ಮೈಕ್ರೋಸಾಫ್ಟಿನ ಹೊಸ ಕ್ಲೌಡ್ ಸೇವೆ - ಡೈನಮಿಕ್ 365 - ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

|

ತಂತ್ರಜ್ಞಾನ ಪ್ರಪಂಚದ ದೊಡ್ಡ ದೊಡ್ಡ ಹೆಸರುಗಳಿಂದು ಉದ್ಯಮ ಕೇಂದ್ರಿತ ಸಾಫ್ಟ್ ವೇರ್ ಸೇವೆಗಳತ್ತ ಗಮನ ಕೇಂದ್ರೀಕರಿಸಿವೆ. ಫೇಸ್ ಬುಕ್ ಇತ್ತೀಚೆಗೆ ಉದ್ದಿಮೆದಾರರಿಗಾಗಿ ಫೇಸ್ ಬುಕ್ ವರ್ಕ್ ಪ್ಲೇಸ್ ಅನ್ನು ಪರಿಚಯಿಸಿದೆ, ಕೆಲಸದ ಸ್ಥಳದಲ್ಲಿ ಉತ್ತಮ ಕಾರ್ಯದಕ್ಷತೆಯ ಸಲುವಾಗಿ.

ಮೈಕ್ರೋಸಾಫ್ಟಿನ ಹೊಸ ಕ್ಲೌಡ್ ಸೇವೆ - ಡೈನಮಿಕ್ 365

ಈಗ ಮೈಕ್ರೋಸಾಫ್ಟ್ ಡೈನಮಿಕ್ 365 ಎಂಬ ಹೊಸ ಕ್ಲೌಡ್ ಸೇವೆಯನ್ನು ಪರಿಚಯಿಸಿದೆ. ಇದು 135 ದೇಶಗಳಲ್ಲಿ 40ಕ್ಕೂ ಅಧಿಕ ಭಾಷೆಗಳಲ್ಲಿ ನವೆಂಬರ್ 1ರಿಂದ ಲಭ್ಯವಾಗಲಿದೆ.

ಓದಿರಿ: ಫೋನ್‌ನಲ್ಲಿ ಕಾಂಟ್ಯಾಕ್ಟ್ ಸೇವ್ ಆಗಿಲ್ಲದಿದ್ದರೂ, ವಾಟ್ಸಾಪ್ ಮೆಸೇಜ್‌ ಸೆಂಡ್ ಹೇಗೆ?

ಉನ್ನತ ತಂತ್ರಜ್ಞಾನವಿರುವ ಮತ್ತು ಕಲಿಯಬಲ್ಲ ಯಂತ್ರಗಳಿರುವ ಡೈನಮಿಕ್ಸ್ 365 ಕ್ಲೌಡ್ ಸೇವೆಯು ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರರಿಗೆ ಅನುಕೂಲಕರವಾಗಲಿದೆ.

ಓದಿರಿ: ಡಿಸೆಂಬರ್ 3'ರ ಒಳಗೆ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿಸಿದವರೇ ಜಾಣರು!

ಈ ಕ್ಲೌಡ್ ಸೇವೆಯ ಬಗ್ಗೆ ನಿಮಗೆ ತಿಳಿದಿರಬೇಕಾದ ಐದು ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏನಿದು ಮೈಕ್ರೋಸಾಫ್ಟ್ ಡೈನಮಿಕ್ಸ್ 365?

ಏನಿದು ಮೈಕ್ರೋಸಾಫ್ಟ್ ಡೈನಮಿಕ್ಸ್ 365?

ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಒಂದು ಕ್ಲೌಡ್ ಸೇವೆ. ಇದರಲ್ಲಿ ಕಸ್ಟಮರ್ ರಿಲೇಷನ್ ಶಿಪ್ ಮ್ಯಾನೇಜ್ ಮೆಂಟ್ ಸಾಫ್ಟ್ ವೇರ್ (ಸಿ.ಆರ್.ಎಂ) ಮತ್ತು ಎಂಟರ್ ಪ್ರೈಸ್ ರಿಸೋರ್ಸ್ ಮ್ಯಾನೇಜ್ ಮೆಂಟ್ ಸಾಫ್ಟ್ ವೇರ್ (ಇ.ಆರ್.ಪಿ) ಜೊತೆಯಾಗಿದೆ.

