Subscribe to Gizbot

ಹೊಸ ಮಾದರಿಯಲ್ಲಿ ಕಾಣಿಸಿಕೊಂಡ ಗೂಗಲ್ ಮ್ಯಾಪ್..!

Written By: Lekhaka

ದೇಶ ವಿದೇಶದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಕೊಂಡಿರುವ ನ್ಯಾವಿಗೇಷನ್ ಆಪ್ ಗೂಗಲ್ ಮ್ಯಾಪ್ ಹೊಸ ಮಾದರಿಯಲ್ಲಿ ಕಾಣಿಸಿಕೊಂಡಿದ್ದು, ಕಡಿಮೆ RAM ಹೊಂದಿರುವ ಸ್ಮಾರ್ಟ್ ಫೋನ್ ಬಳಕೆದಾರರು ಇನ್ನು ಮುಂದೆ ಗೂಗಲ್ ಮ್ಯಾಪ್ ಅನ್ನು ಯಾವುದೇ ಅಡೆತಡೆ ಇಲ್ಲದೇ ಬಳಕೆ ಮಾಡಿಕೊಳ್ಳುವಂತೆ ಮಾಡುವುದೇ ಇದರ ಪ್ರಮುಖ ಉದ್ದೇಶವಾಗಿದೆ.

ಹೊಸ ಮಾದರಿಯಲ್ಲಿ ಕಾಣಿಸಿಕೊಂಡ ಗೂಗಲ್ ಮ್ಯಾಪ್..!

ಗೂಗಲ್ ಮ್ಯಾಪ್ ಲೈಟ್ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದು, ಗೂಗಲ್ ಮ್ಯಾಪ್ ಗೋ ಹೆಸರಿನಲ್ಲಿ ಪ್ಲೇ ಸ್ಟೋರಿನಲ್ಲಿ ಡೌನ್ ಲೋಡ್ ಮಾಡಲು ಲಭ್ಯವಿದೆ ಎನ್ನಲಾಗಿದೆ. ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳು 512 MB ಇಲ್ಲವೇ 1 GB RAM ಇರುವ ಸ್ಮಾರ್ಟ್ ಫೋನ್ ಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಈ ಗೂಗಲ್ ಮ್ಯಾಪ್ ಗೂ ಆಪ್ ಹಿಂದಿನ ಮ್ಯಾಪ್ ಗೋ ಯಾವುದೇ ವ್ಯತ್ಯಾಸ ಇರುವುದಿಲ್ಲ ಆದರೆ ಕೆಲವು ವಿಶೇಷತೆಗಳು ಕಡಿಮೆ ಇರಲಿದೆ. ಬೆಸಿಕ್ ಆಗಿ ಇರಬೇಕಾದ ಎಲ್ಲಾ ವಿಷಯಗಳು ಈ ಲೈಟ್ ಆಪ್ ನಲ್ಲೂ ಕಾಣಬಹುದಾಗಿದೆ. ಇದು ಸಹ ನಿಮ್ಮ ನ್ಯಾವಿಗೇಟರ್ ಆಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಈಗಾಗಲೇ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿ ಇರಿಸಿಕೊಂಡು ಗೂಗಲ್ ಆಪ್ ಗಳನ್ನು ನಿರ್ಮಾಣ ಮಾಡುತ್ತಿದೆ. ದೇಶದಲ್ಲಿ ಬಜೆಟ್ ಫೋನ್ ಗಳ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ಲೈಟ್ ಆಪ್ ಗಳನ್ನು ಗೂಗಲ್ ನಿರ್ಮಾಣ ಮಾಡಲು ಮುಂದಾಗಿದೆ.

ಜಿಯೋ ಕಥೆ ಬಿಡಿ!..ವಿಶ್ವಕ್ಕೆ ಉಚಿತವಾಗಿ ಇಂಟರ್‌ನೆಟ್ ನೀಡಲು ಆನ್‌ಲೈನ್‌ ದಿಗ್ಗಜರು ರೆಡಿ!!

ಶೀಘ್ರವೇ ಮಾರುಕಟ್ಟೆಗೆ ಜಿಮೇಲ್ ಗೋ, ಗೂಗಲ್ ಅಸಿಸ್ಟೆಂಟ್ ಗೋ ಹೆಸರಿನಲ್ಲಿ ಲೈಟ್ ಆಪ್ ಗಳು ಕಾಣಿಸಿಕೊಳ್ಳಲಿದ್ದು, ಇದರಿಂದಾಗಿ ಗೂಗಲ್ ಆಪ್ ಗಳನ್ನು ಜನರು ತಮ್ಮ ಬಳಿ ಯಾವುದೇ ಸ್ಮಾರ್ಟ್ ಫೋನ್ ಇದ್ದರೂ ಸಹ ಆರಾಮವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಗೂಗಲ್ ಮಾಡಿಕೊಡಲು ಮುಂದಾಗಿದೆ

English summary
Starting today, Android users can try out a new Google Maps Go app that's a lighter version of Google Maps.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot