನರು ಕೂಡ ವಂಚನೆಯ ಜಾಲಕ್ಕೆ ಬಲಿಯಾಗುತ್ತಿದ್ದಾರೆ.

ಓಎಲ್‌ಎಕ್ಸ್‌, ಕ್ವಿಕ್ಕರ್‌ನಲ್ಲಿ ವಸ್ತು ಮಾರಾಟ ಮಾಡುವ ಮೊದಲು ಎಚ್ಚರ..!

ಹೊಸ ಆಪ್‌ ಆಧಾರಿತ ಪಾವತಿ ಸೇವೆಗಳು ಮತ್ತು ಯುಪಿಐ ಸೇವೆಗಳು ಮೋಸಗಾರನಿಗೆ ಹೇಗೆ ಸಹಾಯ ಮಾಡುತ್ತಿವೆ ಎಂಬುದು ಸಾಮಾನ್ಯ ಜನರ ಅರಿವಿಗೆ ಬರುತ್ತಿಲ್ಲ. ಹಾಗಾಗಿ, ಓಎಲ್‌ಎಕ್ಸ್‌, ಕ್ವಿಕ್ಕರ್‌ ಮತ್ತು ಇತರ ವರ್ಗೀಕೃತ ಜಾಹೀರಾತು ಪ್ಲಾಟ್‌ಫಾರ್ಮ್‌ಗಳಲ್ಲಿ ಏನನ್ನಾದರೂ ಮಾರಾಟ ಮಾಡುವ ಮೊದಲು ಹೊಸ ಹಗರಣದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ತಕ್ಷಣ ಪ್ರತಿಕ್ರಿಯೆ

ತಕ್ಷಣ ಪ್ರತಿಕ್ರಿಯೆ

ನೀವು ಓಎಲ್‌ಎಕ್ಸ್‌, ಕ್ವಿಕ್ಕರ್‌ಮತ್ತು ಇತರ ವರ್ಗೀಕೃತ ಜಾಹೀರಾತು ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಲು ಬಯಸುವ ವಸ್ತುವಿನ (ಸೈಕಲ್, ಗಿಟಾರ್, ಪೀಠೋಪಕರಣಗಳು, ಇತ್ಯಾದಿ) ಜಾಹೀರಾತನ್ನು ನೀವು ಪೋಸ್ಟ್ ಮಾಡಿದ ತಕ್ಷಣ ಪ್ರತಿಕ್ರಿಯೆಯನ್ನು ಪಡೆಯುತ್ತಿರಿ. ನಿಮ್ಮ ಮೊಬೈಲ್ ಸಂಖ್ಯೆಗೆ ಆಸಕ್ತ ಖರೀದಿದಾರರಿಂದ ತಕ್ಷಣ ಕರೆ ಬರುತ್ತದೆ.

ಚೌಕಾಶಿ ಮಾಡಲ್ಲ

ಚೌಕಾಶಿ ಮಾಡಲ್ಲ

ಓಎಲ್‌ಎಕ್ಸ್‌ ಮತ್ತು ಕ್ವಿಕ್ಕರ್‌ನಲ್ಲಿ ವಸ್ತುಗಳನ್ನು ಖರೀದಿಸುವ ಗ್ರಾಹಕರು ಸಾಮಾನ್ಯವಾಗಿ ಚೌಕಾಶಿ ಮಾಡುತ್ತಾರೆ. ಆದರೆ, ಈ ಸಂದರ್ಭದಲ್ಲಿ ನಿಮಗೆ ಕರೆ ಮಾಡಿದವರು ಚೌಕಾಶಿ ಮಾಡಲ್ಲ ಮತ್ತು ನಿಮ್ಮ ಉತ್ಪನ್ನಕ್ಕೆ ನೀವು ವಿಧಿಸಿದ ದರಕ್ಕೆ ವಸ್ತು ಖರೀದಿಸಲು ಒಪ್ಪುತ್ತಾರೆ.

ಹೆಚ್ಚಿನ ಬೆಲೆಯ ಆಸೆ

ಹೆಚ್ಚಿನ ಬೆಲೆಯ ಆಸೆ

ಕೆಲವು ಉತ್ಪನ್ನಗಳ ಖರೀದಿಗಾಗಿ ನಿಮಗೆ ಹಲವಾರು ಖರೀದಿದಾರರಿಂದ ಕರೆಗಳನ್ನು ಪಡೆಯುತ್ತೀರಿ. ಅವರು ಉತ್ಪನ್ನದ ನಿರ್ದಿಷ್ಟ ಮಾರಾಟ ಬೆಲೆಯನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿಸಿ ನಿಮಗೆ ಹೆಚ್ಚಿನ ಬೆಲೆಯ ಆಸೆ ಹುಟ್ಟಿಸುತ್ತಾರೆ. ಚೌಕಾಶಿ ಮಾಡದಿದ್ದರೆ ಅಥವಾ ಹೆಚ್ಚಿನ ಮೊತ್ತ ಪಾವತಿಸಲು ಸಿದ್ಧರಾಗಿದ್ದರೆ ನೀವು ತಕ್ಷಣ ಎಚ್ಚೆತ್ತುಕೊಳ್ಳುವುದು ಅವಶ್ಯಕ.

ಯುಪಿಐನಿಂದ ವಂಚನೆ ಸುಲಭ

ಯುಪಿಐನಿಂದ ವಂಚನೆ ಸುಲಭ

ಈ ರೀತಿಯ ಸಂಪೂರ್ಣ ವಂಚನೆ ಯುಪಿಐನಲ್ಲಿ ನಡೆಯುತ್ತದೆ. ನಿಮ್ಮ ವಸ್ತುವನ್ನು ಖರೀದಿಸುತ್ತೇನೆ ಎಂದು ಒಪ್ಪಿಕೊಂಡವರು ಪೂರ್ಣ ಮೊತ್ತ ಅಥವಾ ಸ್ವಲ್ಪ ಬುಕಿಂಗ್ ಹಣವನ್ನು ಗೂಗಲ್ ಪೇ, ಫೋನ್‌ಪೇ ಅಥವಾ ಇತರ ಯುಪಿಐ ಆಪ್‌ಗಳ ಮೂಲಕ ಕಳುಹಿಸುತ್ತೇನೆ ಎಂದು ಹೇಳುತ್ತಾರೆ.

ರಿಕ್ವೆಸ್ಟ್‌ ಮನಿಯಿಂದ ವಂಚನೆ

ರಿಕ್ವೆಸ್ಟ್‌ ಮನಿಯಿಂದ ವಂಚನೆ

ಹಣ ವರ್ಗಾಯಿಸುವ ಬದಲು ನಿಮ್ಮಿಂದ ಹಣವನ್ನು ಕೇಳಲು ವಂಚಕ ಯುಪಿಐ ಆಪ್‌ಗಳಲ್ಲಿನ "ಹಣ ವಿನಂತಿ" ಆಯ್ಕೆಯನ್ನು ಬಳಸುತ್ತಾನೆ. ಇಲ್ಲಿಯೇ ಜನ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ ಎಂಬುದು ಗಮನಿಸಬೇಕಾದ ಅಂಶ. ಯುಪಿಐ ಆಪ್‌ಗಳಲ್ಲಿನ ಎಸ್‌ಎಂಎಸ್ ಸರಿಯಾಗಿ ಓದದೆ, ಜನ ಕ್ಲಿಕ್ ಮಾಡುವುದರಿಂದ ಅವರ ಖಾತೆಯಿಂದ ವಂಚಕನ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.

ಒಟಿಪಿ ಹಂಚಿಕೊಳ್ಳಬೇಡಿ

ಒಟಿಪಿ ಹಂಚಿಕೊಳ್ಳಬೇಡಿ

ವ್ಯಾಪಾರಿ ಪಾವತಿಗಳನ್ನು ಸುರಕ್ಷಿತಗೊಳಿಸಲು Paytm ಮತ್ತು ಇತರ ಯುಪಿಐ ಅಪ್ಲಿಕೇಶನ್‌ಗಳು ನಿಮಗೆ ಒಟಿಪಿಯನ್ನು ಕಳುಹಿಸುತ್ತವೆ. ಈ ಸಂದರ್ಭದಲ್ಲಿ, ವಂಚಕರು ವ್ಯಾಪಾರಿ ಖಾತೆಯನ್ನು ಬಳಸುವ ಸಾಧ್ಯತೆ ಹೆಚ್ಚಿದ್ದು, ನಿಮ್ಮ ಖಾತೆಯಿಂದ ಡೆಬಿಟ್‌ಗಾಗಿ ರಚಿಸಲಾದ ಒಟಿಪಿಯನ್ನು ಅವರು ಪಡೆಯಬಹುದು. ಯಾವುದೇ ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಖಾತೆಯಿಂದ ನೀವು ಹಣ ತೆಗೆದುಕೊಂಡಾಗ ಒಟಿಪಿ ಉತ್ಪತ್ತಿಯಾಗುತ್ತವೆ ಎಂಬುದನ್ನು ಯಾವಾಗಲೂ ತಿಳಿಯಿರಿ. ಯಾರಾದರೂ ಹಣ ವರ್ಗಾಯಿಸಿದರೆ ಅಥವಾ ನಿಮ್ಮ ಖಾತೆಗೆ ಹಣ ಸೇರಿಸಿದರೆ ಒಟಿಪಿ ಬರಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ಮುಖತಃ ಭೇಟಿ ಮಾಡಿ

ಮುಖತಃ ಭೇಟಿ ಮಾಡಿ

ಓಎಲ್‌ಎಕ್ಸ್‌ ಮತ್ತು ಕ್ವಿಕ್ಕರ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡುವಾಗ ಸುರಕ್ಷಿತವಾಗಿರಲು ಖರೀದಿದಾರರನ್ನು ಯಾವಾಗಲೂ ಮುಖತಃ ಭೇಟಿ ಮಾಡಲು ಹೇಳಿ. ಏಕೆಂದರೆ ನಿಮ್ಮ ವಸ್ತುವನ್ನು ಖರೀದಿಸುವವರು ನಿಮ್ಮನ್ನು ಅಂತಿಮವಾಗಿ ಭೇಟಿ ಮಾಡಬೇಕು. ಇನ್ನು, ಸಾಮಾನ್ಯ ಜ್ಞಾನ ಉಪಯೋಗಿಸಿ ಸಂಪೂರ್ಣವಾಗಿ ಅಗತ್ಯವಿಲ್ಲದಿದ್ದರೆ ಮೊದಲೇ ನಿಮ್ಮ ಮನೆಯ ವಿಳಾಸವನ್ನು ಖರೀದಿದಾರರಿಗೆ ಹೇಳುವುದನ್ನು ನಿರಾಕರಿಸಿ.

Best Mobiles in India

Read more about:
English summary
Buying Or Selling on Olx Or Quikr? Know These Things To Keep Out From Scam

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X