ಮೈಕ್ರೋಸಾಫ್ಟ್ ಡೈನಮಿಕ್ಸ್ ಪೂರ್ಣ ಪ್ರಮಾಣದ ಸಾಫ್ಟ್ ವೇರ್ ಸೇವೆಗಳನ್ನು ನೀಡಲಿದೆ, ಉದ್ದಿಮೆದಾರರಿಗೆ ಮತ್ತು ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ. ಗ್ರಾಹಕರ ಜೊತೆಗೆ ಸಂವಹನವನ್ನು ಉತ್ತಮಗೊಳಿಸಲು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಉದ್ದಿಮೆದಾರರಿಗೆ ಸಾಧ್ಯವಾಗಲಿದೆ.

ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಏನು ಮಾಡುತ್ತದೆ?

ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಏನು ಮಾಡುತ್ತದೆ?

ಉದ್ದಿಮೆಯ ಅಗತ್ಯಗಳಾದ ಸೇಲ್ಸ್ ಆಟೋಮೇಷನ್, ಗ್ರಾಹಕ ಸೇವೆಯನ್ನು ಮೈಕ್ರೋಸಾಫ್ಟ್ ನ ಹೊಸ ಕ್ಲೌಡ್ ಸೇವೆ ಸುಲಭವಾಗಿಸುತ್ತದೆ. ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಉತ್ಪಾದನೆ ಮತ್ತು ಉತ್ಪನ್ನದ ಹಂಚಿಕೆಯ ನಡುವಿನ ಬಂಧವನ್ನು ಸುಲಭವಾಗಿಸುತ್ತದೆ, ಸೇವೆಯನ್ನು ಮತ್ತಷ್ಟು ದಕ್ಷವಾಗಿಸುತ್ತದೆ, ಮಾರಾಟ ಹೆಚ್ಚುತ್ತದೆ ಮತ್ತು ಗ್ರಾಹಕ ಸ್ನೇಹಿಯಾಗುತ್ತದೆ.

ಓದಿರಿ:ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ವೆಲ್ಕಮ್ ಆಫರ್ ಡಿಸೆಂಬರ್ 3 ಕ್ಕೆ ಅಂತ್ಯ

ಇತರೆ ಸೇವೆಗಳ ಜೊತೆಗೆ ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಕಾರ್ಯನಿರ್ವಹಿಸುತ್ತದೆ.

ಇತರೆ ಸೇವೆಗಳ ಜೊತೆಗೆ ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಕಾರ್ಯನಿರ್ವಹಿಸುತ್ತದೆ.

ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಮೈಕ್ರೋಸಾಫ್ಟ್ ಆಫೀಸ್, ಸ್ಕೈಪ್ ಮತ್ತು ಯಾಮರ್ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸುತ್ತದೆ, ನಿಮ್ಮ ಕಾರ್ಪೊರೇಟ್ ತಂಡಗಳೊಡನೆ ನಿರಂತರ ಸಂಪರ್ಕದಲ್ಲಿರಬಹುದು. ಉದ್ದಿಮೆಗಳಿಗೆ ಈ ದಿನಗಳಲ್ಲಿ ಅವಶ್ಯಕವಾಗಿರುವ ಸಂಪರ್ಕ ಮತ್ತು ಸಂವಹನವನ್ನು ಯಾವುದೇ ಸಾಧನದ ಮೂಲಕ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಎರಡು ಆವೃತ್ತಿಗಳು.

ಎರಡು ಆವೃತ್ತಿಗಳು.

ಮೈಕ್ರೋಸಾಫ್ಟಿನ ಹಿಂದಿನ ಸೇವೆಗಳಂತೆ, ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಎರಡು ಆವೃತ್ತಿಗಳಲ್ಲಿ ಲಭ್ಯವಾಗಲಿದೆ - ಎಂಟರ್ ಪ್ರೈಸ್ ಮತ್ತು ಬ್ಯುಸಿನೆಸ್ - ಒಂದು ಆ್ಯಪ್/ಒಬ್ಬ ಬಳಕೆದಾರರಿಗೆ ಇಷ್ಟೆಂದು ಮೊತ್ತ ಪಾವತಿಸಬೇಕು. ಆ್ಯಪ್ ಆಧಾರಿತವಾಗಿ ಹಣ ನೀಡುವುದರಿಂದ ತಮಗೆ ಬೇಕಾದ ತಂತ್ರಾಂಶಕ್ಕಷ್ಟೇ ಉದ್ದಿಮೆದಾರರು ಹಣ ಪಾವತಿಸಬೇಕು.

ಮೈಕ್ರೋಸಾಫ್ಟಿನ ಪ್ರಕಾರ, ಮೈಕ್ರೋಸಾಫ್ಟ್ ಡೈನಮಿಕ್ಸ್ 365ಗೆ ಈಗಿರುವ ಸಿ.ಆರ್.ಎಂ ಸೇವೆಗೆ ವೆಚ್ಚವಾಗುವ ಹಣಕ್ಕಿಂತ ನಾಲ್ಕರಿಂದ ಐದರಷ್ಟು ಪಟ್ಟು ಕಡಿಮೆ ಹಣ ವ್ಯಯವಾಗುತ್ತದೆ.

ಮೈಕ್ರೋಸಾಫ್ಟ್ ಡೈನಮಿಕ್ಸ್ 365ಗೆ ಇರುವ ಸವಾಲುಗಳು.

ಮೈಕ್ರೋಸಾಫ್ಟ್ ಡೈನಮಿಕ್ಸ್ 365ಗೆ ಇರುವ ಸವಾಲುಗಳು.

ಮೈಕ್ರೋಸಾಫ್ಟ್ ಕಳೆದ ಕೆಲವು ಸಮಯದಿಂದ ಮೈಕ್ರೋಸಾಫ್ಟ್ ಡೈನಮಿಕ್ಸ್ 365 ಕುರಿತು ಕೆಲಸ ಮಾಡುತ್ತಿತ್ತು. ಈಗದು ಸಂಪೂರ್ಣ ಸಿದ್ಧವಾಗಿರುವಾಗ ಈ ಉದ್ದಿಮೆಯಲ್ಲಿ ಜನಪ್ರಿಯ ಕಂಪನಿಗಳಾದ ಸೇಲ್ಸ್ ಫೋರ್ಸ್, ಒರಾಕಲ್ ಮತ್ತು ಎಸ್.ಎ.ಪಿ ಜೊತೆಗೆ ಸ್ಫರ್ಧಿಸಬೇಕು.

ಮೈಕ್ರೋಸಾಫ್ಟ್ ಡೈನಮಿಕ್ಸ್ 365ನ ವಿನ್ಯಾಸವನ್ನು ಫ್ರಂಟ್ ಮತ್ತು ಬ್ಯಾಕ್ ಆಫೀಸ್ ಪ್ರೊಸೆಸಸ್ ಅನ್ನು ನಿಭಾಯಿಸಲು ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಳ್ಳುತ್ತದೆ.

ನಿಮ್ಮದೇ ಏರ್‌ಟೆಲ್ ಸಂಖ್ಯೆಗೆ 3ಜಿಬಿ ನಿಮ್ಮದೇ ಏರ್‌ಟೆಲ್ ಸಂಖ್ಯೆಗೆ 3ಜಿಬಿ "ಫ್ರಿ" ಇಂಟರ್ನೆಟ್ ಪಡೆದುಕೊಳ್ಳಲು ಹೀಗೆ ಮಾಡಿ

Best Mobiles in India

Read more about:
English summary
Microsoft has announced the roll out of its latest service- Dynamics 365. Here's everything you need to know about the new cloud service.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X