Subscribe to Gizbot

ಮಾರುಕಟ್ಟೆಯನ್ನಾಳುತ್ತಿರುವ ಸೂಪರ್ ಬೆಸ್ಟ್ ಕ್ಯಾಮೆರಾಗಳು

Written By:

ಸ್ಮಾರ್ಟ್‌ಫೋನ್‌ಗಳಂತೆಯೇ ಕ್ಯಾಮೆರಾಗಳು ಕೂಡ ತಂತ್ರಜ್ಞಾನ ಕ್ಷೇತ್ರಕ್ಕೆ ಅಸದಳ ಕೊಡುಗೆಯನ್ನು ನೀಡಿವೆ. ಉತ್ತಮ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ದೊರೆಯುತ್ತಿದ್ದರೂ ಕ್ಯಾಮೆರಾ ಬಳಕೆದಾರರಿಗೆ ಪ್ರಯೋಜನಕಾರಿಯಾಗಬೇಕು. ಅಂತೆಯೇ ದೀರ್ಘ ಸಮಯದ ಬಾಳ್ವಿಕೆಯನ್ನು ನೀಡಬೇಕು.

ಓದಿರಿ: ಮಿಂಚಿನ ಸಂಚಾರವನ್ನುಂಟು ಮಾಡಲಿರುವ ಶ್ಯೋಮಿ ಎಮ್ಐ 4i

ಉತ್ತಮ ಫೋಟೋ ಕ್ಲಾರಿಟಿ, ಫೋಕಸ್, ಲೆನ್ಸ್ ಹೀಗೆ ಪ್ರತಿಯೊಂದು ಅಂಶ ಕೂಡ ಕ್ಯಾಮೆರಾವನ್ನು ಉತ್ತಮ ಎಂದೆನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂದಿನ ಲೇಖಣದಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ ಆಗಿರುವ ಕ್ಯಾಮೆರಾ ವಿವರಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Canon IXUS (ELPH) 160165170

ಬೆಸ್ಟ್ ಈಸಿ ಕಾಂಪ್ಯಾಕ್ಟ್ ಕ್ಯಾಮೆರಾ

ಈ ಕ್ಯಾಮೆರಾ 12x ಆಪ್ಟಿಕಲ್ ಜೂಮ್‌ನೊಂದಿಗೆ ಬಂದಿದ್ದು, IXUS 160 ಮತ್ತು IXUS 165 8 ಎಕ್ಸ್ ಆಪ್ಟಿಕಲ್ ಜೂಮ್ ಅನ್ನು ಪಡೆದುಕೊಂಡಿದೆ. ಎಲ್ಲಾ ಮೂರು ಕ್ಯಾಮೆರಾಗಳು 20 ಮಿಲಿಯನ್ ಪಿಕ್ಸೆಲ್ ಸೆನ್ಸಾರ್ ಹಾಗೂ 720p ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯಗಳನ್ನು ಪಡೆದುಕೊಂಡಿವೆ.

Ricoh WG-M1

ಬೆಸ್ಟ್ ಆಕ್ಶನ್ ಕ್ಯಾಮೆರಾ

ಹೊಸ Ricoh WG-M1 ವಿಭಿನ್ನವಾಗಿದ್ದು, ಇದರ ವಿನ್ಯಾಸಕ್ಕೆ ಎಂತವರೂ ಮರುಳಾಗಲೇಬೇಕು. ಮೇಲ್ಭಾಗದಲ್ಲಿ ಎಲ್‌ಸಿಡಿ ಸ್ಕ್ರೀನ್ ಇದ್ದು ಬಟನ್‌ಗಳನ್ನು ಬದಿಯಲ್ಲಿ ಕಾಣಬಹುದು. ಈ ಕ್ಯಾಮೆರಾದಲ್ಲಿ ಜೂಮ್ ಇಲ್ಲ ಅಲ್ಟ್ರಾ ವೈಡ್ ಆಂಗಲ್ ಅನ್ನು ಇದರಲ್ಲಿ ಕಾಣಬಹುದಾಗಿದ್ದು 160 ಡಿಗ್ರಿ ಆಂಗಲ್ ವೀಕ್ಷಣೆಯನ್ನು ಮಾಡಬಹುದಾಗಿದೆ.

ನಿಕೋನ್ ಕೂಲ್ ಪಿಕ್ಸ್ P610

ಬೆಸ್ಟ್ ಸೂಪರ್ ಜೂಮ್ ಕ್ಯಾಮೆರಾ

ನಿಕೋನ್ ಅತ್ಯಾಧುನಿಕ ಕ್ಯಾಮೆರಾ ಆಗಿದ್ದು ನಿಕೋನ್ P600 ಅನ್ನು ಇದು ಸ್ಥಾನಾಂತರಿಸುತ್ತದೆ. P610 ನಲ್ಲಿರುವ 60x ಆಪ್ಟಿಕಲ್ ಜೂಮ್ ನಿಜಕ್ಕೂ ಸೊಗಸಾಗಿದ್ದು, 35 ಎಮ್‌ಎಮ್ ಫೋಕಲ್ ಲೆಂತ್ ರೇಂಜ್ ಅನ್ನು ಒದಗಿಸುತ್ತದೆ.

ಫ್ಯುಜಿಫಿಲ್ಮ್ X100T

ಬೆಸ್ಟ್ ಪ್ರೀಮಿಯಮ್ ಕ್ಯಾಮೆರಾ

ಹಳೆಯ ಮಾದರಿಯ 'ರೆಟ್ರೊ' ಮಾದರಿಯನ್ನು ಕಾಣಬಹುದಾಗಿದ್ದು f2.0 ಲೆನ್ಸ್ ಮತ್ತು ಸಾಂಪ್ರದಾಯಿಕ ಬಾಹ್ಯ ನಿಯಂತ್ರಣಗಳನ್ನು ಇದು ಹೊಂದಿದೆ. ಶಟರ್ ಸ್ಪೀಡ್ ಮತ್ತು ಲೆನ್ಸ್ ಅಪಾರ್ಚರ್ ಸೊಗಸಾಗಿದೆ.

ನಿಕೋನ್ D810

ಬೆಸ್ಟ್ ಡಿಜಿಟಲ್ ಎಸ್‌ಎಲ್‌ಆರ್ ಪ್ರೊಫೆಶನಲ್

ಮೂಲ 36-MP ನಿಕೋನ್ D800 ಉತ್ತಮ ಯೋಜಿತ ನವೀಕರಣವಾಗಿದೆ ನಿಕೋನ್ D810. ಉತ್ತಮ ಚಿತ್ರಗಳ ಪೂರೈಕೆಯಲ್ಲಿ ಈ ಕ್ಯಾಮೆರಾ ಕಮಾಲು ಮೆಚ್ಚಲೇಬೇಕು. ಲ್ಯಾಂಡ್ ಸ್ಕೇಪ್ ಮತ್ತು ಮೈಕ್ರೊ ಫೋಟೋಗ್ರಫಿಗೆ ಈ ಕ್ಯಾಮೆರಾ ಹೇಳಿಮಾಡಿಸಿರುವಂಥದ್ದಾಗಿದೆ.

ಲಿಟ್ರೋಲಿಯಮ್

ಬೆಸ್ಟ್ ಇಮೇಜಿಂಗ್ ಇನ್ನೊವೇಶನ್

ಇದು ಬಳಸಲು ಅತ್ಯಂತ ಸರಳವಾಗಿದೆ. ಇದೊಂದು ಲೈಟ್ ಫೀಲ್ಡ್ ಕ್ಯಾಮೆರಾ ಆಗಿದ್ದು ನೀವು ಚಿತ್ರ ತೆಗೆದ ನಂತರವೂ ರೀಫೋಕಸ್ ಮಾಡುವ ಗುಣ ಈ ಕ್ಯಾಮೆರಾಕ್ಕಿದೆ.

Leica T (typ 701)

ಬೆಸ್ಟ್ ವಿನ್ಯಾಸ

ಇದು ತನ್ನ ಆರಂಭ ಹಂತದಲ್ಲೇ ಟೆಲಿಫೋಟೋ ಜೂಮ್ ಅನ್ನು ಬಿಡುಗಡೆ ಮಾಡಿದ್ದು, ಇದರ ಸೂಪರ್ ವೈಡ್ ಆಂಗಲ್ ಜೂಮ್ ಫೋಟೋ ತೆಗೆಯುವಲ್ಲಿ ಸಹಕಾರಿಯಾಗಿದೆ.

ನಿಕೋನ್ D5500

ಬೆಸ್ಟ್ ಡಿಜಿಟಲ್ ಎಸ್‌ಎಲ್‌ಆರ್ ಎಂಟ್ರಿ ಲೆವೆಲ್

ಇದು 24MP ಸೆನ್ಸಾರ್ ಅನ್ನು ಹೊಂದಿದ್ದು ಹೆಚ್ಚು ರೆಸಲ್ಯೂಶನ್ ಫೋಟೋಗಳನ್ನು ನೀಡುವಲ್ಲಿ ಹೇಳಿ ಮಾಡಿಸಿರುವಂತಹ ಕ್ಯಾಮೆರಾ ಆಗಿದೆ. ಇದರಲ್ಲಿ ಬ್ರೈಟ್‌ನೆಸ್ ಅನ್ನು ಏರಿಸಬಹುದಾಗಿದ್ದು ವೈಫೈ ಮತ್ತು ಎನ್‌ಎಫ್‌ಸಿಯನ್ನು ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
TIPA awards are only given to products which have been tested and reviewed by the magazines, and are voted on annually by TIPA members. Here are some of this year's winners.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot